ಬಜೆಟ್ ದಿನ ಫೆಬ್ರವರಿ 1ರಂದು ಷೇರು ಮಾರುಕಟ್ಟೆಗಳ ವಹಿವಾಟು
ನವದೆಹಲಿ, 17 ಜನವರಿ (ಹಿ.ಸ.) : ಆ್ಯಂಕರ್ : ಈ ವರ್ಷ ಕೇಂದ್ರ ಬಜೆಟ್ ಮಂಡನೆಯಾಗುವ ಫೆಬ್ರವರಿ 1ರಂದು, ಭಾನುವಾರವಾಗಿದ್ದರೂ ದೇಶದ ಪ್ರಮುಖ ಷೇರು ಮಾರುಕಟ್ಟೆಗಳಾದ ಬಾಂಬೆ ಷೇರು ವಿನಿಮಯ ಕೇಂದ್ರ (ಬಿಎಸ್‌ಇ) ಮತ್ತು ರಾಷ್ಟ್ರೀಯ ಷೇರು ವಿನಿಮಯ ಕೇಂದ್ರ (ಎನ್‌ಎಸ್‌ಇ) ವಹಿವಾಟಿಗೆ ತೆರೆದಿರಲಿವೆ. ಬಜೆಟ್ ದಿ
Stock market


ನವದೆಹಲಿ, 17 ಜನವರಿ (ಹಿ.ಸ.) :

ಆ್ಯಂಕರ್ : ಈ ವರ್ಷ ಕೇಂದ್ರ ಬಜೆಟ್ ಮಂಡನೆಯಾಗುವ ಫೆಬ್ರವರಿ 1ರಂದು, ಭಾನುವಾರವಾಗಿದ್ದರೂ ದೇಶದ ಪ್ರಮುಖ ಷೇರು ಮಾರುಕಟ್ಟೆಗಳಾದ ಬಾಂಬೆ ಷೇರು ವಿನಿಮಯ ಕೇಂದ್ರ (ಬಿಎಸ್‌ಇ) ಮತ್ತು ರಾಷ್ಟ್ರೀಯ ಷೇರು ವಿನಿಮಯ ಕೇಂದ್ರ (ಎನ್‌ಎಸ್‌ಇ) ವಹಿವಾಟಿಗೆ ತೆರೆದಿರಲಿವೆ.

ಬಜೆಟ್ ದಿನ ಹೂಡಿಕೆದಾರರು ಸರ್ಕಾರದ ಘೋಷಣೆಗಳಿಗೆ ತಕ್ಷಣ ಪ್ರತಿಕ್ರಿಯಿಸುವುದಕ್ಕೆ ಅವಕಾಶ ಕಲ್ಪಿಸುವ ಉದ್ದೇಶದಿಂದ, ಮಾರುಕಟ್ಟೆಗಳನ್ನು ಸಾಮಾನ್ಯ ವಹಿವಾಟು ಸಮಯದ ಪ್ರಕಾರವೇ ನಡೆಸಲಾಗುವುದು ಎಂದು ಬಿಎಸ್‌ಇ ಮತ್ತು ಎನ್‌ಎಸ್‌ಇ ಸ್ಪಷ್ಟಪಡಿಸಿವೆ. ಆ ದಿನ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು 2026–27ನೇ ಸಾಲಿನ ಕೇಂದ್ರ ಬಜೆಟ್ ಅನ್ನು ಮಂಡಿಸಲಿದ್ದಾರೆ.

ರಾಷ್ಟ್ರೀಯ ಷೇರು ವಿನಿಮಯ ಕೇಂದ್ರ (ಎನ್‌ಎಸ್‌ಇ) ಹೂಡಿಕೆದಾರರಿಗೆ ಹೊರಡಿಸಿದ ಸುತ್ತೋಲೆ ಪ್ರಕಾರ,

ಪೂರ್ವ-ಮುಕ್ತ ಮಾರುಕಟ್ಟೆ ಬೆಳಿಗ್ಗೆ 9:00ರಿಂದ 9:08ರವರೆಗೆ ನಡೆಯಲಿದೆ

ಸಾಮಾನ್ಯ ವಹಿವಾಟು ಬೆಳಿಗ್ಗೆ 9:15ರಿಂದ ಮಧ್ಯಾಹ್ನ 3:30ರವರೆಗೆ ಮುಂದುವರಿಯಲಿದೆ

ಅದೇ ರೀತಿಯಾಗಿ, ಬಾಂಬೆ ಷೇರು ವಿನಿಮಯ ಕೇಂದ್ರ (ಬಿಎಸ್‌ಇ) ಕೂಡ ಫೆಬ್ರವರಿ 1ನ್ನು ವಿಶೇಷ ವಹಿವಾಟು ದಿನವೆಂದು ಘೋಷಿಸಿ, ಮಾರುಕಟ್ಟೆಗಳು ಸಾಮಾನ್ಯ ಸಮಯದಲ್ಲೇ ಕಾರ್ಯನಿರ್ವಹಿಸಲಿದೆ ಎಂದು ಸುತ್ತೋಲೆಯ ಮೂಲಕ ತಿಳಿಸಿದೆ.

ಈ ಕ್ರಮದಿಂದ ಬಜೆಟ್ ಘೋಷಣೆಗಳ ಪರಿಣಾಮ ಷೇರು ಮಾರುಕಟ್ಟೆಗಳಲ್ಲಿ ತಕ್ಷಣವೇ ಪ್ರತಿಫಲಿಸುವ ನಿರೀಕ್ಷೆ ವ್ಯಕ್ತವಾಗಿದೆ.

ಹಿಂದೂಸ್ತಾನ್ ಸಮಾಚಾರ್ / Rakesh Mahadevappa


 rajesh pande