
ಕೊಪ್ಪಳ, 02 ಜನವರಿ (ಹಿ.ಸ.) :
ಆ್ಯಂಕರ್ : ಕೊಪ್ಪಳ ತಾಲೂಕಿನ ದದೇಗಲ್‌ನಲ್ಲಿರುವ ಸರ್ಕಾರಿ ಉಪಕರಣಾಗಾರ ಮತ್ತು ತರಬೇತಿ ಕೇಂದ್ರದಲ್ಲಿ ಡಿ.ಟಿ.ಡಿ.ಎಮ್, ಡಿ.ಎಮ್.ಸಿ.ಹೆಚ್ ಮತ್ತು ಇ&ಸಿ ವಿಭಾಗದಲ್ಲಿ ಖಾಲಿ ಇರುವ ಅತಿಥಿ ಉಪನ್ಯಾಸಕರ ಹುದ್ದೆಗೆ(ತಾತ್ಕಾಲಿಕ) ಅರ್ಜಿ ಆಹ್ವಾನಿಸಲಾಗಿದೆ.
ಪ್ರಥಮ ದರ್ಜೆಯಲ್ಲಿ ಎಲೆಕ್ಟಿಕಲ್ & ಎಲೆಕ್ಟಾನಿಕ್ಸ್ ಇಂಜಿನಿಯರಿ0ಗ್ ಪದವಿ ಹೊಂದಿದ ಮತ್ತು ಡಿ.ಟಿ.ಡಿ.ಎಮ್ ವಿಭಾಗಕ್ಕೆ ಡಿಪ್ಲೋಮಾ ಇನ್ ಟೂಲ್ ಅಂಡ್ ಡೈ ಮೇಕಿಂಗ್ ಆಧಾರಿತ ಬಿ.ಇ ಪದವಿ ಹೊಂದಿದ, ಮೆಕ್ಯಾನಿಕಲ್ ಇಂಜಿನಿಯರಿ0ಗ್ ಪದವಿ, ಎಲೆಕ್ಟಾನಿಕ್ಸ್ & ಕಮ್ಯೂನಿಕೇಶನ್ ಇಂಜಿನಿಯರಿ0ಗ್ ಮತ್ತು ವಿಜ್ಞಾನ ವಿಭಾಗದಲ್ಲಿ ಸ್ನಾತಕೋತ್ತರ ಪದವಿ ಹೊಂದಿದ ಆಸಕ್ತ ಆಕಾಂಕ್ಷಿಗಳು ಜನವರಿ 12 ರೊಳಗಾಗಿ ಜಿಟಿಟಿಸಿ ಕೊಪ್ಪಳ ಕಛೇರಿಗೆ ಅರ್ಜಿ ಸಲ್ಲಿಸಬಹುದು ಅಥವಾ ಇ-ಮೇಲ್: gttckoppal@gmail.com ಗೆ ನಿಮ್ಮ ಸ್ವ-ವಿವರವುಳ್ಳ ಬಯೋಡೆಟಾವನ್ನು ಕಳುಹಿಸಬಹುದು.
ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ ಕಾರ್ಯಾಲಯ ಅಥವಾ ಮೌನೇಶ್, ವಿಭಾಗದ ಮುಖ್ಯಸ್ಥರು, ಸರ್ಕಾರಿ ಉಪಕರಣಾಗಾರ ಮತ್ತು ತರಬೇತಿ ಕೇಂದ್ರ, ಗದಗ ರೋಡ್, ದದೇಗಲ್, ಕೊಪ್ಪಳ ಇವರ ಮೊ. ಸಂಖ್ಯೆ: 7507094445 ಗೆ ಸಂಪರ್ಕಿಸಬಹುದು.
ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್