
ಚಿತ್ರದುರ್ಗ, 12 ಜನವರಿ (ಹಿ.ಸ.) :
ಆ್ಯಂಕರ್ : ಮೃಗಾಲಯದಲ್ಲಿ ಪ್ರಾಣಿಗಳ ಆರೈಕೆ ಮಾಡುವಾಗ ಪ್ರಾಣಿಗಳಿಗೆ ಆಹಾರ ಹಾಕುವಾಗ ಜಾಗೃತಿ ವಹಿಸಿ ತಮ್ಮನ್ನು ಕೂಡ ರಕ್ಷಣೆ ಮಾಡಿಕೊಳ್ಳಬೇಕು ಎಂದು ಚಿತ್ರದುರ್ಗ ತಾಲ್ಲೂಕು ಆರೋಗ್ಯಾಧಿಕಾರಿ ಡಾ.ಬಿ.ವಿ.ಗಿರೀಶ್ ಹೇಳಿದರು.
ನಗರದ ಆಡು ಮಲ್ಲೇಶ್ವರ ಕಿರು ಮೃಗಾಲಯದಲ್ಲಿ ಹಮ್ಮಿಕೊಂಡಿದ್ದ ಆರೋಗ್ಯ ತಪಾಸಣಾ ಶಿಬಿರದಲ್ಲಿ ಅವರು ಮಾತನಾಡಿದರು.
ಅನಿವಾರ್ಯ ಸಂದರ್ಭದಲ್ಲಿ ಪ್ರಾಣಿಗಳು ಕಚ್ಚಿದಾಗ ಪರಚಿದಾಗ ಬೇಜವಾಬ್ದಾರಿತನ ಮಾಡದೆ ಸೋಪು ನೀರಿನಿಂದ ಪರಚಿದ ಭಾಗ ಸ್ವಚ್ಛಗೊಳಿಸಬೇಕು. ಯಾವುದೇ ತರಹದ ಬ್ಯಾಂಡೇಜ್ ಕಟ್ಟಬಾರದು. ತಕ್ಷಣ ವೈದ್ಯರಲ್ಲಿ ಪರೀಕ್ಷೆ ಮತ್ತು ಚಿಕಿತ್ಸೆ ಪಡೆಯುವ ಮುಖಾಂತರ ನಮ್ಮನ್ನು ನಾವು ರಕ್ಷಿಸಿಕೊಳ್ಳಬೇಕೆಂದು ತಿಳಿಸಿದರು.
ಪ್ರಾಣಿಗಳ ಸಂಪರ್ಕದಿಂದ ವೈರಸ್‍ನಿಂದ ಹರಡುವ ರೇಬಿಸ್ ರೋಗ ಅಪಾಯಕಾರಿ ಜ್ವರ, ಆಯಾಸ, ಕೆಮ್ಮು, ವಾಂತಿ, ಅತಿಸಾರ ಹಾಗೂ ತೀವ್ರತೆ ಹೆಚ್ಚಾದಂತೆ ಅತಿಯಾದ ಜೊಲ್ಲು ಸುರಿಸುವುದು. ನೀರು ಕುಡಿಯುವ ಭಯ ಇದರ ಲಕ್ಷಣಗಳು ರೋಗ ತಡೆಗೆ ಸರ್ಕಾರಿ ಆಸ್ಪತ್ರೆಗಳಲ್ಲಿ ಚುಚ್ಚುಮದ್ದು ಲಭ್ಯ ಇದೆ. ವೈದ್ಯರ ಸಲಹೆಯಂತೆ ಚಿಕಿತ್ಸೆ ಪಡೆಯುವುದು ಒಳಿತು. ಮಕ್ಕಳಿಗೆ ದಡಾರ ಮತ್ತು ರೂಬೆಲ್ಲ ರೋಗಬಾರದಂತೆ 9ನೇ ತಿಂಗಳಲ್ಲಿ ಹಾಗೂ 18ನೇ ತಿಂಗಳಲ್ಲಿ ಎಂಆರ್ ಲಸಿಕೆ ಉಚಿತವಾಗಿ ನೀಡಲಾಗುತ್ತದೆ ಎಂದರು.
ಹಿಂದೂಸ್ತಾನ್ ಸಮಾಚಾರ್ / Rakesh Mahadevappa