ಜಿಲ್ಲಾ ಕ್ರೀಡಾ ಶಾಲೆ-ನಿಲಯಕ್ಕೆ ಅಭ್ಯರ್ಥಿಗಳ ಆಯ್ಕೆ ಪ್ರಕ್ರಿಯೆ
ವಿಜಯಪುರ, 15 ಜನವರಿ (ಹಿ.ಸ.) : ಆ್ಯಂಕರ್ : ವಿಜಯಪುರ ಜಿಲ್ಲೆಯ ಕ್ರೀಡಾ ಶಾಲೆಗಳಿಗೆ 2026-27ನೇ ಸಾಲಿಗೆ ಅಥ್ಲೆಟಿಕ್, ವಾಲಿಬಾಲ್, ಬಾಸ್ಕೆಟ್‌ಬಾಲ್, ಜುಡೋ, ಕುಸ್ತಿ, ಕಬಡ್ಡಿ, ಖೋಖೋ, ಹಾಕಿ, ಸೈಕ್ಲಿಂಗ್, ಫುಟಬಾಲ್, ಜಿಮ್ನಾಸ್ಟಿಕ್, ಫೆನ್ಸಿಂಗ್, ಆರ್ಚರಿ ಅಭ್ಯರ್ಥಿಗಳ ಆಯ್ಕೆಗೆ ಜ.16ರಿಂದ 23ರವರೆಗೆ
ಜಿಲ್ಲಾ ಕ್ರೀಡಾ ಶಾಲೆ-ನಿಲಯಕ್ಕೆ ಅಭ್ಯರ್ಥಿಗಳ ಆಯ್ಕೆ ಪ್ರಕ್ರಿಯೆ


ವಿಜಯಪುರ, 15 ಜನವರಿ (ಹಿ.ಸ.) :

ಆ್ಯಂಕರ್ : ವಿಜಯಪುರ ಜಿಲ್ಲೆಯ ಕ್ರೀಡಾ ಶಾಲೆಗಳಿಗೆ 2026-27ನೇ ಸಾಲಿಗೆ ಅಥ್ಲೆಟಿಕ್, ವಾಲಿಬಾಲ್, ಬಾಸ್ಕೆಟ್‌ಬಾಲ್, ಜುಡೋ, ಕುಸ್ತಿ, ಕಬಡ್ಡಿ, ಖೋಖೋ, ಹಾಕಿ, ಸೈಕ್ಲಿಂಗ್, ಫುಟಬಾಲ್, ಜಿಮ್ನಾಸ್ಟಿಕ್, ಫೆನ್ಸಿಂಗ್, ಆರ್ಚರಿ ಅಭ್ಯರ್ಥಿಗಳ ಆಯ್ಕೆಗೆ ಜ.16ರಿಂದ 23ರವರೆಗೆ 13 ತಾಲೂಕುಗಳಲ್ಲಿ ಬೆಳಿಗ್ಗೆ 9-30ರಿಂದ ಆಯ್ಕೆ ಪ್ರಕ್ರಿಯೆ ಹಮ್ಮಿಕೊಳ್ಳಲಾಗಿದೆ.

ಜ.16ರಂದು ಸಿಂದಗಿ ಸರಕಾರಿ ಪ್ರೌಢಶಾಲೆ ಆವರಣ ಚಿಕ್ಕಸಿಂದಗಿಯಲ್ಲಿ ಹಾಗೂ ಜ.17ರಂದು ದೇವರಹಿಪ್ಪರಗಿಯ ಬಿಎಲ್‌ಡಿಇ ಕಾಲೇಜ್ ಮೈದಾನದಲ್ಲಿ, ತರಬೇತುದಾರರಾದ ಶಂಕಲರ ಸಾನಪ (ಮೊ:9972074147), ಜ.19ರಂದು ಬಬಲೇಶ್ವರದ ಶ್ರೀ ಶಾಂತವೀರ ಪ್ರೌಢಶಾಲೆ ಮೈದಾನದಲ್ಲಿ ತರಬೇತುದಾರರಾದ ಬಸವರಾಜ ಬೆಳ್ಳುಬ್ಬಿ (ಮೊ: 9972691179) ಹಾಗೂ ತಿಕೋಟಾ ತಾಲೂಕಿನ ಅರಕೇರಿ ಸರಕಾರಿ ಪ್ರೌಢಶಾಲೆಯಲ್ಲಿ ತರಬೇತುದಾರರಾದ ಸಲ್ಲಾವುದ್ದಿನ ಮಳಗಿ ಹಾಗೂ ಯಲ್ಲಪ್ಪ ಜಂಪ್ಲೆ (ಮೊ: 9901747866),ಆಲಮೇಲ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ಮೈದಾನದಲ್ಲಿ ತರಬೇತುದಾರರಾದ ಸದಾಶಿವ ಅಮರಪ್ಪಗೋಳ (ಮೊ:9742681994) ನೇತೃತ್ವದಲ್ಲಿ ಆಯ್ಕೆ ಪ್ರಕ್ರಿಯೆ ನಡೆಯಲಿದೆ.

ಜ.20ರಂದು ಇಂಡಿ ತಾಲೂಕು ಕ್ರೀಡಾಂಗಣದಲ್ಲಿ ತರಬೇತುದಾರರಾದ ಯಲ್ಲಪ್ಪ ಜಂಪ್ಲೆ (ಮೊ:9845007342), ತಾಳಿಕೋಟೆಯ ಶ್ರೀ ಖಾಸ್ಗತೇಶ್ವರ ಪ್ರೌಢಶಾಲೆ ಮೈದಾನದಲ್ಲಿ ತರಬೇತುದಾರರಾದ ಪಿ.ಕೆ.ಹಸನಕರ್ (ಮೊ:8147818658), ಜ.21ರಂದು ಚಡಚಣದ ಶ್ರೀ ಸಂಗಮೇಶ್ವರ ಪ್ರೌಢಶಾಲೆ ಮೈದಾನದಲ್ಲಿ ತರಬೇತುದಾರರಾದ ಸಲ್ಲಾವುದ್ದಿನ ಮಳಗಿ ಹಾಗೂ ಯಲ್ಲಪ್ಪ ಜಂಪ್ಲೆ (ಮೊ: 9901747866), ಜ.22 ರಂದು ನಿಡಗುಂದಿ ಸರಕಾರಿ ಪ್ರೌಢಶಾಲೆ ಮಣಗೂರನಲ್ಲಿ ತರಬೇತುದಾರರಾದ ಮಹ್ಮದರಫಿ ನದಾಪ್ (ಮೊ: 9886115909), ಮುದ್ದೇಬಿಹಾಳ ಸರಕಾರಿ ಪ್ರೌಢಶಾಲೆ ಮೈದಾನದಲ್ಲಿ ತರಬೇತುದಾರರಾದ ಸದಾಶಿವ ಅಮರಪ್ಪಗೋಳ (ಮೊ:9742681994) ನೇತೃತ್ವದಲ್ಲಿ ಆಯ್ಕೆ ಪ್ರಕ್ರಿಯೆ ನಡೆಯಲಿದೆ.

ಜ.23ರಂದು ಬಸವನಬಾಗೇವಾಡಿ ಶ್ರೀ ಬಸವೇಶ್ವರ ಪಿಯು ಕಾಲೇಜ್ ಮೈದಾನದಲ್ಲಿ ತರಬೇತುದಾರರಾದ ಮಹ್ಮದರಫಿ ನದಾಪ್ (ಮೊ: 9886115909),ಕೊಲ್ಹಾರ ಸರ್ಕಾರಿ ಪ್ರೌಢಶಾಲೆಯಲ್ಲಿ ತರಬೇತುದಾರರಾದ ಅಲ್ಕಾ ಎನ್. ಫಡತರೆ ಹಾಗೂ ರಮೇಶ ರಾಠೋಡ (ಮೊ: 9448234883) ಹಾಗೂ ವಿಜಯಪುರ ನಗರದ ಡಾ.ಬಿ.ಆರ್.ಅಂಬೇಡ್ಕರ್ ಕ್ರೀಡಾಂಗಣದಲ್ಲಿ ಇಲಾಖೆಯ ಎಲ್ಲ ತರಬೇತುದಾರರ ನೇತೃತ್ವದಲ್ಲಿ ಆಯ್ಕೆ ಪ್ರಕ್ರಿಯೆ ನಡೆಯಲಿದ್ದು, ಈ ಕುರಿತಂತೆ ಹೆಚ್ಚಿನ ಮಾಹಿತಿಗಾಗಿ ತರಬೇತುದಾರರ ಮೊಬೈಲ್ ಸಂಖ್ಯೆಗೆ ಸಂಪರ್ಕಿಸಬಹುದಾಗಿದೆ ಎಂದು ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಸಹಾಯಕ ನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಹಿಂದೂಸ್ತಾನ್ ಸಮಾಚಾರ್ / jyothi deshpande


 rajesh pande