
ಕೊಪ್ಪಳ, 02 ಜನವರಿ (ಹಿ.ಸ.) :
ಆ್ಯಂಕರ್ : ಶ್ರೀ ಜಗದ್ಗುರು ಗವಿಸಿದ್ಧೇಶ್ವರ ಆಯುರ್ವೇದಿಕ ಮಹಾವಿದ್ಯಾಲಯ ಇವರಿಂದ ದಿನಾಂಕ 05/01/2026 ರಿಂದ 08/01/2026 ರವರೆಗೆ 04 ದಿನಗಳ ಕಾಲ ಶ್ರೀ ಜಗದ್ಗುರು ಗವಿಸಿದ್ಧೇಶ್ವರ ಆಯುರ್ವೇದಿಕ ಮಹಾವಿದ್ಯಾಲಯದಲ್ಲಿ ಬೃಹತ್ ರಕ್ತದಾನ ಶಿಬಿರ ವನ್ನು ಬೆಳೆಗ್ಗೆ 09:00 ಗಂಟೆಯಿಂದ ಸಾಯಂಕಾಲ 05:00 ಗಂಟೆಯವರೆಗೆ ಹಮ್ಮಿಕೊಳ್ಳಲಾಗಿದೆ.
ರಕ್ತದಾನ ಶಿಬಿರವನ್ನು 2015ರಿಂದ ಆಯೋಜಿಸಲಾಗುತ್ತಿದ್ದು 2025ರವರೆಗೆ ಸುಮಾರು 1111 ಶಿಬಿರಗಳನ್ನು ಆಯೋಜಿಲಾಗಿದೆ.
ಇದರಿಂದ ಸುಮಾರು 8354 ಜನರು ಇದರ ಸೇವೆಯನ್ನು ಪಡೆದಿದ್ದಾರೆ. ರಕ್ತದಾನ ಮಾಡುವುದರಿಂದ ಅನೇಕ ಜನರ ಜೀವ ಉಳಿಸುವ ಮಹಾಕಾರ್ಯ ಇದಾಗಿದ್ದು ಹೆಚ್ಚಿನ ರೀತಿಯಲ್ಲಿ ರಕ್ತಧಾನ ಮಾಡುವುದರ ಮೂಲಕ ಅನೇಕರಿಗೆ ಪ್ರೇರಣೆಯಾಗಬೇಕು. ಎಂದು ಶ್ರೀ ಗವಿಮಠದ ಪ್ರಕಟಣೆಯಲ್ಲಿ ತಿಳಿಸಲಾಗಿದೆ.
ಹೆಚ್ಚಿನ ಮಾಹಿತಿಗಾಗಿ 9008996646, 9448814156 ಈ ಮೋಬೈಲ್ ಸಂಖ್ಯೆಗೆ ಸಂಪರ್ಕಿಸಲು ಎಂದು ಶ್ರೀ ಗವಿಮಠ ತಿಳಿಸಿದೆ.
ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್