ಎನ್.ಸಿ.ಸಿ. ಬೋಧಕರ ನೇಮಕಾತಿಗೆ ಅರ್ಜಿ ಆಹ್ವಾನ
ಶಿವಮೊಗ್ಗ, 15 ಜನವರಿ (ಹಿ.ಸ.) : ಆ್ಯಂಕರ್ : ಕರ್ನಾಟಕ ಮತ್ತು ಗೋವಾ ಎನ್.ಸಿ.ಸಿ ನಿರ್ದೇಶನಾಲಯವು 2026-27ನೇ ಸಾಲಿಗಾಗಿ ಓರ್ವ ನಿವೃತ್ತ ಸೈನ್ಯಾಧಿಕಾರಿಯನ್ನು ಒಪ್ಪಂದದ ಮೇರೆಗೆ ಶಿಸ್ತು ಮತ್ತು ಜಾಗೃತ ಹುದ್ದೆಗೆ ಹಾಗೂ ಮಾಜಿ ಸೈನಿಕರನ್ನು 30 ಎನ್.ಸಿ.ಸಿ. ಬೋಧಕರ ಹುದ್ದೆಗಳಿಗೆ ಕೆಲವು ಷರತ್ತುಗಳೊಂದಿಗ
ಎನ್.ಸಿ.ಸಿ. ಬೋಧಕರ ನೇಮಕಾತಿಗೆ ಅರ್ಜಿ ಆಹ್ವಾನ


ಶಿವಮೊಗ್ಗ, 15 ಜನವರಿ (ಹಿ.ಸ.) :

ಆ್ಯಂಕರ್ : ಕರ್ನಾಟಕ ಮತ್ತು ಗೋವಾ ಎನ್.ಸಿ.ಸಿ ನಿರ್ದೇಶನಾಲಯವು 2026-27ನೇ ಸಾಲಿಗಾಗಿ ಓರ್ವ ನಿವೃತ್ತ ಸೈನ್ಯಾಧಿಕಾರಿಯನ್ನು ಒಪ್ಪಂದದ ಮೇರೆಗೆ ಶಿಸ್ತು ಮತ್ತು ಜಾಗೃತ ಹುದ್ದೆಗೆ ಹಾಗೂ ಮಾಜಿ ಸೈನಿಕರನ್ನು 30 ಎನ್.ಸಿ.ಸಿ. ಬೋಧಕರ ಹುದ್ದೆಗಳಿಗೆ ಕೆಲವು ಷರತ್ತುಗಳೊಂದಿಗೆ ಅರ್ಜಿ ಆಹ್ವಾನಿಸಿದೆ.

ಆಸಕ್ತರು ಅರ್ಜಿಯನ್ನು ಇಮೇಲ್ “adperskardte@gmail.com“ ಮೂಲಕ ಮತ್ತು ಅಂಚೆ ವಿಳಾಸ NCC Dte (Karnataka and Goa), KSCMF Building, 4th Floor, No-8, Cunningham Road, Bengaluru - 560001 ಮೂಲಕ ಜ.25 ರೊಳಗಾಗಿ ಸಲ್ಲಿಸುವಂತೆ ಶಿವಮೊಗ್ಗ ಸೈನಿಕ ಕಲ್ಯಾಣ ಮತ್ತು ಪುನರ್ವಸತಿ ಇಲಾಖೆಯ ಉಪನಿರ್ದೇಶಕರು ಇವರು ತಮ್ಮ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿರುತ್ತಾರೆ.

ಹೆಚ್ಚಿನ ಮಾಹಿತಿಗಾಗಿ “https://nccindia.gov.in“ ಜಾಲತಾಣವನ್ನು ಅಥವಾ ಮೊಬೈಲ್ ಸಂಖ್ಯೆ 9481405092 ನ್ನು ಸಂಪರ್ಕಿಸುವುದು.

ಹಿಂದೂಸ್ತಾನ್ ಸಮಾಚಾರ್ / Rakesh Mahadevappa


 rajesh pande