
ಧಾರವಾಡ, 14 ಜನವರಿ (ಹಿ.ಸ.) :
ಆ್ಯಂಕರ್ : ಜನವರಿ 23, 2026 ರಂದು ಬೆಳಿಗ್ಗೆ 11 ಗಂಟೆಗೆ ಜಿಲ್ಲಾಧಿಕಾರಿಗಳ ಕಾರ್ಯಾಲಯದ ವಿ.ಸಿ ಸಭಾಂಗಣದಲ್ಲಿ ವೆಬೆಕ್ಸ್ ಮೂಲಕ ಪಿಂಚಣಿ ಅದಾಲತ್ ಮತ್ತು ಜಿ.ಪಿ.ಎಫ್ ಚಂದಾದಾರರ ಅಹವಾಲು ನಿವಾರಣೆಯ ಕಾರ್ಯಕ್ರಮವನ್ನು ಮಹಾಲೇಖಪಾಲರ ಕಚೇರಿ ಹಾಗೂ ಖಜಾನೆ ಇಲಾಖೆ ಸಮನ್ವಯದಲ್ಲಿ ಹಮ್ಮಿಕೊಳ್ಳಲಾಗಿದೆ.
ಜಿಲ್ಲೆಯ ನಿವೃತ್ತ, ಕುಟುಂಬ ಪಿಂಚಣಿದಾರರ ಕುಂದು ಕೊರತೆಗಳ ನಿವಾರಣೆಗಾಗಿ ಪಿಂಚಣಿ ಅದಾಲತ್ ಮತ್ತು ಜಿ.ಪಿ.ಎಫ್ ಚಂದಾದಾರರ ಕಾರ್ಯಕ್ರಮದಲ್ಲಿ ಎಲ್ಲಾ ಇಲಾಖೆಗಳ ಇಲಾಖಾ ಮುಖ್ಯಸ್ಥರು ಡಿಡಿಓ, ಪಿಂಚಣಿ ಮಂಜೂರಾತಿ ಪ್ರಾಧಿಕಾರಿಗಳು ಹಾಗೂ ಪಿಂಚಣಿ ಪಾವತಿ ಬ್ಯಾಂಕುಗಳಾದ ಎಸ್‍ಬಿಐ, ಯುಬಿಐ, ಕೆನರಾ ಬ್ಯಾಂಕ್ ಮತ್ತು ಬ್ಯಾಂಕ್ ಆಫ್ ಬರೋಡಾ ಬ್ಯಾಂಕ್‍ಗಳ ಮ್ಯಾನೇಜರ್‍ಗಳು ಉಪಸ್ಥಿತರಿರುವಂತೆ ಜಿಲ್ಲಾ ಖಜಾನೆ ಇಲಾಖೆಯ ಉಪ ನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಹಿಂದೂಸ್ತಾನ್ ಸಮಾಚಾರ್ / Rakesh Mahadevappa