
ವಿಜಯಪುರ, 02 ಜನವರಿ (ಹಿ.ಸ.) :
ಆ್ಯಂಕರ್ : ಶತಮಾನದ ಸಂತ ಜ್ಞಾನ ಯೋಗಾಶ್ರಮದ ಸಿದ್ಧೇಶ್ವರ ಶ್ರೀಗಳ ಪುಣ್ಯತಿಥಿ ನಿಮಿತ್ಯ ವಿಜಯಪುರ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ ನಲ್ಲಿ ಗುರವಂದನೆ ಸಲ್ಲಿಸಲಾಯಿತು.
ಶುಕ್ರವಾರ ವಿಡಿಸಿಸಿ ಬ್ಯಾಂಕ್ ಪ್ರಧಾನ ಕಛೇರಿಯಲ್ಲಿ ಸಿದ್ಧೇಶ್ವರ ಶ್ರೀಗಳ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ ಮಾತನಾಡಿದ ವಿಡಿಸಿಸಿ ಬ್ಯಾಂಕಿನ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳಾದ ಎಸ್.ಎ.ಢವಳಗಿ, ಸಾಮಾಜಿಕ ಆರೋಗ್ಯದ ಹಿತರಕ್ಷಣೆಗಾಗಿ ಹಾಗೂ ಸಭ್ಯ ಸಮಾಜ ನಿರ್ಮಾಣಕ್ಕೆ ಸಿದ್ಧೇಶ್ವರ ಶ್ರೀಗಳ ಕೊಡುಗೆ ಅನುಕರಣೀಯ ಹಾಗೂ ಸಾರ್ವಕಾಲಿಕ ಎಂದು ಬಣ್ಣಿಸಿದರು.
ಬ್ಯಾಂಕಿನ ಡಿಜಿಎಂಗಳಾದ ಸತೀಶ ಪಾಟೀಲ, ಸುರೇಶ ಪಾಟೀಲ, ಜೆ.ಬಿ.ಪಾಟೀಲ, ಆರ್.ಎಂ.ಪಾಟೀಲ, ಪಿ.ವೈ.ಡೆಂಗಿ ಸೇರಿದಂತೆ ವಿವಿಧ ಅಧಿಕಾರಿಗಳಾದ ಆರ್.ಎಂ.ಬಣಗಾರ, ಐ.ಎಸ್.ಸಂಖ ಸೇರಿದಂತೆ ಬ್ಯಾಂಕಿನ ಇತರೆ ಅಧಿಕಾರಿಗಳು, ಸಿಬ್ಬಂದಿ ಪಾಲ್ಗೊಂಡಿದ್ದರು.
ಹಿಂದೂಸ್ತಾನ್ ಸಮಾಚಾರ್ / jyothi deshpande