
ವಿಜಯಪುರ, 13 ಜನವರಿ (ಹಿ.ಸ.) :
ಆ್ಯಂಕರ್ : ಸಶಸ್ತ್ರ ಪಡೆ ಯೋಧರ ದಿನಾಚರಣೆ ಅಂಗವಾಗಿ ನಾಳೆ ಮಾಜಿ ಸೈನಿಕರು ಹಾಗೂ ಅವಲಂಬಿತರುಗಳಿಗೆ ದೂರವಾಣಿ ಮೂಲಕ ಕುಂದು ಕೊರತೆಗಳ ಆಲಿಕೆ ಕಾರ್ಯಕ್ರಮ ಆಯೋಜಿಸಲಾಗಿದೆ.
ಅಂದು ಸೈನಿಕ ಕಲ್ಯಾಣ ಮತ್ತು ಪುರ್ನವಸತಿ ಇಲಾಖೆ ಪ್ರಭಾರ ನಿರ್ದೇಶಕರೂ ಆದ ಜಂಟಿ ನಿರ್ದೇಶಕರು ಬೆಂಗಳೂರು ಇವರು ಎಲ್ಲ ಮಾಜಿ ಸೈನಿಕರು ಹಾಗೂ ಅವರ ಅವಲಂಬಿತರ ಕುಂದು-ಕೊರತೆಗಳನ್ನು ದೂರವಾಣಿ ಮೂಲಕ ಸ್ವೀಕರಿಸಿ, ಅಹವಾಲುಗಳನ್ನು ಆಲಿಸಲಿದ್ದು, ಸ್ಥಿರ ದೂರವಾಣಿ 080-25589459, ಮೊಬೈಲ್ : 8105233863, 9871103814 ಹಾಗೂ 7892289635 ಸಂಖ್ಯೆಗೆ ಕರೆ ಮಾಡಿ ತಮ್ಮ ಕುಂದು ಕೊರತೆಗಳನ್ನು ಸಲ್ಲಿಸಬಹುದಾಗಿದೆ ಎಂದು ಸೈನಿಕ ಕಲ್ಯಾಣ ಮತ್ತು ಪುನರ್ವಸತಿ ಇಲಾಖೆ ಉಪನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಹಿಂದೂಸ್ತಾನ್ ಸಮಾಚಾರ್ / jyothi deshpande