
ಧಾರವಾಡ, 14 ಜನವರಿ (ಹಿ.ಸ.) :
ಆ್ಯಂಕರ್ : 2025-26 ನೇ ಸಾಲಿಗೆ ಧಾರವಾಡ ಜಿಲ್ಲೆಯ ಕ್ರೀಡಾಶಾಲೆ, ಕ್ರೀಡಾ ನಿಲಯಗಳಿಗೆ ಅಭ್ಯರ್ಥಿಗಳ ವಿಭಾಗ ಮಟ್ಟದ ಆಯ್ಕೆ ಪ್ರಕ್ರಿಯೆಯನ್ನು ಫೆಬ್ರವರಿ 05, 2026 ರಂದು ಕಿರಿಯರ ವಿಭಾಗ ಹಾಗೂ ಫೆಬ್ರವರಿ 06, 2026 ರಂದು ಹಿರಿಯರ ವಿಭಾಗದಲ್ಲಿ ಆಯ್ಕೆ ಪ್ರಕ್ರಿಯೆ ಆಯೋಜಿಸಲಾಗಿದೆ.
ತಾಲ್ಲೂಕಾ, ಜಿಲ್ಲಾ ಮಟ್ಟದ ಆಯ್ಕೆ ಪ್ರಕ್ರಿಯೆಯಲ್ಲಿ ಇಲಾಖೆಯ ತರಬೇತುದಾರರಿಗೆ ಕಾರ್ಯ ಹಂಚಿಕೆಯನ್ನು ಮಾಡಲಾಗಿದ್ದು, ಸದರಿ ಕಾರ್ಯ ಹಂಚಿಕೆಯಂತೆ ಕಾರ್ಯನಿರ್ವಹಿಸಿ ಆಯ್ಕೆ ಪ್ರಕ್ರಿಯೆಯನ್ನು ಯಶಸ್ವಿಯಾಗಿ ಸಂಘಟಿಸಲು ಆದೇಶಿಸಿದೆ.
ಕಲಘಟಗಿ ತಾಲ್ಲೂಕುನಲ್ಲಿ ಜನವರಿ 16, 2026 ರಂದು ಬೆಳಿಗ್ಗೆ 9 ಗಂಟೆಗೆ ಶ್ರೀಮತಿ ಶಿವರಾಜದೇವಿ, ಪಿ.ಯು ಕಾಲೇಜು, ಗಳಗಿಹುಲಕೊಪ್ಪ. ಸಂಚಾಲಕರ: ಶ್ಯಾಮಲಾ ಪಾಟೀಲ, ಅಥ್ಲೇಟಿಕ್ಸ್ ತರಬೇತುದಾರರು, ಮೊಬೈಲ್ ಸಂಖ್ಯೆ: 9845868491.
ಧಾರವಾಡ ತಾಲ್ಲೂಕುನಲ್ಲಿ ಜನವರಿ 17, 2026 ರಂದು ಬೆಳಿಗ್ಗೆ 9 ಗಂಟೆಗೆ ಆರ್.ಎನ್.ಶೆಟ್ಟಿ ಜಿಲ್ಲಾ ಕ್ರೀಡಾಂಗಣ, ಸಂಚಾಲಕರ: ಶ್ಯಾಮಲಾ ಪಾಟೀಲ ಅಥ್ಲೇಟಿಕ್ಸ್ ತರಬೇತುದಾರರು, ಮೊಬೈಲ್ ಸಂಖ್ಯೆ: 9845868491.
ಅಣ್ಣಿಗೇರಿ ತಾಲ್ಲೂಕಿನಲ್ಲಿ ಜನವರಿ 16, 2026 ರಂದು ಬೆಳಿಗ್ಗೆ 9 ಗಂಟೆಗೆ ನಂ.1, ಸರ್ಕಾರಿ ಶಾಲೆ, ಅಣ್ಣಿಗೇರಿ, ಸಂಚಾಲಕರ: ಚಂದ್ರಶೇಖರ ನಾಯ್ಕರ ಹಾಕಿ ತರಬೇತುದಾರರು, ಮೊಬೈಲ್ ಸಂಖ್ಯೆ: 9538462597.
ಹುಬ್ಬಳ್ಳಿ ತಾಲ್ಲೂಕಿನಲ್ಲಿ ಜನವರಿ 17, 2026 ರಂದು ಬೆಳಿಗ್ಗೆ 9 ಗಂಟೆಗೆ ಸೆಟ್ಲಮೆಂಟ ಹಾಕಿ ಮೈದಾನ, ಹುಬ್ಬಳ್ಳಿ, ಸಂಚಾಲಕರ: ಚಂದ್ರಶೇಖರ ನಾಯ್ಕರ ಹಾಕಿ ತರಬೇತುದಾರರು, ಮೊಬೈಲ್ ಸಂಖ್ಯೆ: 9538462597.
ನವಲಗುಂದ ತಾಲ್ಲೂಕಿನಲ್ಲಿ ಜನವರಿ 16, 2026 ರಂದು ಬೆಳಿಗ್ಗೆ 9 ಗಂಟೆಗೆ ಹೆಚ್.ಪಿ.ಎಸ್ ಶಾಲೆ ನಂ:3, ಮೊರಬ. ಸಂಚಾಲಕರ: ಶಿವಪ್ಪ ಪಾಟೀಲ್, ಕುಸ್ತಿ ತರಬೇತುದಾರರು ಮೊಬೈಲ್ ಸಂಖ್ಯೆ: 9535314382.
ಕುಂದಗೋಳ ತಾಲ್ಲೂಕಿನಲ್ಲಿ ಜನವರಿ 17, 2026 ರಂದು ಬೆಳಿಗ್ಗೆ 9 ಗಂಟೆಗೆ ಆರ್.ಎಮ್.ಎಸ್.ಎ ಶಾಲೆ, ಸಂಚಾಲಕರ: ಶಿವಪ್ಪ ಪಾಟೀಲ್, ಕುಸ್ತಿ ತರಬೇತುದಾರರು, ಮೊಬೈಲ್ ಸಂಖ್ಯೆ: 9535314382.
ಅಳ್ನಾವರ ತಾಲ್ಲೂಕು ಜನವರಿ 20, 2026 ರಂದು ಬೆಳಿಗ್ಗೆ 9 ಗಂಟೆಗೆ ತಾಲ್ಲೂಕು ಮೈದಾನ, ಅಳ್ನಾವರ, ಸಂಚಾಲಕರ: ಅನುಶ್ರೀ ಎಚ್,ಎಸ್. ಕುಸ್ತಿ ತರಬೇತುದಾರರು, ಮೊಬೈಲ್ ಸಂಖ್ಯೆ: 7022315684
ಹೆಚ್ಚಿನ ಮಾಹಿತಿಗಾಗಿ ದೂರವಾಣಿ ಸಂಖ್ಯೆ: 0836-2447424 ಗೆ ಸಂಪರ್ಕಿಸಬಹುದು ಎಂದು ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಸಹಾಯಕ ನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಹಿಂದೂಸ್ತಾನ್ ಸಮಾಚಾರ್ / Rakesh Mahadevappa