ಹಸಿರು ಸಂಚಾರದತ್ತ ಭರವಸೆಯ ಹೆಜ್ಜೆ : ಸಚಿವ ಎಂ.ಬಿ. ಪಾಟೀಲ
ಹೊಸಕೋಟೆ, 12 ಜನವರಿ (ಹಿ.ಸ.) : ಆ್ಯಂಕರ್ : ಹೊಸಕೋಟೆಯಲ್ಲಿರುವ ರಿವರ್ ಮೊಬಿಲಿಟಿ ಸಂಸ್ಥೆಯ ಘಟಕದಲ್ಲಿ ಯಮಹಾ EC-06 ಎಲೆಕ್ಟ್ರಿಕ್ ಸ್ಕೂಟರ್ ಅನ್ನು ಇಂದು ಲೋಕಾರ್ಪಣೆಗೊಳಿಸಲಾಯಿತು. ಜಾಗತಿಕ ಬ್ರ್ಯಾಂಡ್ ಯಮಹಾ ಹಾಗೂ ಕರ್ನಾಟಕದಲ್ಲಿ ಹುಟ್ಟಿದ ನವೀನ ಸ್ಟಾರ್ಟ್ಅಪ್ ರಿವರ್ ಮೊಬಿಲಿಟಿ ಕೈಜೋಡಿಸಿ ರಾಜ್ಯದ
Release


ಹೊಸಕೋಟೆ, 12 ಜನವರಿ (ಹಿ.ಸ.) :

ಆ್ಯಂಕರ್ : ಹೊಸಕೋಟೆಯಲ್ಲಿರುವ ರಿವರ್ ಮೊಬಿಲಿಟಿ ಸಂಸ್ಥೆಯ ಘಟಕದಲ್ಲಿ ಯಮಹಾ EC-06 ಎಲೆಕ್ಟ್ರಿಕ್ ಸ್ಕೂಟರ್ ಅನ್ನು ಇಂದು ಲೋಕಾರ್ಪಣೆಗೊಳಿಸಲಾಯಿತು.

ಜಾಗತಿಕ ಬ್ರ್ಯಾಂಡ್ ಯಮಹಾ ಹಾಗೂ ಕರ್ನಾಟಕದಲ್ಲಿ ಹುಟ್ಟಿದ ನವೀನ ಸ್ಟಾರ್ಟ್ಅಪ್ ರಿವರ್ ಮೊಬಿಲಿಟಿ ಕೈಜೋಡಿಸಿ ರಾಜ್ಯದಲ್ಲೇ ಉತ್ಪಾದನೆ ಆರಂಭಿಸಿರುವುದು ಸಂತಸಕರ ಮತ್ತು ಶ್ಲಾಘನೀಯ ಹೆಜ್ಜೆಯಾಗಿದೆ ಎಂದು ಕೈಗಾರಿಕಾ ಸಚಿವ ಎಂ.ಬಿ. ಪಾಟೀಲ ಹೇಳಿದರು.

ಈ ಲೋಕಾರ್ಪಣೆ ಕರ್ನಾಟಕದ ‘ಗ್ರೀನ್ ಮೊಬಿಲಿಟಿ’ ಪಯಣದ ಮಹತ್ವದ ಮೈಲಿಗಲ್ಲಾಗಿದ್ದು, ಹಸಿರು ಸಂಚಾರ ಇಂದಿನ ಕಾಲಘಟ್ಟದ ಅತ್ಯಂತ ಅಗತ್ಯ ಪರಿವರ್ತನೆಗಳಲ್ಲಿ ಒಂದಾಗಿದೆ. ಈ ಬದಲಾವಣೆಯ ಮುಂಚೂಣಿಯಲ್ಲಿ ನಿಲ್ಲಲು ಕರ್ನಾಟಕ ಸರ್ಕಾರ ದೃಢಸಂಕಲ್ಪ ಹೊಂದಿದ್ದು, ಪ್ರಗತಿಪರ ನೀತಿಗಳು, ಬಲಿಷ್ಠ ಇವಿ ಮೂಲಸೌಕರ್ಯ, ಸಂಶೋಧನೆ–ಅಭಿವೃದ್ಧಿ, ಕೌಶಲ್ಯಾಭಿವೃದ್ಧಿ ಹಾಗೂ ಅತ್ಯಾಧುನಿಕ ತಯಾರಿಕಾ ವ್ಯವಸ್ಥೆಗಳ ಮೂಲಕ ನಿರಂತರ ಬೆಂಬಲ ನೀಡುತ್ತಿದೆ ಎಂದು ಸಚಿವರು ತಿಳಿಸಿದರು.

ಇಂದಿನ ‘ರೋಲ್-ಔಟ್’ ಜಾಗತಿಕ ಪರಿಣತಿ ಮತ್ತು ಸ್ಥಳೀಯ ನವೀನತೆಯ ಸಂಯೋಜನೆಯನ್ನು ಪ್ರತಿಬಿಂಬಿಸುತ್ತದೆ. ಇದರಿಂದ ಗುಣಮಟ್ಟದ ನಗರ ಮೊಬಿಲಿಟಿ ಒದಗಿಸುವುದರ ಜೊತೆಗೆ, ಹೊಸಕೋಟೆ ಸೇರಿದಂತೆ ಕೈಗಾರಿಕಾ ಕೇಂದ್ರಗಳಲ್ಲಿ ಸ್ಥಳೀಯ ಸರಬರಾಜು ಸರಪಳಿ ಬಲಪಡಿಸುವಿಕೆ, ಎಂಎಸ್ಎಂಇಗಳಿಗೆ ಉತ್ತೇಜನ ಮತ್ತು ಯುವ ಪ್ರತಿಭೆಗಳಿಗೆ ಹೊಸ ಉದ್ಯೋಗಾವಕಾಶಗಳು ಸೃಷ್ಟಿಯಾಗಲಿವೆ ಎಂದರು.

ಯಮಹಾ ಹಾಗೂ ರಿವರ್ ಮೊಬಿಲಿಟಿ ಸಂಸ್ಥೆಗಳ ಉತ್ಪಾದನೆ ಮತ್ತು R&D ಚಟುವಟಿಕೆಗಳನ್ನು ಇನ್ನಷ್ಟು ವಿಸ್ತರಿಸುವ ಮೂಲಕ ರಾಜ್ಯದಲ್ಲಿ ಹೆಚ್ಚಿನ ಗುಣಮಟ್ಟದ ಉದ್ಯೋಗ ಸೃಷ್ಟಿಗೆ ಸರ್ಕಾರ ಸಂಪೂರ್ಣ ಬೆಂಬಲ ನೀಡಲಿದೆ ಎಂದು ಸಚಿವರು ಭರವಸೆ ನೀಡಿದರು.

ಕಾರ್ಯಕ್ರಮದಲ್ಲಿ ಹೊಸಕೋಟೆಯ ಶಾಸಕ ಶರತ್ ಬಚ್ಚೇಗೌಡ, ಕೈಗಾರಿಕಾ ಇಲಾಖೆಯ ಹಿರಿಯ ಅಧಿಕಾರಿಗಳು, ರಿವರ್ ಮತ್ತು ಯಮಹಾ ಸಂಸ್ಥೆಗಳ ಉನ್ನತ ಅಧಿಕಾರಿಗಳು ಹಾಗೂ ಸಿಬ್ಬಂದಿ ವರ್ಗ ಉಪಸ್ಥಿತರಿದ್ದರು.

ಹಿಂದೂಸ್ತಾನ್ ಸಮಾಚಾರ್ / Rakesh Mahadevappa


 rajesh pande