ಕಬ್ಬು ವಿತರಿಸಿ ಸಂಕ್ರಾಂತಿ ಶುಭಾಶಯ ಕೋರಿದ ಸಚಿವ ಗುಂಡೂರಾವ್
ಬೆಂಗಳೂರು, 14 ಜನವರಿ (ಹಿ.ಸ.) : ಆ್ಯಂಕರ್ : ನಾಡಿನಾದ್ಯಂತ ಮಕರ ಸಂಕ್ರಾಂತಿ ಹಬ್ಬವನ್ನು ಸಂಭ್ರಮದಿಂದ ಆಚರಿಸಲಾಗುತ್ತಿದೆ. ಈ ಸುಸಂದರ್ಭದಲ್ಲಿ ಗಾಂಧಿನಗರ ವಿಧಾನ ಸಭಾ ಕ್ಷೇತ್ರದ ರಾಮಚಂದ್ರಾಪುರದ ರಾಬರ್ಟ್ ಸನ್ ಬ್ಲಾಕ್‌ನ ಗಣಪತಿ ದೇವಾಲಯದ ಹತ್ತಿರ ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಸ್ಥಳೀಯ ನಿವಾಸಿಗ
Sankranti


ಬೆಂಗಳೂರು, 14 ಜನವರಿ (ಹಿ.ಸ.) :

ಆ್ಯಂಕರ್ : ನಾಡಿನಾದ್ಯಂತ ಮಕರ ಸಂಕ್ರಾಂತಿ ಹಬ್ಬವನ್ನು ಸಂಭ್ರಮದಿಂದ ಆಚರಿಸಲಾಗುತ್ತಿದೆ. ಈ ಸುಸಂದರ್ಭದಲ್ಲಿ ಗಾಂಧಿನಗರ ವಿಧಾನ ಸಭಾ ಕ್ಷೇತ್ರದ ರಾಮಚಂದ್ರಾಪುರದ ರಾಬರ್ಟ್ ಸನ್ ಬ್ಲಾಕ್‌ನ ಗಣಪತಿ ದೇವಾಲಯದ ಹತ್ತಿರ ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಸ್ಥಳೀಯ ನಿವಾಸಿಗಳಿಗೆ ಕಬ್ಬು ವಿತರಿಸಿ ಶುಭಾಶಯ ಕೋರಿದರು.

​ಈ ವೇಳೆ ಮಾತನಾಡಿದ ಅವರು, ಚಳಿಗಾಲದಲ್ಲಿ ಆರೋಗ್ಯ ರಕ್ಷಣೆಯ ಬಗ್ಗೆ ಹೆಚ್ಚಿನ ಗಮನಹರಿಸುವಂತೆ ಕ್ಷೇತ್ರದ ಜನರಿಗೆ ಸಲಹೆ ನೀಡಿದರು. ಸಂಕ್ರಾಂತಿ ಹಬ್ಬದ ವಿಶೇಷವಾಗಿ ಕಬ್ಬು, ಎಳ್ಳು-ಬೆಲ್ಲ ಸವಿದು ಎಲ್ಲರ ಮನಸ್ಸು ಸಂತೋಷದಿಂದ ತುಂಬಿರಲಿ, ಹಳೆಯ ಕಹಿಯನ್ನೆಲ್ಲ ಮರೆತು ಪ್ರತಿಯೊಬ್ಬರಿಗೂ ನೆಮ್ಮದಿಯ ಜೀವನ ಲಭಿಸಲಿ ಎಂದು ಹಾರೈಸಿದರು.

ಹಿಂದೂಸ್ತಾನ್ ಸಮಾಚಾರ್ / Rakesh Mahadevappa


 rajesh pande