
ಹೊಸಪೇಟೆ, 02 ಜನವರಿ (ಹಿ.ಸ.) :
ಆ್ಯಂಕರ್ : ಭಾರತ ಸರ್ಕಾರದ ಜಲಶಕ್ತಿ ಮತ್ತು ರೈಲ್ವೆ ಖಾತೆಯ ರಾಜ್ಯ ಸಚಿವರಾದ ವಿ.ಸೋಮಣ್ಣ ಅವರು 2026 ರ ಜನವರಿ 4 ರಂದು ವಿಜಯನಗರ ಜಿಲ್ಲಾ ಪ್ರವಾಸ ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದಾರೆ.
ಅಂದು ಬೆಳಿಗ್ಗೆ 07ಗಂಟೆಗೆ ಯಶವಂತಪುರ ರೈಲು ನಿಲ್ದಾಣದಿಂದ ಹೊರಟು ವಿಶೇಷ ರೈಲಿನ ಮೂಲಕ 1.30 ಗಂಟೆಗೆ ಹೊಸಪೇಟೆಗೆ ಆಗಮಿಸಲಿದ್ದಾರೆ. ಹೊಸಪೇಟೆಯಿಂದ 2:45 ಗಂಟೆಗೆ ಹೊರಟು ಹಗರಿಬೊಮ್ಮನಹಳ್ಳಿ ನಿಲ್ದಾಣದಲ್ಲಿ 03:30 ಕ್ಕೆ ತಲುಪಿ ಗುಂಡಾ ರಸ್ತೆ - ಕೊಟ್ಟೂರು ನಡುವಿನ ಲೆವೆಲ್ ಕ್ರಾಸಿಂಗ್ 35 ರ ಬದಲಾಗಿ ರೈಲ್ವೆ ಮೇಲ್ಸೇತುವೆ (ಆರ್‍ಒಬಿ) ನಿರ್ಮಾಣ ಕಾಮಗಾರಿಯ ಶಂಕುಸ್ಥಾಪನೆ ನೆರವೇರಿಸುವರು.
ಸಂಜೆ 5 ಗಂಟೆಗೆ ಹಗರಿಬೊಮ್ಮನಹಳ್ಳಿಯಿಂದ ವಿಶೇಷ ರೈಲಿನ ಮೂಲಕ ತೋರಣಗಲ್ಲುಗೆ ತೆರಳಲಿದ್ದಾರೆ ಎಂದು ರೈಲ್ವೆ ರಾಜ್ಯ ಸಚಿವರ ವಿಭಾಗೀಯ ಅಧಿಕಾರಿಗಳು ತಿಳಿಸಿದ್ದಾರೆ.
ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್