
ಬೆಂಗಳೂರು, 14 ಜನವರಿ (ಹಿ.ಸ.) :
ಆ್ಯಂಕರ್ : ಬೆಂಗಳೂರು ಮೆಟ್ರೋ ನೀಲಿ ಮಾರ್ಗ ಕಾಮಗಾರಿ ನಡೆಯುತ್ತಿದ್ದ ವೇಳೆ ಅಗರ ಪ್ರದೇಶದಲ್ಲಿ ಬೃಹತ್ ಕ್ರೇನ್ ಉರುಳಿ ಬಿದ್ದ ಘಟನೆ ಇಂದು ಮುಂಜಾನೆ ಸಂಭವಿಸಿದೆ. ಔಟರ್ ರಿಂಗ್ ರೋಡ್ ಸಂಪರ್ಕ ಕಲ್ಪಿಸುವ ನೀಲಿ ಮಾರ್ಗದ ಕಾಮಗಾರಿ ವೇಳೆ ಈ ಅವ ಸಂಭವಿಸಿದ್ದು, ಯಾವುದೇ ಪ್ರಾಣಹಾನಿ ಅಥವಾ ಗಾಯಗಳು ಸಂಭವಿಸಿಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಮುಂಜಾನೆ ಸುಮಾರು 3:45ರ ಸುಮಾರಿಗೆ 100 ಟನ್ ತೂಕದ ಸ್ಟೀಲ್ ಗರ್ಡರ್ ಅನ್ನು ಮೇಲಕ್ಕೆತ್ತುವ ಕಾರ್ಯ ನಡೆಯುತ್ತಿದ್ದಾಗ ತಾಂತ್ರಿಕ ದೋಷ ಉಂಟಾಗಿ ಕ್ರೇನ್ ಅಸ್ಥಿರಗೊಂಡಿದೆ. ಪರಿಣಾಮವಾಗಿ ಕ್ರೇನ್‌ನ ಒಂದು ಭಾಗ ಏಕಾಏಕಿ ಮೇಲಕ್ಕೆತ್ತಲ್ಪಟ್ಟು, ಸಂಪೂರ್ಣ ಕ್ರೇನ್ ತಲೆಮೇಲಾಗಿರುವ ಸ್ಥಿತಿಗೆ ಬಿದ್ದಿದೆ.
ಬಿಎಂಆರ್‌ಸಿಎಲ್ ಡೆಪ್ಯೂಟಿ ಚೀಫ್ ಇಂಜಿನಿಯರ್ ಸದಾಶಿವ ಅವರು ಮಾಹಿತಿ ನೀಡಿದ್ದು, ಕ್ರೇನ್‌ಗೆ ಅಳವಡಿಸಿದ್ದ ನಾಲ್ಕು ಜಾಕ್‌ಗಳಲ್ಲಿ ಒಂದು ಕಟ್ ಆಗಿರುವುದೇ ಅವಘಡಕ್ಕೆ ಕಾರಣವಾಗಿದೆ. 500 ಟನ್ ತೂಕ ಎತ್ತುವ ಸಾಮರ್ಥ್ಯ ಹೊಂದಿರುವ ಈ ಕ್ರೇನ್, ಜಾಕ್ ವೈಫಲ್ಯದಿಂದ ಸಮತೋಲನ ಕಳೆದುಕೊಂಡಿದೆ ಎಂದು ಅವರು ಸ್ಪಷ್ಟಪಡಿಸಿದ್ದಾರೆ.
ಹಿಂದೂಸ್ತಾನ್ ಸಮಾಚಾರ್ / Rakesh Mahadevappa