ಹುಬ್ಬಳ್ಳಿ ತಾಲೂಕು ಆಡಳಿತದಿಂದ ಸಿದ್ದರಾಮೇಶ್ವರ ಜಯಂತೋತ್ಸವ
ಹುಬ್ಬಳ್ಳಿ, 15 ಜನವರಿ (ಹಿ.ಸ.) : ಆ್ಯಂಕರ್ : ಸಿದ್ದರಾಮೇಶ್ವರ ಅವರು ಶೂನ್ಯ ಪೀಠದ ಮೂರನೇ ಪೀಠಾಧಿಪತಿಗಳಾಗಿ ಇರುತ್ತಾರೆ. ಸಿದ್ದರಾಮೇಶ್ವರರು ರಚಿಸಿದಂತಹ 68,000 ವಚನಗಳಲ್ಲಿ 18 ಸಾವಿರ ಅಷ್ಟೇ ಲಭ್ಯವಿವೆ. ಉಳಿದ ವಚನಗಳನ್ನು ಸಂಶೋಧಿಸಿ, ಅವುಗಳನ್ನು ಮುಂದಿನ ಪೀಳಿಗೆಗೆ ತಲುಪಿಸುವ ಕಾರ್ಯಗಳಾಗಬೇಕು ಎಂದ
Jayanti


ಹುಬ್ಬಳ್ಳಿ, 15 ಜನವರಿ (ಹಿ.ಸ.) :

ಆ್ಯಂಕರ್ : ಸಿದ್ದರಾಮೇಶ್ವರ ಅವರು ಶೂನ್ಯ ಪೀಠದ ಮೂರನೇ ಪೀಠಾಧಿಪತಿಗಳಾಗಿ ಇರುತ್ತಾರೆ. ಸಿದ್ದರಾಮೇಶ್ವರರು ರಚಿಸಿದಂತಹ 68,000 ವಚನಗಳಲ್ಲಿ 18 ಸಾವಿರ ಅಷ್ಟೇ ಲಭ್ಯವಿವೆ. ಉಳಿದ ವಚನಗಳನ್ನು ಸಂಶೋಧಿಸಿ, ಅವುಗಳನ್ನು ಮುಂದಿನ ಪೀಳಿಗೆಗೆ ತಲುಪಿಸುವ ಕಾರ್ಯಗಳಾಗಬೇಕು ಎಂದು ವಿಧಾನ ಪರಿಷತ್ತಿನ ಸದಸ್ಯರಾದ ಎಫ್.ಎಚ್.ಜಕಪ್ಪನವರ ಹೇಳಿದರು.

ಹುಬ್ಬಳ್ಳಿ ತಾಲೂಕು ಆಡಳಿತಸೌಧದ ತಹಶೀಲ್ದಾರ ಕಾರ್ಯಾಲಯದ ಸಭಾಭವನದಲ್ಲಿ ಕಂದಾಯ ಇಲಾಖೆ ಮತ್ತು ತಾಲೂಕು ಆಡಳಿತದಿಂದ ಶಿವಯೋಗಿ ಶ್ರೀ ಸಿದ್ದರಾಮೇಶ್ವರ ಜಯಂತೋತ್ಸವ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಅಕ್ಕಮಹಾದೇವಿ ವಿಶ್ವವಿದ್ಯಾಲಯದಲ್ಲಿ ಸಿದ್ದರಾಮೇಶ್ವರವರ ಅಧ್ಯಯನ ಪೀಠವಿದೆ. ಆ ಪೀಠಕ್ಕೆ ಆರ್ಥಿಕ ಸಹಾಯ ಬೇಕಾದಲ್ಲಿ ನಿಧಿಯಡಿ ಬೇಕಾಗುವ ಅನುದಾನವನ್ನು ನೀಡಲು ಬದ್ಧನಾಗಿದ್ದೇನೆ. ಅಂಬೇಡ್ಕರ್, ಬುದ್ಧ, ಅಲ್ಲದೆ ಬಸವಣ್ಣನ ವಿಚಾರಗಳನ್ನು ಸೇರಿಸಿಕೊಂಡು ನಾವು ಹೋರಾಟ ಮಾಡಿದ್ದೇವೆ. ಅಂಬೇಡ್ಕರ್ ಅವರು ಶಿಕ್ಷಣಕ್ಕೆ ಎಷ್ಟು ಮಹತ್ವ ನೀಡಿದ್ದಾರೋ, ಆಗಿನ ಕಾಲದಲ್ಲಿ ಸಿದ್ದರಾಮೇಶ್ವರನವರು ಶಿಕ್ಷಣಕ್ಕೆ ಹೆಚ್ಚು ಮಹತ್ವ ನೀಡಿದ್ದರು. ಒಡಿಯಾದಿಂದ ವಡ್ಡ ಪದ ಬಂದಿದೆ. ಕಲ್ಲಿನಿಂದ ಮೂರ್ತಿಗಳನ್ನು ಮಾಡುವುದು, ಕೆರೆಗಳನ್ನು ನಿರ್ಮಾಣ ಮಾಡುವುದು, ದೇವಸ್ಥಾನಗಳನ್ನು ಕಟ್ಟುವುದು ಈ ಸಮಾಜದ ಕುಲ ವೃತ್ತಿಯಾಗಿ ಬಂದಿದೆ. ಸಿದ್ದರಾಮೇಶ್ವರರ ವಚನಗಳನ್ನು ಮನೆ ಮನೆಗೆ ತಲುಪಿಸುವ ಕಾರ್ಯ ಮಾಡಬೇಕಾಗಿದೆ. ಸಿದ್ದರಾಮೇಶ್ವರವರ ಜಯಂತಿ ಆಚರಿಸುವುದರಿಂದ ಅವರ ಪರಂಪರೆ ಮುಂದೆ ಸಾಗದು. ಸಿದ್ಧರಾಮೇಶ್ವರರ ವಚನಗಳನ್ನು ಮುಂದಿನ ಪೀಳಿಗೆಗೆ ತೆಗೆದುಕೊಂಡು ಹೋದಾಗ ಮಾತ್ರ ಅವರ ವಚನಗಳು ಶಾಶ್ವತವಾಗಿ ಉಳಿಯುತ್ತವೆ. ಶಿಕ್ಷಣಕ್ಕೆ ಹೆಚ್ಚಿನ ಮಹತ್ವ ನೀಡಬೇಕು. ಸಮ ಸಮಾಜ ನಿರ್ಮಾಣಕ್ಕೆ ಸಿದ್ದರಾಮೇಶ್ವರ ಕೊಡುಗೆ ಅಪಾರವಾಗಿದೆ ಎಂದರು.

ಹಿಂದೂಸ್ತಾನ್ ಸಮಾಚಾರ್ / Rakesh Mahadevappa


 rajesh pande