ಹಂಪಿಯ ವಿಜಯ ವಿಠಲ ದೇವಾಲಯ ಮುಂದೆ ಅಕ್ಕ ಕ್ಯಾಂಟಿನ್ ಶುಭಾರಂಭ
ಹಂಪಿ, 02 ಜನವರಿ (ಹಿ.ಸ.) : ಆ್ಯಂಕರ್ : ರಾಜ್ಯದಲ್ಲಿ ಮೊಟ್ಟ ಮೊದಲ ಬಾರಿಗೆ ಸಂಚಾರಿ ಅಕ್ಕ ಕ್ಯಾಂಟಿನ್ ನ್ನು ವಿಶ್ವವಿಖ್ಯಾತ ಹಂಪಿಯ ವಿಜಯ ವಿಠಲ ದೇವಸ್ಥಾನದ ಮುಂಭಾಗದಲ್ಲಿ ಜಿಲ್ಲಾ ಪಂಚಾಯತ್ ಉಪಕಾರ್ಯದರ್ಶಿ ಕೆ.ತಿಮ್ಮಪ್ಪ ಅವರು ಚಾಲನೆ ನೀಡಿದ್ದಾರೆ. ಜಿಲ್ಲಾ ಪಂಚಾಯತ್ ವಿಜಯನಗರ ಹಾಗೂ ತಾಲೂಕು ಪ
ಹಂಪಿಯ ವಿಜಯ ವಿಠಲ ದೇವಾಲಯ ಮುಂದೆ ಅಕ್ಕ ಕ್ಯಾಂಟಿನ್ ಶುಭಾರಂಭ.


ಹಂಪಿಯ ವಿಜಯ ವಿಠಲ ದೇವಾಲಯ ಮುಂದೆ ಅಕ್ಕ ಕ್ಯಾಂಟಿನ್ ಶುಭಾರಂಭ.


ಹಂಪಿ, 02 ಜನವರಿ (ಹಿ.ಸ.) :

ಆ್ಯಂಕರ್ : ರಾಜ್ಯದಲ್ಲಿ ಮೊಟ್ಟ ಮೊದಲ ಬಾರಿಗೆ ಸಂಚಾರಿ ಅಕ್ಕ ಕ್ಯಾಂಟಿನ್ ನ್ನು ವಿಶ್ವವಿಖ್ಯಾತ ಹಂಪಿಯ ವಿಜಯ ವಿಠಲ ದೇವಸ್ಥಾನದ ಮುಂಭಾಗದಲ್ಲಿ ಜಿಲ್ಲಾ ಪಂಚಾಯತ್ ಉಪಕಾರ್ಯದರ್ಶಿ ಕೆ.ತಿಮ್ಮಪ್ಪ ಅವರು ಚಾಲನೆ ನೀಡಿದ್ದಾರೆ.

ಜಿಲ್ಲಾ ಪಂಚಾಯತ್ ವಿಜಯನಗರ ಹಾಗೂ ತಾಲೂಕು ಪಂಚಾಯತ್ ಹೊಸಪೇಟೆ, ಸಂಜೀವಿನಿ ರಾಷ್ಟ್ರೀಯ ಗ್ರಾಮೀಣ ಜೀವನೋಪಾಯ ಅಭಿಯಾನ ಹಾಗೂ ಶ್ರೀಜಗನ್ ಜ್ಯೋತಿ ಸಂಜೀವಿನಿ ಗ್ರಾಮ ಪಂಚಾಯತ್ ಮಟ್ಟದ ಒಕ್ಕೂಟ ಹಂಪಿ ವತಿಯಿಂದ ಹಮ್ಮಿಕೊಳ್ಳಲಾಗಿತ್ತು.

ಬಳಿಕ ಅವರು ಸುದ್ದಿಗಾರರೊಂದಿಗೆ ಮಾತನಾಡಿ, ವಿಶ್ವ ವಿಖ್ಯಾತ ಹಂಪಿ ಹಾಗೂ ವಿಜಯ ವಿಠಲ ದೇವಸ್ಥಾನ ವೀಕ್ಷಣೆಗೆ ಬರುವ ವಿವಿಧ ರಾಜ್ಯ ಸೇರಿದಂತೆ ವಿದೇಶಿ ಪ್ರವಾಸಿಗರು ಹೆಚ್ಚಿನ ಪ್ರಮಾಣದಲ್ಲಿ ಆಗಮಿಸುತ್ತಿರುವ ಹಿನ್ನಲೆಯಲ್ಲಿ ದೇವಸ್ಥಾನ ವೀಕ್ಷಣೆ ಹಾಗೂ ದೇವರ ದರ್ಶನ ಪಡೆಯಲು ಬರುವ ಗ್ರಾಮೀಣ ಪ್ರದೇಶದ ಸಾರ್ವಜನಿಕರಿಗೆ ಒಲವಿನ ಊಟ ಸಿಗುವುದು ಕಷ್ಟ ಸಾಧ್ಯ, ಈ ನಿಟ್ಟಿನಲ್ಲಿ ಹಂಪಿ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ವಿಜಯ ವಿಠಲ ದೇವಸ್ಥಾನ ಮುಂಭಾಗದಲ್ಲಿ ಮೊಬೈಲ್ ಕ್ಯಾಂಟಿನ್ ವ್ಯವಸ್ಥೆ ಕಲ್ಪಿಸಲಾಗಿದೆ.

ಜಗನ್ ಜ್ಯೋತಿ ಗ್ರಾಮ ಪಂಚಾಯತ್ ಮಟ್ಟದ ಒಕ್ಕೂಟ ಹಂಪಿಯ ಶ್ರೀವೈಷ್ಣವಿ ಮಹಿಳಾ ಸ್ವ ಸಹಾಯ ಗುಂಪಿನ ಮಹಿಳೆಯರು ತಯಾರಿಸಿರುವ ರುಚಿ ಶುಚಿಯಾದ ತಿಂಡಿ ತಿನಿಸುಗಳು, ಇಡ್ಲಿ, ವಡೆ, ಚಿತ್ರಾನ್ನ, ಖಾರಾ ಬಾತ್, ಪುಳಿಯೋಗರೆ ಹಾಗೂ ಟೀ, ಕಾಫಿ, ಒಲವಿನ ಊಟ ಹಾಗೂ ಸಂಜೆ ತಿನಿಸುಗಳು ಉಪಹಾರ ತಯಾರಿಸಿ ನೀಡಲಾಗುವುದು.

ಇದರ ಸದುಪಯೋಗವನ್ನು ಸಾರ್ವಜನಿಕರು ಹಾಗೂ ಅಧಿಕಾರಿಗಳು ಹಾಗೂ ಈ ಭಾಗದ ಜನರಿಗೆ ಹೆಚ್ಚಿನ ಪ್ರಮಾಣದಲ್ಲಿ ಪಡೆದುಕೊಳ್ಳಬೇಕು. ಇದರಿಂದಾಗಿ ಮೊಬೈಲ್ ಕ್ಯಾಂಟಿನ್ ನಲ್ಲಿ ತೊಡಗಿರುವ ಗ್ರಾಮೀಣ ಭಾಗದ ಸ್ವಸಹಾಯ ಗುಂಪಿನ ಮಹಿಳೆಯರ ಕುಟುಂಬಗಳಿಗೆ ಹೆಚ್ಚಿನ ಆದಾಯ ವೃದ್ಧಿಯಾಗಿ ಆರ್ಥಿಕವಾಗಿ ಸದೃಢವಾಗಲು ಸಹಕಾರಿಯಾಗುತ್ತದೆ ಎಂದರು.

ಇದೇ ವೇಳೆ ಉಪ ಕಾರ್ಯದರ್ಶಿಗಳು ಊಟಕ್ಕೆ ಬಳಸುವ ಎಲ್ಲಾ ಪರಿಕರಗಳು ಹಾಗೂ ಸಾಮಾಗ್ರಿಗಳನ್ನು ಪರಿಶೀಲಿಸಿದರು ಹಾಗೂ ಸ್ವಚ್ಛತೆ ಕಾಪಾಡುವಲ್ಲಿ ಅಗತ್ಯ ಕ್ರಮಗಳನ್ನು ಅನುಸರಿಸಿ, ಉತ್ತಮ ಗುಣಮಟ್ಟದ ಸಾಮಗ್ರಿಗಳು ಹೊಂದಿದ್ದಲ್ಲಿ ಉತ್ತಮ ಗುಣಮಟ್ಟದ ಶುಚಿರುಚಿಯಾದ ಉಪಹಾರ ನೀಡುವಂತೆ ಮೊಬೈಲ್ ಕ್ಯಾಂಟಿನ್ ಅಡುಗೆ ಸಿಬ್ಬಂದಿಗಳಿಗೆ ಸೂಚಿಸಿದರು.

ಇದೇ ಸಂದರ್ಭದಲ್ಲಿ ಜಿಲ್ಲಾ ಪಂಚಾಯತ್ ಸಹಾಯಕ ಯೋಜನಾ ಅಧಿಕಾರಿ ಉಮೇಶ್, ತಾಲೂಕು ಪಂಚಾಯತ್ ಹೊಸಪೇಟೆಯ ಕಾರ್ಯ ನಿರ್ವಾಹಕ ಅಧಿಕಾರಿ ಅಲಂ ಭಾಷಾ, ಜಿಪಂ ಅಧೀಕ್ಷಕ ನಾಗರಾಜ್, ಜಿಲ್ಲಾ ಯೋಜನಾ ವ್ಯವಸ್ಥಾಪಕ ಪ್ರಸನ್ನ, ಜಿಲ್ಲಾ ವ್ಯವಸ್ಥಾಪಕಿ ಕಲಾವತಿ ಸೇರಿದಂತೆ ಮಹಿಳಾ ಒಕ್ಕೂಟದ ಸದಸ್ಯರು ಭಾಗವಹಿಸಿದ್ದರು.

ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್


 rajesh pande