ಮಹಾತ್ಮ ಗಾಂಧಿ ಬಗ್ಗೆ ಮಾತನಾಡುವ ನೈತಿಕತೆ ಕಳೆದುಕೊಂಡ ಬಿಜೆಪಿ : ಶಿವಕುಮಾರ್
ಬೆಂಗಳೂರು, 03 ಜನವರಿ (ಹಿ.ಸ.) : ಆ್ಯಂಕರ್ : ಬಿಜೆಪಿ ನಾಯಕರು ಮಹಾತ್ಮಾ ಗಾಂಧೀಜಿ ಬಗ್ಗೆ ಮಾತನಾಡುವ ನೈತಿಕ ಹಕ್ಕು ಕಳೆದುಕೊಂಡಿದ್ದಾರೆ ಎಂದು ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ತೀವ್ರ ವಾಗ್ದಾಳಿ ನಡೆಸಿದರು. ಬೆಂಗಳೂರಿನಲ್ಲಿ ಮಾಧ್ಯಮಗಳಿಗೆ ಮಾತನಾಡಿದ ಅವರು, ಗಾಂಧೀಜಿ ಹೆಸರನ್ನು ಯೋಜನೆಗಳಿಂದ ತೆಗ
ಮಹಾತ್ಮ ಗಾಂಧಿ ಬಗ್ಗೆ ಮಾತನಾಡುವ ನೈತಿಕತೆ ಕಳೆದುಕೊಂಡ ಬಿಜೆಪಿ : ಶಿವಕುಮಾರ್


ಬೆಂಗಳೂರು, 03 ಜನವರಿ (ಹಿ.ಸ.) :

ಆ್ಯಂಕರ್ : ಬಿಜೆಪಿ ನಾಯಕರು ಮಹಾತ್ಮಾ ಗಾಂಧೀಜಿ ಬಗ್ಗೆ ಮಾತನಾಡುವ ನೈತಿಕ ಹಕ್ಕು ಕಳೆದುಕೊಂಡಿದ್ದಾರೆ ಎಂದು ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ತೀವ್ರ ವಾಗ್ದಾಳಿ ನಡೆಸಿದರು.

ಬೆಂಗಳೂರಿನಲ್ಲಿ ಮಾಧ್ಯಮಗಳಿಗೆ ಮಾತನಾಡಿದ ಅವರು, ಗಾಂಧೀಜಿ ಹೆಸರನ್ನು ಯೋಜನೆಗಳಿಂದ ತೆಗೆದುಹಾಕಿರುವ ಬಿಜೆಪಿ, ಅವರ ಫೋಟೋ ಕಚೇರಿಗಳಲ್ಲಿ ಇಡುವ ಅರ್ಹತೆಯನ್ನೂ ಕಳೆದುಕೊಂಡಿದೆ ಎಂದರು.

ಗಾಂಧೀಜಿ ಸ್ವಾತಂತ್ರ್ಯ ಹೋರಾಟಕ್ಕೆ ನೇತೃತ್ವ ವಹಿಸಿದ ಶತಮಾನೋತ್ಸವದ ಸಂದರ್ಭದಲ್ಲಿ ಅವರ ಹೆಸರನ್ನು ಅಳಿಸುವುದು ಮತ್ತೊಮ್ಮೆ ಅವರ ಕೊಲೆ ಮಾಡಿದಂತೆ ಎಂದು ಆರೋಪಿಸಿದರು.

ವಿಬಿ–ಜಿ ರಾಮ್ ಜಿ ಮಸೂದೆ ರಾಜ್ಯದ ಕೂಲಿ ಕಾರ್ಮಿಕರು, ರೈತರು ಹಾಗೂ ಗ್ರಾಮೀಣ ಅಭಿವೃದ್ಧಿಗೆ ಮಾರಕವಾಗಿದ್ದು, ಕೇಂದ್ರ ಸರ್ಕಾರ ಹಿಂಪಡೆಯುವವರೆಗೆ ಪಕ್ಷಾತೀತ ಹೋರಾಟ ನಡೆಸಲಾಗುವುದು ಎಂದು ಘೋಷಿಸಿದರು.

ಪ್ರತಿ ಪಂಚಾಯ್ತಿಯಿಂದ ರಾಜ್ಯ ಮಟ್ಟದವರೆಗೆ ಸಮಾವೇಶ ಹಾಗೂ ಗ್ರಾಮಸಭೆಗಳ ಮೂಲಕ ಆಂದೋಲನ ರೂಪಿಸಲಾಗುವುದು ಎಂದರು.

ಈ ಹೊಸ ಮಸೂದೆ ಮನರೇಗಾ ಮೂಲಕ ದೊರಕುತ್ತಿದ್ದ ವಸತಿ, ಕೃಷಿ, ತೋಟಗಾರಿಕೆ, ಮೀನುಗಾರಿಕೆ ಹಾಗೂ ಮೂಲಸೌಕರ್ಯ ಕಾಮಗಾರಿಗಳ ಅವಕಾಶಗಳನ್ನು ಕಸಿದುಕೊಂಡಿದೆ ಎಂದು ಕಿಡಿಕಾರಿದರು.

ಪಂಚಾಯ್ತಿಗಳ ಅಧಿಕಾರ ಕಸಿದುಕೊಂಡು ಕಾಮಗಾರಿಗಳನ್ನು ಗುತ್ತಿಗೆದಾರರ ಕೈಗೆ ಒಪ್ಪಿಸಿರುವುದು ಗ್ರಾಮೀಣ ಬದುಕಿಗೆ ದೊಡ್ಡ ಅಪಾಯ ಎಂದರು.

ಹಿಂದೂಸ್ತಾನ್ ಸಮಾಚಾರ್ / Rakesh Mahadevappa


 rajesh pande