
ಸೇಡಂ, 15 ಜನವರಿ (ಹಿ.ಸ.) :
ಆ್ಯಂಕರ್ : ಸೇಡಂ ಪಟ್ಟಣದಲ್ಲಿರುವ ಶ್ರೀ ಬಸವೇಶ್ವರ ವೃತ್ತದ ಸಮಗ್ರ ಅಭಿವೃದ್ಧಿಗಾಗಿ ಇಂದು ಸಚಿವ ಶರಣ ಪ್ರಕಾಶ ಪಾಟೀಲರು ತಜ್ಞರೊಂದಿಗೆ ಬಸವೇಶ್ವರ ವೃತ್ತಕ್ಕೆ ಭೇಟಿ ನೀಡಿ ಸ್ಥಳ ಪರಿಶೀಲನೆ ನಡೆಸಿದರು.
ಪರಿಶೀಲನೆ ಸಂದರ್ಭದಲ್ಲಿ ವೃತ್ತದ ಅಭಿವೃದ್ಧಿಗೆ ಅಗತ್ಯವಿರುವ ಕ್ರಮಗಳ ಕುರಿತು ತಜ್ಞರು ಹಾಗೂ ಅಧಿಕಾರಿಗಳೊಂದಿಗೆ ಚರ್ಚೆ ನಡೆಸಿದ ಸಚಿವರು, ಬಸವೇಶ್ವರರ ಮೂರ್ತಿಯ ಸೌಂದರ್ಯ ವೃದ್ಧಿ, ವೃತ್ತದ ಸುತ್ತಲಿನ ಲಭ್ಯವಿರುವ ಸ್ಥಳವಕಾಶದ ಸದ್ಬಳಕೆ ಹಾಗೂ ಸಮಗ್ರ ವಿನ್ಯಾಸದ ಕುರಿತು ಕಾರ್ಯಯೋಜನೆ ರೂಪಿಸುವಂತೆ ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಚನೆ ನೀಡಿದರು.
ಇದೇ ವೇಳೆ ವೃತ್ತದ ಸಮೀಪದಲ್ಲಿರುವ ಐತಿಹಾಸಿಕ ಬಾಣಂತಿ ಸ್ತಂಭದ ಅಭಿವೃದ್ಧಿ, ವೃತ್ತದ ಸುತ್ತ ಸಿಸಿ ರಸ್ತೆ ನಿರ್ಮಾಣ ಸೇರಿದಂತೆ ಮೂಲಸೌಕರ್ಯಗಳ ಬಲಪಡಿಸುವ ವಿಚಾರಗಳ ಕುರಿತೂ ಚರ್ಚೆ ನಡೆಯಿತು.
ಬಸವೇಶ್ವರರ ಮೂರ್ತಿ ಹಾಗೂ ವೃತ್ತಕ್ಕೆ ಅಗತ್ಯವಿರುವ ಎಲ್ಲಾ ಸೌಲಭ್ಯಗಳನ್ನು ಸರ್ಕಾರದ ಪರವಾಗಿ ಒದಗಿಸಲಾಗುವುದು. ಯೋಜನೆಗಳನ್ನು ಶೀಘ್ರವೇ ಕಾರ್ಯರೂಪಕ್ಕೆ ತರುವ ಭರವಸೆ ನೀಡಲಾಗಿದೆ ಎಂದು ಸಚಿವರು ಹೇಳಿದರು.
ಹಿಂದೂಸ್ತಾನ್ ಸಮಾಚಾರ್ / Rakesh Mahadevappa