
ರಾಯಚೂರು, 03 ಜನವರಿ (ಹಿ.ಸ.) :
ಆ್ಯಂಕರ್ : ಪ್ರಾಯೋಜಕತ್ವ ಯೋಜನೆಯ ಮಾರ್ಗಸೂಚಿಯನ್ವಯ ಶೈಕ್ಷಣಿಕ ಪ್ರೋತ್ಸಾಹ ಧನ ಪಡೆಯಲು ಅರ್ಹ ಮಕ್ಕಳಿಂದ ಅರ್ಜಿ ಆಹ್ವಾನಿಸಲಾಗಿದೆ.
ಬಾಲಕ/ಬಾಲಕಿಯರು 18 ವರ್ಷದೊಳಗಿನವರಾಗಿರಬೇಕು. ವಾರ್ಷಿಕ ಆದಾಯ ನಗರ ಪ್ರದೇಶ ರೂ.96,000 ಗ್ರಾಮೀಣ ಪ್ರದೇಶದಲ್ಲಿ ರೂ.72,000 ಮೀರಿರಬಾರದು. ತಾಯಿ ಒಬ್ಬರೇ ಇರುವ/ವಿಧವೆ ಮಕ್ಕಳು, ಮಕ್ಕಳು ಅನಾಥವಾಗಿದ್ದರೆ ಹಾಗೂ ವಿಸ್ತøತ ಕುಟುಂಬದೊಂದಿಗೆ ವಾಸಿಸುತ್ತಿದ್ದರೆ ಹಾಗೂ ಕುಷ್ಠರೋಗ/ಹೆಚ್‍ಐವಿ ಸೋಂಕಿತ ಪೋಷಕರ ಮಕ್ಕಳು ಮತ್ತು ಕುಟುಂಬಕ್ಕೆ ಆಧಾರವಾಗಿದ್ದ ಪೋಷಕರು ಜೈಲಿನಲ್ಲಿದ್ದರೆ(ಸಜೆಯಾಗಿದ್ದರೆ) ಅಂತಹ ಕುಟುಂಬದ ಮಕ್ಕಳು ಹಾಗೂ ಸತತವಾಗಿ 6 ತಿಂಗಳವರೆಗೆ ಮಕ್ಕಳ ಪಾಲನಾ ಸಂಸ್ಥೆಗಳಲ್ಲಿ ಆಶ್ರಯ ಪಡೆದಿರುವ ಮಕ್ಕಳು ಅರ್ಜಿ ಸಲ್ಲಿಸಬಹುದಾಗಿದೆ.
ಮಗುವಿನ 2 ಭಾವಚಿತ್ರಗಳು, ತಂದೆ/ತಾಯಿ ಮರಣ ಪ್ರಮಾಣ ಪತ್ರ, ಮಗುವಿನ ಶಾಲಾ ದೃಢೀಕರಣ ಪ್ರಮಾಣ ಪತ್ರ, ಮಗುವಿನ ಆಧಾರ ಕಾರ್ಡ್, ಮಗುವಿನ ಬ್ಯಾಂಕ್ ಖಾತೆ ಪುಸ್ತಕ, ತಾಯಿ/ಪೋಷಕರ ಆಧಾರ ಕಾರ್ಡ್, ಪಡಿತರ (ರೇಶನ್) ಕಾರ್ಡ್, ಮಗುವಿನ ಜಾತಿ ಮತ್ತು ಆದಾಯ ಪ್ರಮಾಣ ಪತ್ರ ಅರ್ಜಿ ಜೊತೆಗೆ ಸಲ್ಲಿಸಬೇಕು.
ಆಯಾ ತಾಲೂಕ ಶಿಶು ಅಭಿವೃದ್ಧಿ ಯೋಜನಾಧಿಕಾರಿಗಳು/ತಾಲೂಕು ಮಕ್ಕಳ ರಕ್ಷಣಾಧಿಕಾರಿಗಳ, ಕಾರ್ಯಾಲಯ ಅಥವಾ ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿಗಳ ಕಾರ್ಯಲಯ, ಆಜಾದನಗರ, ರಾಯಚೂರುನಲ್ಲಿ ದಿನಾಂಕ 16-01-2026ರೊಳಗಾಗಿ ಅರ್ಜಿ ಸಲ್ಲಿಸಲು ಕೋರಲಾಗಿದೆ.
ಹೆಚ್ಚಿನ ಮಾಹಿತಿಗಾಗಿ ದೂರವಾಣಿ ಸಂಖ್ಯೆ-08532-226226ಗೆ ಸಂಪರ್ಕಿಸಬಹುದಾಗಿದೆ ಎಂದು ಜಿಲ್ಲಾ ಮಕ್ಕಳ ರಕ್ಷಣಾ ಘಟಕದ ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿಗಳು ತಿಳಿಸಿದ್ದಾರೆ.
ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್