ಜ.29 ರಿಂದ ಜಿಲ್ಲಾ ಮಟ್ಟದ ರಾಜ್ಯ ಸರ್ಕಾರಿ ನೌಕರರ ಕ್ರೀಡಾಕೂಟ
ಶಾಸ್ತ್ರೀಯ
ಜ.29 ರಿಂದ ಜಿಲ್ಲಾ ಮಟ್ಟದ ರಾಜ್ಯ ಸರ್ಕಾರಿ ನೌಕರರ ಕ್ರೀಡಾಕೂಟ


ವಿಜಯಪುರ, 15 ಜನವರಿ (ಹಿ.ಸ.) :

ಆ್ಯಂಕರ್ : ವಿಜಯಪುರ ಜಿಲ್ಲಾ ಮಟ್ಟದ ರಾಜ್ಯ ಸರ್ಕಾರಿ ನೌಕರರ ಕ್ರೀಡಾಕೂಟ ಹಾಗೂ ಸಾಂಸ್ಕೃತಿಕ ಸ್ಪರ್ಧೆಗಳನ್ನು ಜನವರಿ 29 ರಿಂದ 31ರವರೆಗೆ ನಗರದ ಡಾ.ಬಿ.ಆರ್.ಅಂಬೇಡ್ಕರ್ ಕ್ರೀಡಾಂಗಣದಲ್ಲಿ ಹಮ್ಮಿಕೊಳ್ಳಲಾಗಿದೆ.

ಪುರುಷ ಹಾಗೂ ಮಹಿಳಾ ವಿಭಾಗದಲ್ಲಿ 45 ವರ್ಷ ಮೇಲ್ಪಟ್ಟ ಹಾಗೂ ಒಳಗಿನವರಿಗೆ ಫುಟ್‌ಬಾಲ್, ವಾಲಿಬಾಲ್, ಹಾಕಿ, ಕಬಡ್ಡಿ, ಟೇಬಲ ಟೆನ್ನಿಸ್ (ಸಿಂಗಲ್ಸ್-ಡಬಲ್ಸ್) ಟೆನ್ನಿಸ್, ಶೆಟಲ್ ಬ್ಯಾಡ್ಮಿಂಟನ್, ಬಾಲ್ ಬ್ಯಾಡ್ಮಿಂಟನ್, ಕೇರಂ, ಕ್ರಿಕೆಟ್, ಬಾಸ್ಕೆಟ್‌ಬಾಲ್, ಚೆಸ್, ಟೆನಿಕ್ವಾಯಿಟ್, ಯೋಗ,ಥ್ರೋಬಾಲ್ ಆಟೋಟಗಳು, ಈಜು, ಭಾರ ಎತ್ತುವ ಸ್ಪರ್ಧೆ ಏರ್ಪಡಿಸಲಾಗಿದೆ.

ಸಾಂಸ್ಕೃತಿಕ ಕಾರ್ಯಕ್ರಮಗಳಾದ ಕರ್ನಾಟಕ ಶಾಸ್ತ್ರೀಯ ಸಂಗೀತ, ಕರ್ನಾಟಕ ಲಘು ಶಾಸ್ತ್ರೀಯ ಸಂಗೀತ, ಪಾಶ್ವಾತ್ಯ ಗಾಯನ, ಜಾನಪದ ಗೀತೆ, ಹಿಂದೂಸ್ಥಾನಿ ಶಾಸ್ತ್ರೀಯ ಸಂಗೀತ, ಹಿಂದೂಸ್ಥಾನಿ ಲಘು ಶಾಸ್ತ್ರೀಯ ಸಂಗೀತ, ಕರ್ನಾಟಕ ಕ್ಲಾಸಿಕಲ್, ನೃತ್ಯ, ಕಥಕ್, ಭರತನಾಟ್ಯ, ಮಣಿಪುರಿ, ಕುಚುಪುಡಿ, ಓಡಿಸ್ಸಿ, ಕಥಕಳಿ, ಕಿರುನಾಟಕ ಸ್ಪರ್ಧೆಗಳನ್ನು ಪುರುಷ ಮತ್ತು ಮಹಿಳೆಯರಿಗಾಗಿ ಏರ್ಪಡಿಸಲಾಗುವುದು.

ರಾಜ್ಯ ಮಟ್ಟದ ಮತ್ತು ಜಿಲ್ಲಾ ಮಟ್ಟದ ಕ್ರೀಡೆಗಳಲ್ಲಿ ಭಾಗವಹಿಸುವ ನೌಕರರಿಗೆ ವಿಶೇಷ ಸಾಂದರ್ಭಿಕ ರಜೆ ಪಡೆಯಲು ಅರ್ಹರಾಗಿರುತ್ತಾರೆ. ಸದರಿ ನೌಕರರು ಅವರ ಕೇಂದ್ರ ಸ್ಥಾನದಿಂದ ಆಯ್ಕೆ ನಡೆಯುವ ಸ್ಥಳಕ್ಕೆ ಹೋಗಿ ಬರುವ ಪ್ರಯಾಣಕ್ಕೆ ಎರಡನೇ ದರ್ಜೆ ರೈಲಿನ ಅಥವಾ ಎಕ್ಸಪ್ರೆಸ್ ಬಸ್ ದರವನ್ನು ಪ್ರಯಾಣ ಭತ್ಯೆಯಾಗಿ ಅವರ ಮಾತೃ ಇಲಾಖೆಯಿಂದ ನಿಯಮಾವಳಿಗಳನ್ವಯ ಪಡೆಯಬಹುದಾಗಿದ್ದು, ಈ ಸ್ಪರ್ಧೆಯಲ್ಲಿ ಭಾಗವಹಿಸಲು ಇಚ್ಛೆವುಳ್ಳವರು ದಿನಾಂಕ: 28-01-2026ರೊಳಗಾಗಿ ವೆಬ್‌ಸೈಟ್ https://surveyheart.com/form/6943bb09ef8a6811630bbcb4 ಮೂಲಕ ನೊಂದಾಯಿಸಿಕೊಳ್ಳಬೇಕು.

ಕ್ರೀಡಾಕೂಟದ ನೋಂದಣಿ ಹಾಗೂ ಈ ಕುರಿತಂತೆ ಹೆಚ್ಚಿನ ಮಾಹಿತಿಗಾಗಿ ಕಚೇರಿ ದೂ: 08352-251085 ಅಥವಾ 9535501872 ಸಂಖ್ಯೆಗೆ ಸಂಪರ್ಕಿಸುವ0ತೆ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಸಹಾಯಕ ನಿರ್ದೇಶಕರಾದ ರಾಜಶೇಖರ ಧೈವಾಡಿ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಹಿಂದೂಸ್ತಾನ್ ಸಮಾಚಾರ್ / jyothi deshpande


 rajesh pande