
ವಿಜಯಪುರ, 15 ಜನವರಿ (ಹಿ.ಸ.) :
ಆ್ಯಂಕರ್ : ವಿಜಯಪುರ ಬಿ.ಎಲ್.ಡಿ.ಇ ಸಂಸ್ಥೆಯ ಎ.ವಿಎಸ್ ಆಯುರ್ವೇದ ಮಹಾವಿದ್ಯಾಲಯದ ಪ್ರಾಚಾರ್ಯ
ಡಾ. ಅಶೋಕ ಪಾಟೀಲ ಅವರನ್ನು ಕೇಂದ್ರೀಯ ಆಯುಷ್ ಪರೀಕ್ಷೆ ಪ್ರಾಧಿಕಾರದ ಸಲಹಾ ಸಮಿತಿ ಸದಸ್ಯರನ್ನಾಗಿ ನಾಮನಿರ್ದೇಶನ ಮಾಡಲಾಗಿದೆ.
ಭಾರತೀಯ ಚಿಕಿತ್ಸೆ ಪದ್ಧತಿಗಳ ಆಯೋಗ ಮತ್ತು ಆಯುಷ್ ಇಲಾಖೆ ಮೂರು ವರ್ಷಗಳ ಅವಧಿಗೆ ನಾಮ ನಿರ್ದೇಶನ ಮಾಡಲಾಗಿದೆ.
ಡಾ. ಅಶೋಕ ಪಾಟೀಲ ಅವರು 19 ವರ್ಷಗಳ ಸುಧೀರ್ಘ ಅಧ್ಯಾಪಕ ವೃತ್ತಿಯಲ್ಲಿದ್ದು ಅನೇಕ ಸಂಶೋಧನೆಗಳನ್ನು ಕೈಗೊಂಡು 35 ಕ್ಕೂ ಹೆಚ್ಚು ಪ್ರಭಂದಗಳನ್ನು ಮಂಡಿಸಿದ್ದಾರೆ. ನಾನಾ ಆರೋಗ್ಯ ವಿಶ್ವವಿದ್ಯಾಲಯಗಳಲ್ಲಿ ಪರೀಕ್ಷಕರಾಗಿ ಸಂಶೋಧನೆ ಪರಿಣಿತರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಅಲ್ಲದೇ, ಪಿ.ಎಚ್.ಡಿ ಪದವಿಧರರಿಗೆ ಮಾರ್ಗದರ್ಶಕರಾಗಿ ಅನುಭವ ಪಡೆದಿದ್ದಾರೆ.
ಡಾ. ಅಶೋಲ ಪಾಟೀಲ ಅವರನ್ನು ನಾಮನಿರ್ದೇಶಿತ ಮಾಡಿರುವುದಕ್ಕೆ ಬಿ.ಎಲ್.ಡಿ.ಇ ಸಂಸ್ಥೆಯ ಅಧ್ಯಕ್ಷ ಡಾ. ಎಂ. ಬಿ. ಪಾಟೀಲ, ಕಾರ್ಯದರ್ಶಿ ಸುನೀಲಗೌಡ ಪಾಟೀಲ, ಬಿ.ಎಲ್.ಡಿ.ಇ. ಡೀಮ್ಡ ವಿಶ್ವವಿದ್ಯಾಲಯದ ಸಮಕುಲಾಧಿಪತಿ ಡಾ. ವೈ. ಎಂ.ಜಯರಾಜ, ರಜಿಸ್ಟ್ರಾರ್ ಡಾ. ಆರ್. ವಿ. ಕುಲಕರ್ಣಿ, ಉಪಪ್ರಾಚಾರ್ಯ ಡಾ. ಶಶಿಧರ ನಾಯಕ ಮತ್ತು ಆಸ್ಪತ್ರೆಯ ಆಡಳಿತಾಧಿಕಾರಿ ಡಾ. ಸಂಜಯ ಕಡ್ಲಿಮಟ್ಟಿ, ಬೋಧಕ ಹಾಗೂ ಬೋಧಕರ ಹೊರತಾದ ಸಿಬ್ಬಂದಿ ಅಭಿನಂದನೆ ಸಲ್ಲಿಸಿದ್ದಾರೆ.
ಹಿಂದೂಸ್ತಾನ್ ಸಮಾಚಾರ್ / jyothi deshpande