
ರಾಯಚೂರು, 02 ಜನವರಿ (ಹಿ.ಸ.) :
ಆ್ಯಂಕರ್ : ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯಿಂದ ರಾಷ್ಟ್ರೀಯ ಆರೋಗ್ಯ ಅಭಿಯಾನದಡಿಯಲ್ಲಿ 2025-26ನೇ ಸಾಲಿಗೆ ಮಂಜೂರಾಗಿ ಖಾಲಿ ಇರುವ ಡಿ.ಇ.ಐ.ಸಿ. ವ್ಯವಸ್ಥಾಪಕರು-01 ಹುದ್ದೆಯನ್ನು ಗುತ್ತಿಗೆ ಆಧಾರದ ಮೇಲೆ ನೇಮಕಾತಿ ಮಾಡಿಕೊಳ್ಳಲು ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ.
ರಾಷ್ಟ್ರೀಯ ಆರೋಗ್ಯ ಅಭಿಯಾನದ ಮಾರ್ಗಸೂಚಿ ಹಾಗೂ ಷರತ್ತು ಮತ್ತು ನಿಬಂಧನೆಗಳಿಗೆ ಅನುಸಾರ ಹಾಗೂ ಈ ಹುದ್ದೆ ಜಿಲ್ಲೆಗೆ ಒಂದೇ ಇರುವುದರಿಂದ ಮೇರಿಟ್ ಆಧಾರದ ಮೇಲೆ ನೇಮಕಾತಿ ಮಾಡಿಕೊಳ್ಳಲಾಗುವುದು.
ವಿದ್ಯಾರ್ಹತೆ: ಭಾರತೀಯ ಪುನರ್ವಸತಿ ಮಂಡಳಿ ಅನುಮೋದಿಸಿದ ಅಂಗವೈಕಲ್ಯ ಪುನರ್ವಸತಿ ಆಡಳಿತದಲ್ಲಿ ಸ್ನಾತಕೋತ್ತರ ಪದವಿ ಅಥವಾ ಮಾನ್ಯತೆ ಪಡೆದ / ಪ್ರಸಿದ್ಧ ಸಂಸ್ಥೆಯಿಂದ ಆಸ್ಪತ್ರೆ/ ಆಸ್ಪತ್ರೆ ನಿರ್ವಹಣೆಯಲ್ಲಿ ಸ್ನಾತಕೋತ್ತರ ಪದವಿ/ ಡಿಪ್ಲೋಮಾ ಹೊಂದಿರುವವರಿಗೆ 1 ವರ್ಷದ ಅನುಭವ ಹೊಂದಿರಬೇಕು. ಅಥವಾ ಮಾನ್ಯತೆ ಪಡೆದ ಸಂಸ್ಥೆಯಿಂದ ಎಂ.ಬಿ.ಎ. ಆಸ್ಪತ್ರೆ ನಿರ್ವಹಣೆ/ ಆಡಳಿತ ಪದವಿ ಮತ್ತು ಆಸ್ಪತ್ರೆ/ ಆರೋಗ್ಯ ಕಾರ್ಯಕ್ರಮದಲ್ಲಿ 2 ವರ್ಷಗಳ ಅನುಭವವಿರಬೇಕು. ಹಾಗೂ ರಾಷ್ಟ್ರೀಯ ಆರೋಗ್ಯ ಅಭಿಯಾನ ಹಾಗೂ ಆರೋಗ್ಯ ಇಲಾಖೆಯಲ್ಲಿ ಸೇವೆ ಸಲ್ಲಿಸಿದ ಅನುಭವ ಹೊಂದಿದ್ದಲ್ಲಿ ಎಂ.ಬಿ.ಎ.ಪದವಿಯನ್ನು ಪರಿಗಣಿಸಲಾಗುವುದು.
ಆಸಕ್ತರು ಜನವರಿ 5ರ 10.30ಗಂಟೆಗೆ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಕಚೇರಿಯಲ್ಲಿ ನಡೆಯುವ ನೇರ ಸಂದರ್ಶನದಲ್ಲಿ ಅರ್ಜಿಯನ್ನು ಸಲ್ಲಿಸಬಹುದಾಗಿದೆ.
ಹೆಚ್ಚಿನ ಮಾಹಿತಿಗಾಗಿ ಜಿಲ್ಲಾ ಯೋಜನಾ ನಿರ್ವಹಣಾ ಘಟಕ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿಗಳ ಕಾರ್ಯಲಯ ರಾಯಚೂರು ಅನ್ನು ಕಚೇರಿಯ ಅವಧಿಯಲ್ಲಿ ಭೇಟಿ ನೀಡಿ ಮಾಹಿತಿ ಪಡೆಯಬಹುದಾಗಿದೆ ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಂಘದ ಸದಸ್ಯ ಕಾರ್ಯದರ್ಶಿಗಳು ತಿಳಿಸಿದ್ದಾರೆ.
ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್