ಪುಣೆಕರ್ ಅವರ ನಿಧನಕ್ಕೆ ಸಚಿವ ಪಾಟೀಲ ತೀವ್ರ ಕಂಬನಿ
ವಿಜಯಪುರ, 13 ಜನವರಿ (ಹಿ.ಸ.) : ಆ್ಯಂಕರ್ : ವಿಜಯಪುರದ ಶೈಕ್ಷಣಿಕ ಇತಿಹಾಸದಲ್ಲಿ ಅಚ್ಚಳಿಯದ ಹೆಸರಾಗಿ ಉಳಿಯುವ ಡಾ. ಶಮ್ಶುದ್ದೀನ್ ಎ. ಪುಣೆಕರ್ ಅವರ ನಿಧನಕ್ಕೆ ತೀವ್ರ ಕಂಬನಿ ಮಿಡಿಯುತ್ತೇನೆ. ಸರ್ಕಾರಿ ಉದ್ಯೋಗವನ್ನು ತ್ಯಜಿಸಿ, ಗುಣಮಟ್ಟದ ಹಾಗೂ ಕಡಿಮೆ ವೆಚ್ಚದ ಶಿಕ್ಷಣವನ್ನು ಸಮಾಜದ ಅಂಚಿನವರಿಗೂ, ವಿ
ನಿಧನ


ವಿಜಯಪುರ, 13 ಜನವರಿ (ಹಿ.ಸ.) :

ಆ್ಯಂಕರ್ : ವಿಜಯಪುರದ ಶೈಕ್ಷಣಿಕ ಇತಿಹಾಸದಲ್ಲಿ ಅಚ್ಚಳಿಯದ ಹೆಸರಾಗಿ ಉಳಿಯುವ ಡಾ. ಶಮ್ಶುದ್ದೀನ್ ಎ. ಪುಣೆಕರ್ ಅವರ ನಿಧನಕ್ಕೆ ತೀವ್ರ ಕಂಬನಿ ಮಿಡಿಯುತ್ತೇನೆ.

ಸರ್ಕಾರಿ ಉದ್ಯೋಗವನ್ನು ತ್ಯಜಿಸಿ, ಗುಣಮಟ್ಟದ ಹಾಗೂ ಕಡಿಮೆ ವೆಚ್ಚದ ಶಿಕ್ಷಣವನ್ನು ಸಮಾಜದ ಅಂಚಿನವರಿಗೂ, ವಿಶೇಷವಾಗಿ ಮಹಿಳೆಯರಿಗೆ ತಲುಪಿಸುವ ಧ್ಯೇಯದಿಂದ ತಮ್ಮ ಬದುಕನ್ನೇ ಅರ್ಪಿಸಿದರು.

1969ರಲ್ಲಿ ಒಂದು ಬಾಡಿಗೆ ಮನೆಯಲ್ಲಿ ಕೆಲವೇ ವಿದ್ಯಾರ್ಥಿಗಳೊಂದಿಗೆ ಸಿಕ್ಯಾಬ್ (Socio Economic Cultural Association of Bijapura – SECAB) ಸಂಸ್ಥೆಯನ್ನು ಸ್ಥಾಪಿಸಿದರು.

ನಂತರದ ದಿನಗಳಲ್ಲಿ ಮಹಿಳೆಯರಿಗಾಗಿ ಪಿಯುಸಿ ಹಾಗೂ ಡಿಗ್ರಿ ಕಾಲೇಜುಗಳನ್ನು ಆರಂಭಿಸಿ, ಅವಿಭಜಿತ ವಿಜಯಪುರ ಜಿಲ್ಲೆಯಲ್ಲಿ ಮೊದಲ ಮಹಿಳಾ ಕಾಲೇಜು ಸ್ಥಾಪಿಸಿದ ಗೌರವಕ್ಕೆ ಪಾತ್ರರಾದರು.

ಕಾಲಕ್ರಮೇಣ ಡಿಪ್ಲಾಮೊ ಸೇರಿದಂತೆ 26ಕ್ಕೂ ಅಧಿಕ ಶಿಕ್ಷಣ ಸಂಸ್ಥೆಗಳ ಮಹಾ ವೃಕ್ಷವನ್ನೇ ಬೆಳೆಸಿದರು. ಅಹಂಕಾರವಿಲ್ಲದ ವ್ಯಕ್ತಿತ್ವ, ಧರ್ಮನಿರಪೇಕ್ಷ ಚಿಂತನೆ ಮತ್ತು ಖ್ಯಾತಿಗಿಂತ ಕಾರ್ಯಕ್ಕೆ ಮಹತ್ವ ನೀಡಿದ ಜೀವನವೇ ಅವರ ವೈಶಿಷ್ಟ್ಯ.

ಡಾ. ಪುಣೆಕರ್ ಅವರ ಆತ್ಮಕ್ಕೆ ಚಿರ ಶಾಂತಿ ಸಿಗಲಿ, ಕುಟುಂಬಸ್ಥರು ಹಾಗೂ ಅಭಿಮಾನಿಗಳಿಗೆ ಈ ದುಃಖವನ್ನು ಸಹಿಸುವ ಶಕ್ತಿಯನ್ನು ಪರಮಾತ್ಮ ಕರುಣಿಸಲಿ ಎಂದು ಪ್ರಾರ್ಥಿಸುತ್ತೇನೆ.

ಹಿಂದೂಸ್ತಾನ್ ಸಮಾಚಾರ್ / jyothi deshpande


 rajesh pande