
ಅಹಮದಾಬಾದ್, 12 ಜನವರಿ (ಹಿ.ಸ.) :
ಆ್ಯಂಕರ್ : ಎರಡು ದಿನಗಳ ಅಧಿಕೃತ ಭಾರತ ಭೇಟಿಯಲ್ಲಿರುವ ಜರ್ಮನ್ ಚಾನ್ಸೆಲರ್ ಫ್ರೆಡ್ರಿಕ್ ಮೆರ್ಜ್ ಅವರು ಇಂದು ಗುಜರಾತ್‌ನ ಅಹಮದಾಬಾದ್‌ನಲ್ಲಿ ಇರುವ ಐತಿಹಾಸಿಕ ಸಬರಮತಿ ಗಾಂಧಿ ಆಶ್ರಮಕ್ಕೆ ಭೇಟಿ ನೀಡಿದರು.
ಈ ಸಂದರ್ಭದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಚಾನ್ಸೆಲರ್ ಮೆರ್ಜ್ ಅವರಿಗೆ ಆತಿಥ್ಯ ವಹಿಸಿ, ಆಶ್ರಮದ ವಿವಿಧ ಭಾಗಗಳನ್ನು ಪರಿಚಯಿಸಿದರು.
ಭಾರತದ ಸ್ವಾತಂತ್ರ್ಯ ಹೋರಾಟದ ಮಹತ್ವದ ಕೇಂದ್ರವಾಗಿರುವ ಸಬರಮತಿ ಆಶ್ರಮದಲ್ಲಿ ಉಭಯ ನಾಯಕರು ಮಹಾತ್ಮ ಗಾಂಧಿಯ ಜೀವನ, ತತ್ವಗಳು ಮತ್ತು ಅಹಿಂಸೆಯ ಸಂದೇಶವನ್ನು ಸ್ಮರಿಸಿದರು. ಆಶ್ರಮ ಆವರಣದಲ್ಲಿ ನಡೆಯುತ್ತಿರುವ ಪುನರ್‌ಅಭಿವೃದ್ಧಿ ಹಾಗೂ ಸಂರಕ್ಷಣಾ ಯೋಜನೆಗಳ ಪ್ರಗತಿಯನ್ನು ಪ್ರಧಾನಿ ಮೋದಿ ಮತ್ತು ಚಾನ್ಸೆಲರ್ ಮೆರ್ಜ್ ಸಮೀಕ್ಷೆ ನಡೆಸಿದರು.
ಈ ಭೇಟಿಯ ವೇಳೆ ಗಾಂಧೀಜಿ ಅವರ ಸರಳ ಜೀವನಶೈಲಿ, ಸ್ವಾವಲಂಬನೆ, ಸತ್ಯ ಮತ್ತು ಅಹಿಂಸೆಯ ತತ್ವಗಳು ಇಂದಿನ ಜಾಗತಿಕ ರಾಜಕೀಯ ಹಾಗೂ ಸಮಾಜಕ್ಕೆ ಹೇಗೆ ಪ್ರಸ್ತುತವಾಗಿವೆ ಎಂಬ ಕುರಿತು ಚರ್ಚೆ ನಡೆಯಿತು. ಜರ್ಮನ್ ಚಾನ್ಸೆಲರ್ ಮೆರ್ಜ್ ಅವರು ಗಾಂಧೀಜಿಯ ತತ್ವಗಳು ವಿಶ್ವಕ್ಕೆ ನೀಡಿದ ಶಾಂತಿಯ ಸಂದೇಶವನ್ನು ಶ್ಲಾಘಿಸಿದರು.
ಸಬರಮತಿ ಆಶ್ರಮ ಭೇಟಿ ನಂತರ, ಪ್ರಧಾನಿ ಮೋದಿ ಮತ್ತು ಚಾನ್ಸೆಲರ್ ಮೆರ್ಜ್ ಅವರು ಒಂದೇ ವಾಹನದಲ್ಲಿ ಸಬರಮತಿ ನದಿ ದಂಡೆಗೆ ತೆರಳಿ ಅಂತಾರಾಷ್ಟ್ರೀಯ ಗಾಳಿಪಟ ಉತ್ಸವ–2026 ಕಾರ್ಯಕ್ರಮದಲ್ಲಿ ಭಾಗವಹಿಸಿದರು.
ಹಿಂದೂಸ್ತಾನ್ ಸಮಾಚಾರ್ / Rakesh Mahadevappa