
ರಾಯಚೂರು, 03 ಜನವರಿ (ಹಿ.ಸ.) :
ಆ್ಯಂಕರ್ : ಕಲ್ಯಾಣ ಕರ್ನಾಟಕ ಭಾಗದ ಉತ್ತಮ ಸಹಕಾರ ಧುರೀಣರು ಹಾಗೂ ರಾಯಚೂರು ಒಕ್ಕಲುತನ ಹುಟ್ಟುವಳಿ ಹಾಗೂ ಸಂಸ್ಕರಣ ಸಹಕಾರ ಸಂಘದ ಅಧ್ಯಕ್ಷರಾದ ಪತಂಗೆ ಜಯವಂತರಾವ್ ಅವರಿಗೆ, ಬೆಂಗಳೂರಿನ ಜಿಕೆವಿಕೆ ಅವವರಣದಲ್ಲಿನ ಕೃಷಿ ವಿಜ್ಞಾನಗಳ ವಿಶ್ವವಿದ್ಯಾಲಯದ ಅಂತಾರಾಷ್ಟ್ರೀಯ ಸಮ್ಮೇಳನ ಕೇಂದ್ರದಲ್ಲಿ ಇತ್ತೀಚೆಗೆ ನಡೆದ ಬೃಹತ್ ಸಹಕಾರಿ ಮತ್ತು ರೈತ ಸಮಾವೇಶದಲ್ಲಿ (ಇಪ್ಕೋ) ಅಧ್ಯಕ್ಷ ದಿಲೀಪ್ ಸಂಘಾನಿ ಹಾಗೂ ವ್ಯವಸ್ಥಾಪಕ ನಿರ್ದೇಶಕ ಕೆ.ಜೆ. ಪಟೇಲ್ ಅವರು ಉತ್ತಮ ಸಹಕಾರಿ ಪ್ರಶಸ್ತಿ ನೀಡಿ ಗೌರವಿಸಿದರು.
ಈ ಸಂದರ್ಭದಲ್ಲಿ (ಇಪ್ಕೋ) ಅಧ್ಯಕ್ಷರಾದ ದಿಲೀಪ್ ಸಂಘಾನಿ ಅವರು ಮಾತನಾಡಿ, ಕರ್ನಾಟಕ ರಾಜ್ಯ ಸಹಕಾರ ಮಾರಾಟ ಮಹಾಮಂಡಳ ಬೆಂಗಳೂರು ಹಾಗೂ ನಾಫೇಡ್ ನವದೆಹಲಿ ಅಂತಾರಾಷ್ಟ್ರೀಯ ಮಟ್ಟದ ಇನ್ನೀತರ ಅನೇಕ ಸಹಕಾರ ಸಂಘ ಸಂಸ್ಥೆಗಳಲ್ಲಿ ಸೇವೆ ಸಲ್ಲಿಸಿದ ಶ್ರೀ ಪತಂಗೆ ಜಯವಂತರಾವ್ ಅವರು ಸುಧೀರ್ಘ 40 ವರ್ಷಗಳಿಂದ ರೈತ ಸಹಕಾರಿ ಸಂಘ-ಸಂಸ್ಥೆಗಳಲ್ಲಿ ಅನೇಕ ವಹಿವಾಟುಗಳನ್ನು ಉತ್ತಮವಾಗಿ ನಿರ್ವಹಿಸಿದ್ದಾರೆ.
ಅಲ್ಲದೇ ಬೃಹತ್ ಕೈಗಾರಿಕೆ ಸ್ಥಾಪನೆಗೆ ಮುಂದಾಗಿ ರೈಸ್ ಮಿಲ್, ಹತ್ತಿ ಜಿನ್ನಿಂಗ್ ಮತ್ತು ಪ್ರಸ್ಸಿಂಗ್, ನೂತನ ಪೆಟ್ರೋಲ್ ಬಂಕ್ ಸ್ಥಾಪಿಸಿದ್ದಾರೆ. ಎಲ್ಲಾ ಖಾಸಗಿ ಸಂಸ್ಥೆಗಳು, ಬ್ಯಾಂಕಿಂಗ್, ಹಾಲಿನ ಉತ್ಪನ್ನ ಮಾರಾಟ, ರಸಗೊಬ್ಬರ, ಕ್ರಿಮಿನಾಶಕ, ಬೀಜೋತ್ಪನ್ನಗಳು ಇನ್ನು ಅನೇಕ ಕ್ಷೇತ್ರಗಳಲ್ಲಿ ದೊಡ್ಡಮಟ್ಟದಲ್ಲಿ ವಿಸ್ತರಣೆಗೊಂಡರು ಅವುಗಳಿಗೆ ಸವಾಲೆಸೆಯುವ ರೀತಿಯಲ್ಲಿ ಸಹಕಾರಿ ಕ್ಷೇತ್ರ ಬೆಳವಣಿಗೆಗೆ ಶ್ರಮಿಸಿದ್ದಾರೆ.
ಇವರು ಸಹಕಾರಿ ರಂಗದ ಗ್ರಾಮೀಣ ಜನರ ಒಡನಾಡಿಯಾಗಿ ಕೆಲಸ ಮಾಡುತ್ತಿದ್ದಾರೆ. ಸಾಲಶೂಲಕ್ಕೆ ಬದಲಾಗಿ ಉದ್ಯಮಕ್ಕೆ ಹೆಚ್ಚಿನ ಆದ್ಯತೆ ನೀಡುವ ಮೂಲಕ ಹೊಸತನದೊಂದಿಗೆ ಆರ್ಥಿಕ ಸಂಕಷ್ಟ ಎದುರಿಸುತ್ತಿರುವ ಜನರಿಗೆ ಸ್ಪಂದಿಸುವ ಕೆಲಸವನ್ನು ಮಾಡಲು ಪ್ರಯತ್ನಿಸುತ್ತಿದ್ದಾರೆ ಎಂದು ತಿಳಿಸಿದರು.
ಆಡಳಿತ ಮಂಡಳಿಯಿಂದ ಅಭಿನಂದನೆ: ಇಂಡಿಯನ್ ಫಾರ್ಮಸ್ ಫರ್ಟಿಲೈಸರ್ ಕೋ ಅಫರೇಟೀವ್ ಲಿಮಿಟೆಡ್ (ಇಪ್ಕೋ) ಭಾರತದಲ್ಲಿ ಮಾತ್ರವಲ್ಲದೇ ಜಾಗತೀಕ ಮಟ್ಟದಲ್ಲಿಯೂ ಮುಂಚೂಣಿಯಲ್ಲಿರುವ ಸಹಕಾರ ಸಂಸ್ಥೆಯಾಗಿದೆ. ದೇಶದಾದ್ಯಂತ 40,000ಕ್ಕೂ ಹೆಚ್ಚು ಸಹಕಾರಿ ಸಂಘಗಳ ಮೂಲಕ ಲಕ್ಷಾಂತರ ರೈತರ ಸ್ವಾಮ್ಯದಲ್ಲಿರುವ ಸಂಪೂರ್ಣ ಸಹಕಾರ ಸಂಸ್ಥೆಯಾದ ಇಪ್ಕೊ ಸಹಕಾರಿ ಸಂಸ್ಥೆಯಿಂದ ಅಂತಾರಾಷ್ಟ್ರೀಯ ಸಹಕಾರಿ ವರ್ಷ-2025ರ ಅಂಗವಾಗಿ ಬೆಂಗಳೂರಿನಲ್ಲಿ ನಡೆದ ಬೃಹತ್ ಸಹಕಾರಿ ಮತ್ತು ರೈತ ಸಮಾವೇಶದಲ್ಲಿ ರಾಯಚೂರು ಸೇರಿದಂತೆ ಕರ್ನಾಟಕದ ಸುಮಾರು 3,500 ಸಹಕಾರಿಗಳು ಮತ್ತು ರೈತರು ಭಾಗವಹಿಸಿದ್ದರು.
ಇಂತಹ ಮಹಾನ್ ವೇದಿಕೆಯಲ್ಲಿ ಸಹಕಾರಿ ಕ್ಷೇತ್ರದ ಬೆಳವಣಿಗೆಗೆ ಕಾರಣಿಕರ್ತರಾದ ಪತಂಗೆ ಜಯವಂತರಾವ್ ಅವರಿಗೆ ಉತ್ತಮ ಸಹಕಾರಿ ಪ್ರಶಸ್ತಿ ಪ್ರದಾನ ಮಾಡಿದ್ದು ಸಂತಸ ತಂದಿದೆ. ಇಂತಹ ಗೌರವಕ್ಕೆ ಪತ್ರಾರಾಗಿ ರಾಯಚೂರು ಜಿಲ್ಲೆಯ ಕೀರ್ತಿ ಹಬ್ಬಿಸಿದ ಪತಂಗೆ ಜಯವಂತರಾವ್ ಅವರಿಗೆ ರಾಯಚೂರು ಒಕ್ಕಲುತನ ಹುಟ್ಟುವಳಿ ಮಾರಾಟ ಹಾಗೂ ಸಂಸ್ಕರಣ ಸಹಕಾರ ಸಂಘದ ಆಡಳಿತ ಮಂಡಳಿ ಹಾಗೂ ಸಿಬ್ಬಂದಿಯು ಅಭಿನಂದಿಸುತ್ತಿದೆ ಎಂದು ಸಂಘದ ಉಪಾಧ್ಯಕ್ಷರಾದ ಶಶಿಧರ ಪಾಟೀಲ್ ಅವರು ತಿಳಿಸಿದ್ದಾರೆ.
ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್