
ಚಿತ್ರದುರ್ಗ, 15 ಜನವರಿ (ಹಿ.ಸ.) :
ಆ್ಯಂಕರ್ : ಚಿತ್ರದುರ್ಗ ಜಿಲ್ಲೆಯ ಹೊಳಲ್ಕೆರೆ ಪಟ್ಟಣದ ವಾಲ್ಮೀಕಿ ಮೈದಾನದಲ್ಲಿ ಇಂದು ಶ್ರೀ ಗುರು ಸಿದ್ದರಾಮೇಶ್ವರರ 853ನೇ ಜಯಂತ್ಯೋತ್ಸವ ಕಾರ್ಯಕ್ರಮ ಜರುಗಿತು. ಕಾರ್ಯಕ್ರಮದಲ್ಲಿ ವಿವಿಧ ಮಠಗಳ ಪರಮಪೂಜ್ಯ ಮಠಾಧೀಶರು ದಿವ್ಯ ಸಾನಿಧ್ಯ ವಹಿಸಿದ್ದರು.
ಸಚಿವ ಎಂ.ಬಿ. ಪಾಟೀಲ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು. ಶ್ರೀ ಸಿದ್ದರಾಮೇಶ್ವರರು 12ನೇ ಶತಮಾನದಲ್ಲಿ ಬಸವಾದಿ ಶರಣರ ಪ್ರಭಾವದಲ್ಲಿ ಸಮಾಜಕ್ಕೆ ಸಾಮಾಜಿಕ ಸಮಾನತೆ ತರಲು, ವಚನ ಚಳುವಳಿಯ ಮೂಲಕ ಶ್ರಮಿಸಿದ್ದು, ನೀರಾವರಿ ಕಾರ್ಯಗಳು ಸೇರಿದಂತೆ ಅನೇಕ ಅಮೂಲ್ಯ ಕೊಡುಗೆಗಳನ್ನು ಸಮಾಜಕ್ಕೆ ನೀಡಿದ್ದಾರೆ ಎಂದರು.
ಇದೇ ವೇಳೆ ವಿಜಯಪುರದ ಡಾ. ಫ. ಗು. ಹಳಕಟ್ಟಿ ಸಂಶೋಧನಾ ಕೇಂದ್ರದ ವತಿಯಿಂದ ಪ್ರಕಟಿತ ‘ಸಮತಾ ಯೋಗಿ ಸಿದ್ದರಾಮೇಶ್ವರ’ ಕೃತಿ ಬಿಡುಗಡೆ ಮಾಡಲಾಯಿತು. ಸುಮಾರು 10 ಸಾವಿರ ಪುಸ್ತಕಗಳನ್ನು ಉಚಿತ ವಿತರಣೆ ಮಾಡಲಾಯಿತು. ಕೃತಿ ರಚಿಸಿದ ಡಾ. ಎಸ್. ಕೆ. ಕೊಪ್ಪಾಗೆ ಸನ್ಮಾನಿಸಲಾಯಿತು.
ಹಿಂದೂಸ್ತಾನ್ ಸಮಾಚಾರ್ / Rakesh Mahadevappa