
ವಿಜಯಪುರ, 13 ಜನವರಿ (ಹಿ.ಸ.) :
ಆ್ಯಂಕರ್ : ರಾಜ್ಯ ಸರ್ಕಾರ ನಮ್ಮ ವಿವಿಧ ಬೇಡಿಕೆಗಳನ್ನು ಈಡೇರಿಸಬೇಕು ಎಂದು ರಾಜ್ಯ ಆದಿಜಾಂಬವ ಸಂಘದ ಉಪಾಧ್ಯಕ್ಷ ಪರಶುರಾಮ ರೋಣಿಹಾಳ ಹೇಳಿದರು.
ವಿಜಯಪುರ ನಗರದಲ್ಲಿ ನಡೆದ ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿದ ಅವರು, ಪರಿಶಿಷ್ಟ ಜಾತಿಗಳಿಗೆ ಮೂಲಭೂತ ಸೌಲಭ್ಯ ಒದಗಿಸಲು ಎಸ್‌ಸಿಪಿ ರೂಪಿಸಲಾಗಿದೆ. ಆದ್ರೇ, ಸರ್ಕಾರ ಎಸ್‌ಸಿಪಿ ಯೋಜನೆಯಲ್ಲಿ ಒಳಮೀಸಲಾತಿ ಜಾರಿಗೆ ತರಳು ಮುಂದಾಗಿಲ್ಲ. ಅಲ್ಲದೇ, ಪರಿಶಿಷ್ಟ ಜಾತಿಗಳಲ್ಲಿ ಮಾದಿಗ ಸಂಬಂಧಿತ 29 ಜಾತಿಗಳಿವೆ. ಆದ್ರೇ, ಒಳ ಮೀಸಲಾತಿಗಾಗಿ ಮಾಡಲಾದ ಪ್ರವರ್ಗ ಒಂದರಲ್ಲಿ ಮಾದಿಗ ಸಂಬಂಧಿತ 16 ಜಾತಿಗಳಿವೆ. ಇನ್ನು 13 ಜಾತಿಗಳು ಪ್ರವರ್ಗ 3ರಲ್ಲಿ ಇವೆ ಎಂದು ಆರೋಪಿಸಿದರು. ಅದಕ್ಕಾಗಿ ಸರ್ಕಾರ ನಮ್ಮ 9 ಬೇಡಿಕೆಯನ್ನು ತಕ್ಷಣವೇ ಈಡೇರಿಸಬೇಕು ಎಂದು ಒತ್ತಾಯಿಸಿದರು.
ಹಿಂದೂಸ್ತಾನ್ ಸಮಾಚಾರ್ / jyothi deshpande