
ಹಾವೇರಿ, 15 ಜನವರಿ (ಹಿ.ಸ.) :
ಆ್ಯಂಕರ್ : ಮನುಷ್ಯನಿಗೆ ಅನ್ನ ಬಟ್ಟೆ ಹೇಗೆ ಬೇಕೋ ಅದೇ ರೀತಿ ಜ್ಞಾನ ಬೇಕು. ಜ್ಞಾನ ಎಲ್ಲರಿಗೂ ಸಿಗಬೇಕು. ದುಡಿದವರು ಮತ್ತು ಮೇಲ್ವರ್ಗದವರಿಗೆ ಮಾತ್ರ ಜ್ಞಾನ ಸಿಗುತ್ತಿದೆ. ತುಳಿತಕ್ಕೊಳಗಾದ, ದಲಿತ ಕುಟುಂಬದಿಂದ ಬಂದವರಿಗೆ ಜ್ಞಾನ ಸಿಗದಿದ್ದರೆ ಉದ್ದಾರ ಆಗಲು ಸಾಧ್ಯವಿಲ್ಲ. ಗಂಗಾಮತಸ್ಥರು ಕಾಯಕ ನಿಷ್ಠ ಸಾಹಸಮಯ ಸಮುದಾಯ ಎಂದು ಮಾಜಿ ಮುಖ್ಯಮಂತ್ರಿ ಹಾಗೂ ಸಂಸದ ಬಸವರಾಜ ಬೊಮ್ಮಾಯಿ ಹೇಳಿದರು.
ಇಂದು ಹಾವೇರಿ ತಾಲೂಕಿನ ನರಸೀಪುರದಲ್ಲಿ ಶ್ರೀ ನಿಜಶರಣ ಅಂಬಿಗರ 10 ನೇಯ ಶರಣ ಸಂಸೃತಿ ಉತ್ಸವ ಹಾಗೂ ಮಹಾರಥೋತ್ಸವದ ಕಾರ್ಯಕ್ರಮದಲ್ಲಿ ಭಾಗವಹಿಸಿ, ಮಾತನಾಡಿದರು.
ಶರಣ ಅಂಬಿಗರ ಚೌಡಯ್ಯ ಶರಣರಲ್ಲಿಯೇ ಅತ್ಯಂತ ಶ್ರೇಷ್ಠ ಶರಣ. ಅವರ ಜೀವನ ಒಂದು ಆದರ್ಶಮಯವಾದ ಜೀವನ ನುಡಿದಂತೆ ನಡೆದಿರುವ ಶರಣರಲ್ಲಿ ಅಂಬಿಗರ ಚೌಡಯ್ಯ ಮೇರು ವ್ಯಕ್ತಿತ್ವ. ಎಲ್ಲಿವರೆಗೂ ಸೂರ್ಯ ಚಂದ್ರ ಇರುತ್ತಾರೆ. ಅಲ್ಲಿವರೆಗೂ ಈ ಸಮಾಜ ಅತ್ಯಂತ ಪ್ರಭಲವಾಗಿ ಪ್ರಖರವಾಗಿ ಬೆಳೆಯುತ್ತ ಹೋಗುತ್ತದೆ. ಯಾಕೆ ಈ ಮಾತನ್ನು ಹೇಳುತ್ತೇನೆ ಎಂದರೆ, ಈ ಸಮಾಜದ ಮೂರು ಗುಣಗಳು ಮುಖ್ಯ ಒಂದು ಬಹಳ ಕಠಿಣ ಪರಿಶ್ರಮ ಮಾಡುವ ಸಮಾಜ, ಎಂದೂ ಕಾಯಕ ಬಿಡದ ಸಮಾಜ, ಕಾಯಕ ನಿಷ್ಠ ಸಮಾಜ. ಗಂಗಾ ಪುತ್ರರ ಸಮಾಜ. ಎರಡನೇಯದು ಸಾಹಸಮಯ ಸಮುದಾಯ ನೀವು ದೋಣಿಯನ್ನು ನೀರಿಗೆ ಬಿಟ್ಟರೆ ಗಾಳಿ ಬಿರುಗಾಳಿ ಹೇಗೆ ಬೀಸುತ್ತದೊ ಗೊತ್ತಿಲ್ಲ. ಆದರೆ, ಸಮುದ್ರಕ್ಕೆ ದೋಣಿ ತೆಗೆದುಕೊಂಡು ಹೋಗುವುದನ್ನು ಬಿಡುವುದಿಲ್ಲ. ಮೂರನೆಯದ್ದು ಬಹಳ ಆಶಾದಾಯಕ ಸಮಾಜ. ಗಾಳ ಹಾಕಿ ಮೀನು ಹಿಡಿಯುವುದು ಸುಲಭವಲ್ಲ. ಒಂದು ದಿನ ಮೀನು ಸಿಗಬಹುದು ಸಿಗದಿರಬಹುದು. ಪ್ರತಿ ದಿನ ಮೀನು ಸಿಗುತ್ತದೆ ಎನ್ನುವ ವಿಶ್ವಾಸದಲ್ಲಿ ನೀವು ಇರುತ್ತೀರಿ. ಮತ್ತು ನಾವಿಕರಾಗಿ ಎಲ್ಲರನ್ನು ಸುರಕ್ಷಿತವಾಗಿ ಕರೆದುಕೊಂಡು ಹೋಗುತ್ತೀರಿ. ಎಲ್ಲ ಸಮಾಜದೊಂದಿಗೆ ವಿಶ್ವಾಸದಿಂದ ಇದ್ದೀರಿ. ಈ ಸಮಾಜ ಎಂದರೆ ನನಗೆ ಬಹಳ ಪ್ರೀತಿ. ನಾನೂ ಕೂಡ ಗಂಗಾ ಪುತ್ರ. ನನ್ನ ತಾಯಿಯ ಹೆಸರು ಗಂಗವ್ವ ನಾನೂ ನಿಮ್ಮವನೇ. ಈ ಸಮಾಜದಲ್ಲಿ ಜಾಗೃತಿ ಮೂಡಿಸುವ ಕೆಲಸವನ್ನು ಸ್ವಾಮೀಜಿ ಮಾಡುತ್ತಿದ್ದಾರೆ. ಈ ಸಮಾಜಕ್ಕೆ ನ್ಯಾಯ. ಕೊಡುಸುವಲ್ಲಿ ಅವರ ಪಾತ್ರ ಇದೆ. ಮುಂದೆಯೂ ಪೂಜ್ಯರ ಪಾತ್ರ ದೊಡ್ಡದಿದೆ. ಈ ಮಠಕ್ಕೆ ನನ್ನಿಂದ ಬಹಳ ಸಹಾಯವಾಗಿದೆ ಎಂದು ಸ್ವಾಮೀಜಿ ಹೇಳುತ್ತಿದ್ದರು. ಅದು ನನ್ನದಲ್ಲ, ಜನರ ದುಡ್ಡನ್ನು ಜನರಿಗೆ ಕೊಟ್ಟಿದ್ದೇನೆ. ಗಂಗಾ ಪುತ್ರರ ಸೇವೆ ಮಾಡುವ ಅವಕಾಶ ಆ ಭಗವಂತ, ಅಂಬಿಗರ ಚೌಡಯ್ಯ ನನಗೆ ಕೊಟ್ಟಿರುವುದಕ್ಕೆ ಸಂತೋಷವಾಗಿದೆ ಎಂದು ಹೇಳಿದರು.
ಹಿಂದೂಸ್ತಾನ್ ಸಮಾಚಾರ್ / Rakesh Mahadevappa