
ಹಾಸನ, 12 ಜನವರಿ (ಹಿ.ಸ.) :
ಆ್ಯಂಕರ್ : ಹಾಸನದ ಸಂಸದರ ಕಚೇರಿಯಲ್ಲಿ ಮೆಕ್ಕೆಜೋಳ ಬೆಳೆಗೆ ಸಂಬಂಧಿಸಿ ರೈತ ಮುಖಂಡರೊಂದಿಗೆ ಸಂಸದ ಶ್ರೇಯಸ್ ಪಟೇಲ್ ಚರ್ಚೆ ನಡೆಸಿದರು.
ಬಿಳಿಸುಳಿ ರೋಗ ಹಾಗೂ ಹವಾಮಾನ ವೈಪರೀತ್ಯದಿಂದ ಈ ಬಾರಿ ಇಳುವರಿಯಲ್ಲಿ ಕುಸಿತವಾಗಿದೆ.
ಆದ್ದರಿಂದ ರೈತರಿಗೆ ನೆರವಾಗುವ ಉದ್ದೇಶದಿಂದ ರಾಜ್ಯ ಸರ್ಕಾರ ಪ್ರತಿ ಕ್ವಿಂಟಾಲ್ ಗೆ 2,400 ರೂ. ಬೆಂಬಲ ಬೆಲೆ ನೀಡಿ ಖರೀದಿಸಿದೆ. ಕೆಎಂಎಫ್ ವತಿಯಿಂದ ಈಗಾಗಲೇ 10 ಸಾವಿರ ಮೆಟ್ರಿಕ್ ಟನ್ ಮೆಕ್ಕೆಜೋಳ ಖರೀದಿಸಲಾಗಿದೆ.
ಉಳಿದಂತೆ ಬೆಳೆ ವ್ಯತ್ಯಾಸ ಪಾವತಿ ಯೋಜನೆಯಡಿ ಎಪಿಎಂಸಿ ಹಾಗೂ ಮಾರಾಟ ಮಹಾಮಂಡಳದಿಂದ ಬೆಂಬಲ ಬೆಲೆಯಡಿ 2.50 ಲಕ್ಷ ಕ್ವಿಂಟಾಲ್ ಜೋಳ ಖರೀದಿಗೆ ನಿರ್ಧರಿಸಿದ್ದು ಜಿಲ್ಲೆಯ ಎಲ್ಲಾ ಎಪಿಎಂಸಿಗಳಲ್ಲಿ ನೋಂದಣಿ ಪ್ರಕ್ರಿಯೆ ಪ್ರಾರಂಭಿಸಲಾಗಿದೆ. ಜಿಲ್ಲೆಯ ಅನ್ನದಾತರು ಈ ಯೋಜನೆಯ ಲಾಭ ಪಡೆಯಬೇಕೆಂದು ಕೋರಿದರು.
ಹಿಂದೂಸ್ತಾನ್ ಸಮಾಚಾರ್ / Rakesh Mahadevappa