ಜರ್ಮನ್ ಚಾನ್ಸೆಲರ್ ಫ್ರೆಡ್ರಿಕ್ ಮೆರ್ಜ್ ಎರಡು ದಿನಗಳ ಭಾರತ ಭೇಟಿ
ಅಹಮದಾಬಾದ್, 12 ಜನವರಿ (ಹಿ.ಸ.) : ಆ್ಯಂಕರ್ : ಜರ್ಮನ್ ಚಾನ್ಸೆಲರ್ ಫ್ರೆಡ್ರಿಕ್ ಮೆರ್ಜ್ ಅವರು ಎರಡು ದಿನಗಳ ಅಧಿಕೃತ ಭಾರತ ಭೇಟಿಯ ಅಂಗವಾಗಿ ಸೋಮವಾರ ಅಹಮದಾಬಾದ್‌ಗೆ ಆಗಮಿಸಿದ್ದಾರೆ. ತಮ್ಮ ಭೇಟಿಯ ವೇಳೆ ಅವರು ಪ್ರಧಾನಿ ನರೇಂದ್ರ ಮೋದಿ ಅವರನ್ನು ಭೇಟಿಯಾಗಲಿದ್ದು, ಉಭಯ ರಾಷ್ಟ್ರಗಳ ನಡುವಿನ ದ್ವಿಪಕ್ಷ
Fedrik


ಅಹಮದಾಬಾದ್, 12 ಜನವರಿ (ಹಿ.ಸ.) :

ಆ್ಯಂಕರ್ : ಜರ್ಮನ್ ಚಾನ್ಸೆಲರ್ ಫ್ರೆಡ್ರಿಕ್ ಮೆರ್ಜ್ ಅವರು ಎರಡು ದಿನಗಳ ಅಧಿಕೃತ ಭಾರತ ಭೇಟಿಯ ಅಂಗವಾಗಿ ಸೋಮವಾರ ಅಹಮದಾಬಾದ್‌ಗೆ ಆಗಮಿಸಿದ್ದಾರೆ.

ತಮ್ಮ ಭೇಟಿಯ ವೇಳೆ ಅವರು ಪ್ರಧಾನಿ ನರೇಂದ್ರ ಮೋದಿ ಅವರನ್ನು ಭೇಟಿಯಾಗಲಿದ್ದು, ಉಭಯ ರಾಷ್ಟ್ರಗಳ ನಡುವಿನ ದ್ವಿಪಕ್ಷೀಯ ಸಂಬಂಧಗಳನ್ನು ಬಲಪಡಿಸುವ ಕುರಿತು ಚರ್ಚೆ ನಡೆಸಲಿದ್ದಾರೆ.

ಪ್ರಧಾನಿ ಮೋದಿ–ಚಾನ್ಸೆಲರ್ ಮೆರ್ಜ್ ನಡುವಿನ ಮಾತುಕತೆಗಳಲ್ಲಿ ವ್ಯಾಪಾರ, ಹೂಡಿಕೆ, ರಕ್ಷಣಾ ಸಹಕಾರ, ಅತ್ಯಾಧುನಿಕ ತಂತ್ರಜ್ಞಾನಗಳ ಸಹಭಾಗಿತ್ವ ಸೇರಿದಂತೆ ಪ್ರಮುಖ ವಿಷಯಗಳು ಚರ್ಚೆಗೆ ಬರಲಿವೆ. ಇದಲ್ಲದೆ, ಭಾರತಕ್ಕೆ ತಂತ್ರದೃಷ್ಟಿಯಿಂದ ಅತ್ಯಂತ ಮಹತ್ವವಾದ ₹52,500 ಕೋಟಿ (ಅಂದಾಜು US$1.2 ಬಿಲಿಯನ್) ಮೌಲ್ಯದ ಜಲಾಂತರ್ಗಾಮಿ ನೌಕೆಗಳ ಒಪ್ಪಂದವನ್ನು ಅಂತಿಮಗೊಳಿಸುವ ಸಾಧ್ಯತೆ ಇದೆ.

ಈ ಒಪ್ಪಂದದ ಅಡಿಯಲ್ಲಿ ಭಾರತೀಯ ನೌಕಾಪಡೆಗಾಗಿ ಆರು ಅತ್ಯಾಧುನಿಕ ಜಲಾಂತರ್ಗಾಮಿ ನೌಕೆಗಳನ್ನು ಖರೀದಿಸುವ ಪ್ರಸ್ತಾವವಿದ್ದು, ಜರ್ಮನಿಯ ಪ್ರಮುಖ ರಕ್ಷಣಾ ಸಂಸ್ಥೆ ಥೈಸೆನ್‌ಕೃಪ್ ಮೆರೈನ್ ಸಿಸ್ಟಮ್ಸ್ ಮತ್ತು ಭಾರತದ ಮಜಗಾನ್ ಡಾಕ್ ಶಿಪ್‌ಬಿಲ್ಡರ್ಸ್ ಲಿಮಿಟೆಡ್ ನಡುವಿನ ತಾಂತ್ರಿಕ ಹಾಗೂ ಉತ್ಪಾದನಾ ಸಹಕಾರವನ್ನು ಒಳಗೊಂಡಿರಬಹುದು. ಈ ಒಪ್ಪಂದವು ಭಾರತದ ಕಡಲ ರಕ್ಷಣಾ ಸಾಮರ್ಥ್ಯವನ್ನು ಮಹತ್ವವಾಗಿ ವೃದ್ಧಿಸುವುದಾಗಿ ನಿರೀಕ್ಷಿಸಲಾಗಿದೆ.

ಜಾಗತಿಕ ರಾಜಕೀಯ ಅಸ್ಥಿರತೆಯ ನಡುವೆಯೇ ನಡೆಯುತ್ತಿರುವ ಈ ಭೇಟಿಗೆ ಹೆಚ್ಚಿನ ಮಹತ್ವ ನೀಡಲಾಗಿದ್ದು, ಭಾರತ–ಜರ್ಮನಿ ರಕ್ಷಣಾ ಸಹಕಾರವನ್ನು ಹೊಸ ಹಂತಕ್ಕೆ ಕೊಂಡೊಯ್ಯುವ ಉದ್ದೇಶವನ್ನು ಇದು ಪ್ರತಿಬಿಂಬಿಸುತ್ತದೆ. ಜರ್ಮನ್ ಚಾನ್ಸೆಲರ್ ಆಗಿ ಅಧಿಕಾರ ಸ್ವೀಕರಿಸಿದ ಬಳಿಕ ಫ್ರೆಡ್ರಿಕ್ ಮೆರ್ಜ್ ಅವರ ಏಷ್ಯಾಕ್ಕೆ ಇದು ಮೊದಲ ಅಧಿಕೃತ ಭೇಟಿ ಎನ್ನುವುದು ಗಮನಾರ್ಹ.

ಅಹಮದಾಬಾದ್‌ನಲ್ಲಿ ತಮ್ಮ ವಾಸ್ತವ್ಯದ ವೇಳೆ ಚಾನ್ಸೆಲರ್ ಮೆರ್ಜ್ ಅವರು ಪ್ರಧಾನಿ ಮೋದಿಯವರನ್ನು ಭೇಟಿಮಾಡುವುದರ ಜೊತೆಗೆ ಸಬರಮತಿ ಆಶ್ರಮಕ್ಕೆ ಭೇಟಿ ನೀಡಲಿದ್ದಾರೆ. ಅಲ್ಲದೆ, ಗಾಳಿಪಟ ಉತ್ಸವ ಹಾಗೂ ಕೌಶಲ್ಯಾಭಿವೃದ್ಧಿ ಕಾರ್ಯಕ್ರಮಗಳಲ್ಲಿಯೂ ಅವರು ಭಾಗವಹಿಸುವ ಕಾರ್ಯಕ್ರಮವಿದೆ.

ಹಿಂದೂಸ್ತಾನ್ ಸಮಾಚಾರ್ / Rakesh Mahadevappa


 rajesh pande