
ಕೊಪ್ಪಳ, 02 ಜನವರಿ (ಹಿ.ಸ.) :
ಆ್ಯಂಕರ್ : ಶ್ರೀಗವಿಸಿದ್ಧೇಶ್ವರ ಜಾತ್ರಾಮಹೋತ್ಸವದ ಅಂಗವಾಗಿ ಜರುಗಲಿರುವ ಮಹಾದಾಸೋಹಕ್ಕಾಗಿ ಸದ್ಭಕ್ತರಿಂದ ಸಿಹಿ ಪದಾರ್ಥ, ದವಸ-ಧಾನ್ಯ, ರೊಟ್ಟಿಗಳನ್ನು ಶ್ರೀಮಠಕ್ಕೆ ತಂದು ಅರ್ಪಿಸುತಿದ್ದಾರೆ.
ಇಂದು ಕೊಪ್ಪಳ ತಾಲೂಕಿನ ಹಿರೇಸೂಳಿಕೇರಿ ಗ್ರಾಮದ ಸದ್ಭಕ್ತರಿಂದ– 5000 ರೊಟ್ಟಿ, 4 ಪಾಕೆಟ್ ಅಕ್ಕಿ, 7 ಟ್ಯಾಕ್ಟರ್ ಕಟ್ಟಿಗೆ ಹಾಗೂ ಗಂಗಾವತಿ ತಾಲೂಕಿನ ಹೊಸಹಿರೇ ಬೆಣಕಲ್ ಗ್ರಾಮದ ಸದ್ಭಕ್ತರಿಂದ 21 ಕ್ವಿಂಟಾಲ್ ಅಕ್ಕಿ, 1100 ರೊಟ್ಟಿ ಟ್ರ್ಯಾಕ್ಟರ್ ಹಾಗೂ ಲಘು ವಾಹನಗಳ ಮೂಲಕ ಭಕ್ತಿ ಭಾವ, ಸಡಗರದೊಂದಿಗೆ ಶ್ರೀಗವಿಮಠಕ್ಕೆ ಆಗಮಿಸಿ ಮಹಾದಾಸೋಹಕ್ಕೆ ಸಲ್ಲಿಸಿದರು. ದಾನಿಗಳಿಗೆ ಪೂಜ್ಯರು ಆಶಿರ್ವದಿಸಿದ್ದಾರೆ.
ಶ್ರೀ ಗವಿಮಠಕ್ಕೆ 24 ಕಿಂಟಲ್ ಖಾರದಪುಡಿ ಮತ್ತು ಇತರ ದವಸ ದಾನ್ಯ ಸೇವೆ
ಕೊಪ್ಪಳ- ದಕ್ಷಿಣ ಭಾರತದ ಕುಂಭಮೇಳವೆಂದು ಪ್ರಖ್ಯಾತಿ ಪಡೆದ ಶ್ರೀ ಗವಿಸಿದ್ದೇಶ್ವರ ಜಾತ್ರಾ ಮಹೋತ್ಸವ ಧಾರ್ಮಿಕ ಸಾಮಾಜಿಕ ಸಾಂಪ್ರದಾಯಿಕ ಕಾರ್ಯಕ್ರಮಗಳ ಸಂಗಮ. ಶ್ರೀ ಗವಿಸಿದ್ದೇಶ್ವರ ಜಾತ್ರಾ ಮಹೋತ್ಸವ ನಿಮಿತ್ಯ ನಾಡಿನ ಅನೇಕ ಭಕ್ತರು ವಿವಿಧ ವಿಶಿಷ್ಟ ಭಕ್ತಿ ಸೇವೆಗಳನ್ನು ಸಲ್ಲಿಸುವುದರ ಮೂಲಕ ಭಕ್ತಿ ಅರ್ಪಿಸುವದು ಅಪ್ಯಾಯಮಾನ. ಹಾವೇರಿಯ ಬ್ಯಾಡಗಿ ಗ್ರಾಮದವರು 24 ಕ್ವಿಂಟಾಲ್ ಖಾರದಪುಡಿ, ಅಕ್ಕಿ 2 ಕ್ವಿಂಟಾಲ್, 4 ಡಬ್ಬಿ ಎಣ್ಣಿ, 2 ಕ್ವಿಂಟಾಲ್ ಬೆಲ್ಲ, 30 ಚೀಲ ಮೆಣಸಿನಕಾಯಿ ಶ್ರೀಮಠದ ಮಹಾದಾಸೋಹಕ್ಕೆ ತಲುಪಿಸಿರುತ್ತಾರೆ. ದಾಸೋಹ ಭಾವಕ್ಕೆ ಪೂಜ್ಯರು ಭಕ್ತರಿಗೆ ಆಶೀರ್ವದಿಸಿದ್ದಾರೆ.
ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್