ಮಹತ್ವದ ಮಾನವ ಹಾರಾಟಕ್ಕೆ ನಾಸಾ ಸಜ್ಜು
ವಾಷಿಂಗ್ಟನ್, 21 ಜನವರಿ (ಹಿ.ಸ.) : ಆ್ಯಂಕರ್ : ಭೂಮಿಯ ಕಕ್ಷೆಗಿಂತ ಹೊರಗೆ ಮನುಷ್ಯರನ್ನು ಕಳುಹಿಸುವ ಐತಿಹಾಸಿಕ ಮಾನವ ಬಾಹ್ಯಾಕಾಶ ಹಾರಾಟಕ್ಕೆ ಅಮೆರಿಕದ ಬಾಹ್ಯಾಕಾಶ ಸಂಸ್ಥೆ ನಾಸಾ ಅಂತಿಮ ಸಿದ್ಧತೆಗಳನ್ನು ನಡೆಸುತ್ತಿದೆ. ಫೆಬ್ರವರಿ ಮೊದಲ ವಾರದಲ್ಲೇ ಆರ್ಟೆಮಿಸ್–2 ಮಿಷನ್ ಉಡಾವಣೆಯಾಗುವಂತೆ ನಾಸಾ ವಿ
Nasa


ವಾಷಿಂಗ್ಟನ್, 21 ಜನವರಿ (ಹಿ.ಸ.) :

ಆ್ಯಂಕರ್ : ಭೂಮಿಯ ಕಕ್ಷೆಗಿಂತ ಹೊರಗೆ ಮನುಷ್ಯರನ್ನು ಕಳುಹಿಸುವ ಐತಿಹಾಸಿಕ ಮಾನವ ಬಾಹ್ಯಾಕಾಶ ಹಾರಾಟಕ್ಕೆ ಅಮೆರಿಕದ ಬಾಹ್ಯಾಕಾಶ ಸಂಸ್ಥೆ ನಾಸಾ ಅಂತಿಮ ಸಿದ್ಧತೆಗಳನ್ನು ನಡೆಸುತ್ತಿದೆ.

ಫೆಬ್ರವರಿ ಮೊದಲ ವಾರದಲ್ಲೇ ಆರ್ಟೆಮಿಸ್–2 ಮಿಷನ್ ಉಡಾವಣೆಯಾಗುವಂತೆ ನಾಸಾ ವಿಜ್ಞಾನಿಗಳು ತೀವ್ರವಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ.

ಫೆಬ್ರವರಿಯಲ್ಲಿ ಉಡಾವಣೆ ಸಾಧ್ಯವಾಗದಿದ್ದಲ್ಲಿ, ಯಾವುದೇ ಬೆಲೆಯನ್ನೂ ಲೆಕ್ಕಿಸದೆ ಏಪ್ರಿಲ್‌ನಲ್ಲಿ ಮಿಷನ್ ಉಡಾವಣೆ ಮಾಡುವ ನಿರ್ಧಾರಕ್ಕೆ ನಾಸಾ ಮುಂದಾಗಿದೆ.

ನಾಸಾದ ಅಧಿಕೃತ ವೆಬ್‌ಸೈಟ್ ಮಾಹಿತಿ ಪ್ರಕಾರ, ಆರ್ಟೆಮಿಸ್–2 ಗಗನಯಾತ್ರಿಗಳನ್ನು ಇದುವರೆಗೂ ಮಾನವ ಬಾಹ್ಯಾಕಾಶ ಹಾರಾಟದಲ್ಲಿ ಸಾಧಿಸಲಾದ ಅತಿ ದೂರದ ಪ್ರಯಾಣಕ್ಕೆ ಕರೆದೊಯ್ಯಲಿದೆ. ಇದು ಮಾನವ ಇತಿಹಾಸದಲ್ಲಿ ಮಹತ್ವದ ಮೈಲುಗಲ್ಲಾಗಲಿದೆ ಎಂದು ನಾಸಾ ತಿಳಿಸಿದೆ.

ಈ ಕುರಿತು ಮಾಹಿತಿ ನೀಡಿರುವ ನಾಸಾ ಆಡಳಿತಾಧಿಕಾರಿ ಜೇರೆಡ್ ಐಸಾಕ್‌ಮನ್,

“ಆರ್ಟೆಮಿಸ್–2 ಮಾನವ ಬಾಹ್ಯಾಕಾಶ ಹಾರಾಟದಲ್ಲಿ ಇದುವರೆಗಿನ ಅತಿದೊಡ್ಡ ಹೆಜ್ಜೆ. ಈ ಐತಿಹಾಸಿಕ ಕಾರ್ಯಾಚರಣೆ ಮನುಷ್ಯರನ್ನು ಭೂಮಿಯಿಂದ ಹಿಂದೆಂದಿಗಿಂತಲೂ ದೂರ ಕರೆದೊಯ್ಯಲಿದೆ. ಚಂದ್ರನಿಗೆ ಮರಳಲು ಅಗತ್ಯವಿರುವ ಅಮೂಲ್ಯ ಜ್ಞಾನವನ್ನು ಈ ಮಿಷನ್ ಒದಗಿಸಲಿದೆ. ಈ ಎಲ್ಲ ಸಾಧನೆಗೆ ಅಮೆರಿಕ ಮುನ್ನಡೆಸಲಿದೆ,” ಎಂದು ಹೇಳಿದ್ದಾರೆ.

ಆರ್ಟೆಮಿಸ್–2 ಮಿಷನ್ ಚಂದ್ರನ ಮೇಲೆ ಸುಸ್ಥಿರ ಮಾನವ ಉಪಸ್ಥಿತಿ ನಿರ್ಮಾಣದ ದಿಕ್ಕಿನಲ್ಲಿ ಹಾಗೂ ಭವಿಷ್ಯದಲ್ಲಿ ಅಮೆರಿಕನ್ನರನ್ನು ಮಂಗಳ ಗ್ರಹಕ್ಕೆ ಕಳುಹಿಸುವ ನಾಸಾದ ದೀರ್ಘಕಾಲೀನ ಗುರಿಯನ್ನು ಪ್ರತಿನಿಧಿಸುತ್ತದೆ ಎಂದು ಹೇಳಿದ್ದಾರೆ.

ನಾಸಾ ವೆಬ್‌ಸೈಟ್ ಪ್ರಕಾರ, ಚಂದ್ರನು ಭೂಮಿಯಿಂದ ಸರಾಸರಿ 41,541 ಮೈಲುಗಳಷ್ಟು ದೂರದಲ್ಲಿದೆ. ಆದರೆ ಆರ್ಟೆಮಿಸ್–2 ಮಿಷನ್‌ಗೆ ಇದು ಕೇವಲ ಮಧ್ಯದ ನಿಲುಗಡೆಯಾಗಿದ್ದು, ಅಪೊಲೊ ಕಾರ್ಯಕ್ರಮದ ಬಳಿಕ ಮೊದಲ ಬಾರಿಗೆ ಮನುಷ್ಯರನ್ನು ಭೂಮಿಯ ಕಕ್ಷೆಯಿಂದ ಹೊರಗೆ, ಚಂದ್ರನ ಸುತ್ತ ಹಾಗೂ ಅದರಾಚೆಗೆ ಕರೆದೊಯ್ಯುವ ಗುರಿ ಹೊಂದಿದೆ.

ಆರ್ಟೆಮಿಸ್–2 ಮಿಷನ್‌ನ ಕಮಾಂಡರ್ ಆಗಿ ರೀಡ್ ವೈಸ್‌ಮನ್ ನೇಮಕವಾಗಿದ್ದಾರೆ. ಪೈಲಟ್ ಆಗಿ ವಿಕ್ಟರ್ ಗ್ಲೋವರ್, ಮಿಷನ್ ಸ್ಪೆಷಲಿಸ್ಟ್‌ಗಳಾಗಿ ಕ್ರಿಸ್ಟಿನಾ ಕೋಚ್ ಹಾಗೂ ಕೆನಡಿಯನ್ ಸ್ಪೇಸ್ ಏಜೆನ್ಸಿಯ ಜೆರೆಮಿ ಹ್ಯಾನ್ಸನ್ ತಂಡದಲ್ಲಿದ್ದಾರೆ.

ಹಿಂದೂಸ್ತಾನ್ ಸಮಾಚಾರ್ / Rakesh Mahadevappa


 rajesh pande