
ಬೆಳಗಾವಿ, 13 ಜನವರಿ (ಹಿ.ಸ.) :
ಆ್ಯಂಕರ್ : ಬೆಳಗಾವಿ ಗ್ರಾಮೀಣ ಕ್ಷೇತ್ರದ ಹಿಂಡಲಗಾ ಗ್ರಾಮದಲ್ಲಿ ಜಿಲ್ಲಾ ಪಂಚಾಯತ್ ಬೆಳಗಾವಿ, ಪರಿಶಿಷ್ಟ ವರ್ಗಗಳ ಕಲ್ಯಾಣ ಇಲಾಖೆ ಬೆಳಗಾವಿ ಇವರ ಸಂಯುಕ್ತ ಆಶ್ರಯದಲ್ಲಿ ಸುಮಾರು 6.50 ಕೋಟಿ ರೂ,ಗಳ ವೆಚ್ಚದಲ್ಲಿ ನೂತನವಾಗಿ ನಿರ್ಮಾಣಗೊಂಡಿರುವ ಮೆಟ್ರಿಕ್ ನಂತರದ ಬಾಲಕರ ವಸತಿ ನಿಲಯ ದ ಕಟ್ಟಡವನ್ನು ಸಚಿವೆ ಲಕ್ಷ್ಮೀ ಹೆಬ್ಬಾಳಕರ್ ಉದ್ಘಾಟಿಸಿದರು.
ಈ ವೇಳೆ ಮಾತನಾಡಿದ ಅವರು, “ವಿದ್ಯೆ ಇಲ್ಲದವ ಹದ್ದಿಗಿಂತ ಕಡೆ” ಎಂಬ ಗಾದೆ ಮಾತಿನಂತೆ, ಜೀವನದಲ್ಲಿ ಜ್ಞಾನವಿಲ್ಲದಿದ್ದರೆ ಬದುಕು ದಿಕ್ಕಿಲ್ಲದಂತಾಗುತ್ತದೆ. ನಮ್ಮ ಜೀವನದ ಮೊದಲ ಗುರುಗಳು ಮತ್ತು ಕಣ್ಣಿಗೆ ಕಾಣುವ ದೇವರುಗಳೆಂದರೆ ನಮ್ಮ ತಂದೆ-ತಾಯಿಗಳು. ಅವರು ತಮ್ಮ ಸುಖವನ್ನು ಬದಿಗಿಟ್ಟು ಮಕ್ಕಳ ಉನ್ನತಿಯ ಕನಸು ಕಾಣುತ್ತಾರೆ. ಅವರ ಈ ಶ್ರಮಕ್ಕೆ ಬೆಲೆ ಕೊಡುವುದು ನಮ್ಮ ಪ್ರಥಮ ಆದ್ಯತೆಯಾಗಲಿ ಎಂದರು.
ಹಿಂದೂಸ್ತಾನ್ ಸಮಾಚಾರ್ / Rakesh Mahadevappa