
ವಿಜಯಪುರ, 15 ಜನವರಿ (ಹಿ.ಸ.) :
ಆ್ಯಂಕರ್ : ಆಕಸ್ಮಿಕ ಅಗ್ನಿ ಅವಘಡದಿಂದ ಶೀಟ್‌ನಿಂದ ನಿರ್ಮಾಣ ಮಾಡಿದ್ದ ಮನೆ ಸಂಪೂರ್ಣ ಸುಟ್ಟು ಭಸ್ಮವಾಗಿರುವ ಘಟನೆ ವಿಜಯಪುರ ತಾಲೂಕಿನ ಅಲಿಯಾಬಾದ್ ಬಳಿಯ ಪಾಂಗ್ರೂನ್ ದೊಡ್ಡಿ ಬಳಿ ನಡೆದಿದೆ.
ತುಕಾರಾಮ್ ಚವ್ಹಾಣ ಎಂಬುವರಿಗೆ ಸೇರಿದ ಶಡ್ ಮನೆ ಬೆಂಕಿಗಾಹುತಿ ಆಗಿದೆ. ಇನ್ನು ಮನೆಯಲ್ಲಿದ್ದ 5 ಲಕ್ಷ ರೂಪಾಯಿ ನಗದು ಹಾಗೂ 50 ಗ್ರಾಂ ಚಿನ್ನಾಭರಣ ಸುಟ್ಟು ಭಸ್ಮವಾಗಿದೆ. ನಗದು ಹಾಗೂ ಚಿನ್ನಾಭರಣ ಸೇರಿದಂತೆ ಶೆಡ್ ನಲ್ಲಿದ್ದ ವಸ್ತುಗಳನ್ನು ಕಳೆದುಕೊಂಡು ಕುಟುಂಬ ಬೀದಿ ಪಾಲಾಗಿದೆ.
ವಿಜಯಪುರ ಗ್ರಾಮೀಣ ಪೊಲೀಸ್ ಠಾಣ ವ್ಯಾಪ್ತಿಯಲ್ಲಿ ಘಟನೆ ಸಂಭವಿಸಿದೆ.
ಹಿಂದೂಸ್ತಾನ್ ಸಮಾಚಾರ್ / jyothi deshpande