ದರೋಡೆ ಆರೋಪಿಗೆ ಏಳು ವರ್ಷ ಜೈಲು ಶಿಕ್ಷೆ
ವಿಜಯಪುರ, 13 ಜನವರಿ (ಹಿ.ಸ.) ಆ್ಯಂಕರ್: ದರೋಡೆ ಮಾಡಿದ ಆರೋಪಿಗೆ ಏಳು ವರ್ಷ ಶಿಕ್ಷೆ ಹಾಗೂ 50 ಸಾವಿರ ದಂಡ ವಿಧಿಸಿ ವಿಜಯಪುರ 1ನೇ ಅಧಿಕ ಜಿಲ್ಲಾ ಹಾಗೂ ಸತ್ರ ನ್ಯಾಯಾಲಯ ಆದೇಶ ನೀಡಿದೆ.‌ ವಿಜಯಪುರ ಜಿಲ್ಲೆಯ ತಾಳಿಕೋಟೆ ಪಟ್ಟಣದ ಪತ್ತೆಪೂರ ಗ್ರಾಮದ ನಿವಾಸಿ ಶ್ರೀಶೈಲ ಹೊಸಮನಿ ಶಿಕ್ಷೆಗೆ ಒಳಗಾದರು. ಇನ್ನು
ದರೋಡೆ ಆರೋಪಿಗೆ ಏಳು ವರ್ಷ ಜೈಲು ಶಿಕ್ಷೆ


ವಿಜಯಪುರ, 13 ಜನವರಿ (ಹಿ.ಸ.)

ಆ್ಯಂಕರ್: ದರೋಡೆ ಮಾಡಿದ ಆರೋಪಿಗೆ ಏಳು ವರ್ಷ ಶಿಕ್ಷೆ ಹಾಗೂ 50 ಸಾವಿರ ದಂಡ ವಿಧಿಸಿ ವಿಜಯಪುರ 1ನೇ ಅಧಿಕ ಜಿಲ್ಲಾ ಹಾಗೂ ಸತ್ರ ನ್ಯಾಯಾಲಯ ಆದೇಶ ನೀಡಿದೆ.‌ ವಿಜಯಪುರ ಜಿಲ್ಲೆಯ ತಾಳಿಕೋಟೆ ಪಟ್ಟಣದ ಪತ್ತೆಪೂರ ಗ್ರಾಮದ ನಿವಾಸಿ ಶ್ರೀಶೈಲ ಹೊಸಮನಿ ಶಿಕ್ಷೆಗೆ ಒಳಗಾದರು. ಇನ್ನು 28-08-2022ರಂದು ರಾತ್ರಿ 9:30 ಗಂಟೆಗೆ ಹುಲಿಬೆಂಕಿ ಕ್ರಾಸ್ ಬಳಿಯ ಬಸ್ ನಿಲ್ದಾಣದಲ್ಲಿ ರಮೇಶ ಲಮಾಣಿ ಎಂಬುವರಿಗೆ ಕಣ್ಣಿಗೆ ಖಾರದ ಪುಡಿ ಎರೆಚಿ ಹಲ್ಲೆಗೈದು ಚಿನ್ನ, ನಗದು, ವಾಚ್, ರಾಯಲ್ ಎನ್‌ಪಿಲ್ಡ್ ಬೈಕ್ ದರೋಡೆಗೈದು ಎಸ್ಕೇಪ್ ಆಗಿದ್ದನ್ನು. ಈ ಬಗ್ಗೆ ತಾಳಿಕೋಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಅದಕ್ಕಾಗಿ ವಿಜಯಪುರ 1ನೇ ಅಧಿಕ ಜಿಲ್ಲಾ ಹಾಗೂ ಸತ್ರ ನ್ಯಾಯಾಲಯದ ನ್ಯಾಯಾಧೀಶರಾದ ಎಚ್.ಎ. ಮೋಹನ ಅವರು ಸಾಕ್ಷಿದಾರ ಪುರಾವೆ ಆಲಿಸಿ, ವಾದ ವಿವಾದ ಆಲಿಸಿ ಆರೋಪಿ ಶ್ರೀಶೈಲ ಹೊಸಮನಿಗೆ ಶಿಕ್ಷೆ ವಿಧಿಶಿ ಆದೇಶ ಹೊರಡಿಸಿದ್ದಾರೆ. ಸರ್ಕಾರದ ಪರವಾಗಿ ವನಿತಾ ಎಸ್.ಇಟಗಿ ವಾದ ಮಂಡಿಸಿದ್ದಾರೆ.

ಹಿಂದೂಸ್ತಾನ್ ಸಮಾಚಾರ್ / jyothi deshpande


 rajesh pande