ಗವಿಸಿದ್ಧೇಶ್ವರ ಮೂರ್ತಿಯ ಪಲ್ಲಕ್ಕಿ ಮೆರವಣಿಗೆ : ಜಾನಪದ ಕಲಾ ತಂಡಗಳ ಪ್ರದರ್ಶನ
ಕೊಪ್ಪಳ, 02 ಜನವರಿ (ಹಿ.ಸ.) : ಆ್ಯಂಕರ್ : ಶ್ರೀ ಗವಿಸಿದ್ಧೇಶ್ವರ ಜಾತ್ರಾ ಮಹೋತ್ಸವದ ನಿಮಿತ್ಯ ದಿನಾಂಕ 03-01-2026 ಶನಿವಾರ, ಸಂಜೆ 4 ಘಂಟೆಗೆ ಶ್ರೀ ಗವಿಸಿದ್ಧೇಶ್ವರ ಮೂರ್ತಿಯ (ಪಲ್ಲಕ್ಕಿ) ಮೆರವಣಿಗೆಯು ಕೋಟೆ ಪ್ರದೇಶದ ಜಡೇಗೌಡರ ಮನೆಯಿಂದ ಆರಂಭವಾಗುವದು. ಇದರಲ್ಲಿ ನಂದಿಕೋಲು, ಡೊಳ್ಳು, ಭಜನೆ,
ಗವಿಸಿದ್ಧೇಶ್ವರ ಮೂರ್ತಿಯ ಪಲ್ಲಕ್ಕಿ ಮೆರವಣಿಗೆ : ಜಾನಪದ ಕಲಾ ತಂಡಗಳ ಪ್ರದರ್ಶನ


ಕೊಪ್ಪಳ, 02 ಜನವರಿ (ಹಿ.ಸ.) :

ಆ್ಯಂಕರ್ : ಶ್ರೀ ಗವಿಸಿದ್ಧೇಶ್ವರ ಜಾತ್ರಾ ಮಹೋತ್ಸವದ ನಿಮಿತ್ಯ ದಿನಾಂಕ 03-01-2026 ಶನಿವಾರ, ಸಂಜೆ 4 ಘಂಟೆಗೆ ಶ್ರೀ ಗವಿಸಿದ್ಧೇಶ್ವರ ಮೂರ್ತಿಯ (ಪಲ್ಲಕ್ಕಿ) ಮೆರವಣಿಗೆಯು ಕೋಟೆ ಪ್ರದೇಶದ ಜಡೇಗೌಡರ ಮನೆಯಿಂದ ಆರಂಭವಾಗುವದು.

ಇದರಲ್ಲಿ ನಂದಿಕೋಲು, ಡೊಳ್ಳು, ಭಜನೆ, ಭಾಜಾ-ಭಜಂತ್ರಿ, ಪಂಜು, ಇಲಾಲು ಹಾಗೂ ನಾಡಿನ ಸಾಂಸ್ಕ್ರತಿಕ ವೈಭವವನ್ನು ಬಿಂಬಿಸುವ ಕೊಪ್ಪಳ ಜಿಲ್ಲಾ ಕನ್ನಡ ಮತ್ತು ಸಂಸ್ಕøತಿ ಇಲಾಖೆಯ ಸಹಯೋಗದೊಂದಿಗೆ ಅನೇಕ ಜಾನಪದ ಕಲಾ ತಂಡಗಳು ಈ ಮೆರವಣಿಗೆಯಲ್ಲಿ ಭಾಗವಹಿಸಲಿವೆ.

ಉತ್ತರ ಕನ್ನಡದ ಪುರಿಷೋತ್ತಮಗೌಡ ಹಾಗೂ ತಂಡ ಕಾರವಾರ) ಸುಗ್ಗಿ ಕುಣಿತ, ಹಿರೇವಕ್ಕಲಕುಂಟಾದ ಮಾರುತೇಶ್ವರ ಡೊಳ್ಳಿನ ಕಲಾತಂಡದವರಿಂದ ಡೊಳ್ಳು ಕುಣಿತ, ವಿಜಯಪುರದ ಸಿದ್ಧಾಪುರ ಕಾರಿಜೋಳ ರೇವಣಸಿದ್ಧೇಶ್ವರ ಕಲಾ ತಂಡದವರಿಂದ ಸತ್ತಿಗೆ ಕುಣಿತ, ಬಳ್ಳಾರಿಯ ಅಂಜಲಿ ಮತ್ತು ತಂಡದವರಿಂದ ಹಕ್ಕಿ ಪಿಕ್ಕಿ ಕುಣಿತ, ಉಡುಪಿಯ ವಾಸುದೇವ ತಂಡದವರಿಂದ ಚಂಡೇ ವಾದನ, ಮಹಲಿಂಗಪುರ ತಂಡದವರಿಂದ ಕರಡಿ ಮಜಲು, ಕುನನುರಿನ ಬಿನ್ನಾಳ ತಂಡದವರಿಂದ ಹಲಗೆ ವಾದನ, ತುಮಕುರಿನ ಅಳಿಲುಘಟ್ಟ ತಂಡದವರಿಂದ ಕೊಂಬು ಕಹಳೆ, ಮಂಡ್ಯದ ಕುದರಿಗುಂಡಿ ತಂಡದವರಿಂದ ಪೂಜಾ ಕುಣಿತ, ಮಂಡ್ಯದ ಸಾದೊಳಲು ತಂಡದವರಿಂದ ಭದ್ರಕಾಳಿ ಕುಣಿತ. ಕುಣಿಕೇರಿಯ ಜಂಜಲ ಮೇಳ ಜಾಂಜಲ, ಚಿಲಕಮುಖಿಯ ದಾಲ ಪಟ, ಉಪ್ಪಾರಗಟ್ಟಿಯ ನಂದಿಕೋಲು, ಮುದ್ದಾಬಳ್ಳಿಯ ಡೊಳ್ಳು ಕುಣಿತ, ಇವರಿಂದ ಜಾನಪದ ಕಲಾ ತಂಡಗಳ ಪ್ರದರ್ಶನ ನೀಡುತ್ತವೆ.

ಹೆಚ್ಚಿನ ಮಾಹಿತಿಗಾಗಿ ಶ್ರೀ ಅಮರೇಶ ಕರಡಿ-9242181322 ಇವರನ್ನು ಸಂಪರ್ಕಿಸಬಹುದು ಎಂದು ಶ್ರೀ ಮಠ ತಿಳಿಸಿದೆ.

ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್


 rajesh pande