
ಬೆಂಗಳೂರು, 02 ಜನವರಿ (ಹಿ.ಸ.) :
ಆ್ಯಂಕರ್ : ಜಾತಿ, ಧರ್ಮಗಳ ಎಲ್ಲೆ ಮೀರಿ ಮಾನವಧರ್ಮವೇ ಶ್ರೇಷ್ಠ ಧರ್ಮವೆಂದು ಸಾರಿದ ಮಹಾನ್ ಸಂತ, ಜ್ಞಾನಯೋಗಾಶ್ರಮದ ಪರಮಪೂಜ್ಯ ಶ್ರೀ ಸಿದ್ದೇಶ್ವರ ಸ್ವಾಮೀಜಿಯವರ ಪುಣ್ಯಸ್ಮರಣೆಯಂದು ಮುಖ್ಯಮಂತ್ರಿ ಸಿದ್ದರಾಮಯ್ಯ ನಮನ ಸಲ್ಲಿಸಿದ್ದಾರೆ.
ಸಾಮಾಜಿಕ ಮಾಧ್ಯಮ ಎಕ್ಸನಲ್ಲಿ ಸಂದೇಶ ಹಂಚಿಕೊಂಡಿರುವ ಅವರು, ಶ್ರೀಗಳು ತಮ್ಮ ಪ್ರವಚನಗಳ ಮೂಲಕ ಅಸಂಖ್ಯ ಭಕ್ತಾಧಿಗಳಿಗೆ ಆಧ್ಯಾತ್ಮ, ನೈತಿಕತೆ, ಧರ್ಮ - ಅಧರ್ಮಗಳ ಸತ್ಯದರ್ಶನ ಮಾಡುತ್ತಾ, ಸಮಾಜವನ್ನು ಸನ್ಮಾರ್ಗದಲ್ಲಿ ಮುನ್ನಡೆಸಿದವರು.
ಶರಣರ ಆದರ್ಶಗಳನ್ನೇ ಬದುಕಿನ ಹಾದಿಯಾಗಿಸಿಕೊಂಡಿದ್ದ ಶ್ರೀಗಳ ಸರಳತೆ, ಸಾಮಾಜಿಕ ಕಳಕಳಿ ಹಾಗೂ ಸೇವಾ ಮನೋಭಾವ ಮನುಕುಲಕ್ಕೆ ಮಾದರಿಯಾದುದ್ದು.
ಸ್ಥಾವರಕ್ಕಳಿವುಂಟು, ಜಂಗಮಕ್ಕಳಿವಿಲ್ಲ ಎಂಬ ವಚನದಂತೆ ಶ್ರೀಗಳು ತಮ್ಮ ವ್ಯಕ್ತಿತ್ವ ಮತ್ತು ವಿಚಾರಗಳ ಮೂಲಕ ಎಲ್ಲರೆದೆಗಳಲ್ಲಿ ಅಜರಾಮರವಾಗಿದ್ದಾರೆ ಎಂದು ಮುಖ್ಯಮಂತ್ರಿ ತಿಳಿಸಿದ್ದಾರೆ.
ಹಿಂದೂಸ್ತಾನ್ ಸಮಾಚಾರ್ / Rakesh Mahadevappa