
ಬಳ್ಳಾರಿ, 02 ಜನವರಿ (ಹಿ.ಸ.) :
ಆ್ಯಂಕರ್ : ಬಳ್ಳಾರಿಯ ಅವಂಬಾವಿಯಲ್ಲಿ ಗುರುವಾರ ಸಂಜೆ ನಡೆದ ಗಲಭೆಯ ಹಿನ್ನಲೆಯಲ್ಲಿ ಹಿರಿಯ ಪೊಲೀಸ್ ಅಧಿಕಾರಿ ಆರ್. ಹಿತೇಂದ್ರ ಅವರು ಬಳ್ಳಾರಿಗೆ ಶುಕ್ರವಾರ ಆಗಮಿಸಿ, ಪರಿಸ್ಥಿತಿಯನ್ನು ಖುದ್ದಾಗಿ ಪರಿಶೀಲನೆ ನಡೆಸಿದ್ದಾರೆ.
ಕಾನೂನು ಸುವ್ಯವಸ್ಥೆ ವಿಭಾಗದ ಎಡಿಜಿಪಿ ಆರ್. ಹಿತೇಂದ್ರ ಅವರು ಸುದ್ದಿಗಾರರಿಗೆ ಈ ಮಾಹಿತಿ ನೀಡಿದ್ದು, ಘಟನೆ ಬಗ್ಗೆ ಬಳ್ಳಾರಿ ವಲಯ ಐಜಿಪಿ ವರ್ತಿಕಾ ಕಟಿಯಾರ, ಎಸ್ಪಿ ಪವನ ನೆಜ್ಜೂರು, ನಿಯೋಜನೆಗೊಂಡಿರುವ ಚಿತ್ರದುರ್ಗ ಎಸ್ಪಿ ರಂಜಿತಕುಮಾರ್ ಅವರಿಂದ ಮಾಹಿತಿ ಪಡೆಯುತ್ತಿದ್ದಾರೆ.
ಸುದ್ದಿಗಾರರ ಜೊತೆ ಮಾತನಾಡಿದ ಆರ್. ಹಿತೇಂದ್ರ ಅವರು, ಮೂರು ದೂರುಗಳು ದೂರುದಾರರಿಂದ ದಾಖಲಾಗಿದ್ದು, ಒಂದು ಪ್ರಕರಣವನ್ನು ಪೊಲೀಸರೇ ದಾಖಲಿಸಿದ್ದಾರೆ. ವಾಲ್ಮೀಕಿ ಮಹರ್ಷಿಗಳಿಗೆ ಅವಮಾನ ಮಾಡಿದ ದೂರು, ಐಪಿಸಿ 307 ಪ್ರಕರಣ ಸೇರಿದೆ. ಖಾಸಗಿ ಗನ್‍ಮ್ಯಾನ್‍ಗಳಿಂದ ಐದು ಪ್ರೈವೇಟ್ ಗನ್‍ಗಳನ್ನು, ಗುಂಡುಗಳನ್ನು ವಶಕ್ಕೆ ಪಡೆಯಲಾಗಿದ. ಪೆÇಲೀಸರು ಟಿಯರ್ ಗನ್ ಫೈಯರ್ ಮಾಡಿದ್ದಾರೆ. ಸರ್ಕಾರಿ ಗನ್‍ಮೆನ್‍ಗಳ ಗನ್‍ಗಳನ್ನು - ಗುಂಡುಗಳನ್ನು ವಶಕ್ಕೆ ಪಡೆದು, ಪರ್ಯಾಯ ಗನ್‍ಗಳನ್ನು - ಗುಂಡುಗಳನ್ನು ನೀಡಿ ಕರ್ತವ್ಯಕ್ಕೆ ನಿಯೋಜನೆ ಮಾಡಲಾಗಿದೆ ಎಂದರು.
ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್