ಸೋಮನಾಥ ಸ್ವಾಭಿಮಾನ ಪರ್ವ್‌ದಲ್ಲಿ ಪ್ರಧಾನಿ ಮೋದಿ ಭಾಗಿ
ನವದೆಹಲಿ, 11 ಜನವರಿ (ಹಿ.ಸ.) : ಆ್ಯಂಕರ್ : ಸೋಮನಾಥ ಸ್ವಾಭಿಮಾನ ಪರ್ವ್ ಅಂಗವಾಗಿ ಆಯೋಜಿಸಲಾದ ಕಾರ್ಯಕ್ರಮಗಳಲ್ಲಿ ಪ್ರಧಾನಿ ನರೇಂದ್ರ ಮೋದಿ ಶನಿವಾರ ರಾತ್ರಿ ಭಾಗವಹಿಸಿದರು. ಈ ಸಂದರ್ಭದಲ್ಲಿ ನಡೆದ ಭವ್ಯ ಡ್ರೋನ್ ಪ್ರದರ್ಶನವು ಸೋಮನಾಥ ದೇವಾಲಯದ ಸಾವಿರ ವರ್ಷದ ಇತಿಹಾಸವನ್ನು ಕಣ್ಣಿಗೆ ಕಟ್ಟುವಂತೆ ಚಿತ
pm-modi-on-somnath-visit.


ನವದೆಹಲಿ, 11 ಜನವರಿ (ಹಿ.ಸ.) :

ಆ್ಯಂಕರ್ : ಸೋಮನಾಥ ಸ್ವಾಭಿಮಾನ ಪರ್ವ್ ಅಂಗವಾಗಿ ಆಯೋಜಿಸಲಾದ ಕಾರ್ಯಕ್ರಮಗಳಲ್ಲಿ ಪ್ರಧಾನಿ ನರೇಂದ್ರ ಮೋದಿ ಶನಿವಾರ ರಾತ್ರಿ ಭಾಗವಹಿಸಿದರು.

ಈ ಸಂದರ್ಭದಲ್ಲಿ ನಡೆದ ಭವ್ಯ ಡ್ರೋನ್ ಪ್ರದರ್ಶನವು ಸೋಮನಾಥ ದೇವಾಲಯದ ಸಾವಿರ ವರ್ಷದ ಇತಿಹಾಸವನ್ನು ಕಣ್ಣಿಗೆ ಕಟ್ಟುವಂತೆ ಚಿತ್ರಿಸಿ ಜನಮನ ಗೆದ್ದಿತು.

ದೇವಾಲಯ ಸಂಕೀರ್ಣದಲ್ಲಿ ಆಯೋಜಿಸಲಾದ ಈ ಪ್ರದರ್ಶನವು ಪ್ರಾಚೀನ ನಂಬಿಕೆ ಹಾಗೂ ಆಧುನಿಕ ತಂತ್ರಜ್ಞಾನಗಳ ಅಪೂರ್ವ ಸಂಗಮವಾಗಿ ಮೂಡಿ ಬಂತು.

ಕಾರ್ಯಕ್ರಮದ ವೇಳೆ ಪ್ರಧಾನಿ ಮೋದಿ ಸಾಮೂಹಿಕ ಓಂಕಾರ ಪಠಣದಲ್ಲಿ ಭಾಗವಹಿಸಿ, ಓಂ ಎಂಬುದು ವೇದಗಳು, ಉಪನಿಷತ್ತುಗಳು, ಪುರಾಣಗಳು ಹಾಗೂ ವೇದಾಂತಗಳ ಸಾರ ಎಂದು ಹೇಳಿದರು.

ಓಂ ಧ್ಯಾನದ ಮೂಲ, ಯೋಗದ ಅಡಿಪಾಯ ಹಾಗೂ ಆಧ್ಯಾತ್ಮಿಕ ಸಾಧನೆಯ ಗುರಿಯಾಗಿದೆ ಎಂದು ಅವರು ವಿವರಿಸಿದರು. 1000 ಸೆಕೆಂಡುಗಳ ಕಾಲ ನಡೆದ ಓಂಕಾರ ಧ್ವನಿಪಠಣವು ಅಪಾರ ಶಕ್ತಿಯನ್ನು ತುಂಬಿದ್ದು, ಆಂತರಿಕ ಆತ್ಮಕ್ಕೆ ಆನಂದ ನೀಡಿದೆ ಎಂದು ಪ್ರಧಾನಿ ಅಭಿಪ್ರಾಯಪಟ್ಟರು.

ಇದೇ ವೇಳೆ ಗಾಯಕ ಹಂಸರಾಜ್ ರಘುವಂಶಿ ಅವರ ಭಜನೆಗಳು ಭಕ್ತರನ್ನು ಮಂತ್ರಮುಗ್ಧಗೊಳಿಸಿತು. ದೂರದೂರಿನಿಂದ ಆಗಮಿಸಿದ ಜನರು ಪ್ರಧಾನಿಗೆ ಉತ್ಸಾಹಭರಿತ ಸ್ವಾಗತ ಕೋರಿದರು. ಈ ಪ್ರೀತಿ ಹಾಗೂ ಆತ್ಮೀಯತೆಗೆ ಪ್ರಧಾನಿ ಮೋದಿ ಕೃತಜ್ಞತೆ ಸಲ್ಲಿಸಿದರು.

ಇನ್‌ಸ್ಟಾಗ್ರಾಮ್‌ನಲ್ಲಿ ಫೋಟೋಗಳನ್ನು ಹಂಚಿಕೊಂಡ ಪ್ರಧಾನಿ ಮೋದಿ, ಸೋಮನಾಥದ ಪವಿತ್ರ ಭೂಮಿಯಿಂದ ಹೊರಹೊಮ್ಮುವ ಬೆಳಕು ಭಾರತದ ಸಾಂಸ್ಕೃತಿಕ ಶಕ್ತಿಯ ಸಂದೇಶವನ್ನು ಇಡೀ ಜಗತ್ತಿಗೆ ಸಾರುತ್ತಿದೆ ಎಂದು ಬಣ್ಣಿಸಿದರು.

ಹಿಂದೂಸ್ತಾನ್ ಸಮಾಚಾರ್ / Rakesh Mahadevappa


 rajesh pande