
ಟೆಹ್ರಾನ್/ವಾಷಿಂಗ್ಟನ್, 11 ಜನವರಿ (ಹಿ.ಸ.) :
ಆ್ಯಂಕರ್ : ಇರಾನ್‌ನಲ್ಲಿ ಹಣದುಬ್ಬರ ವಿರೋಧಿ ಪ್ರತಿಭಟನೆಗಳು ತೀವ್ರಗೊಂಡಿದ್ದು, ಕಳೆದ 48 ಗಂಟೆಗಳಲ್ಲಿ ಕನಿಷ್ಠ 2,000 ಮಂದಿ ಸಾವನ್ನಪ್ಪಿರುವುದಾಗಿ ಇರಾನ್ ಇಂಟರ್ನ್ಯಾಷನಲ್ ವರದಿ ಮಾಡಿದೆ. ಭದ್ರತಾ ಪಡೆಗಳು ಪ್ರತಿಭಟನಾಕಾರರ ಮೇಲೆ ಗುಂಡಿನ ದಾಳಿ ಹಾಗೂ ಕಠಿಣ ಕ್ರಮ ಕೈಗೊಂಡಿರುವ ಆರೋಪಗಳಿವೆ. ಜನವರಿ 8ರಿಂದ ದೇಶದಾದ್ಯಂತ ಇಂಟರ್ನೆಟ್ ಸೇವೆ ಸ್ಥಗಿತಗೊಂಡಿದೆ.
ಸುಪ್ರೀಂ ನಾಯಕ ಅಯತೊಲ್ಲಾ ಅಲಿ ಖಮೇನಿ ಪ್ರತಿಭಟನಾಕಾರರನ್ನು ವಿದೇಶಿ ಶಕ್ತಿಗಳ ಏಜೆಂಟರು ಎಂದು ಆರೋಪಿಸಿ ಬಲಪ್ರಯೋಗದ ಎಚ್ಚರಿಕೆ ನೀಡಿದ್ದಾರೆ. ರಾಜ್ಯ ಮಾಧ್ಯಮಗಳು ಪರಿಸ್ಥಿತಿ ನಿಯಂತ್ರಣದಲ್ಲಿದೆ ಎಂದು ಹೇಳುತ್ತಿದ್ದು, ಪೋಷಕರಿಗೆ ಮಕ್ಕಳನ್ನು ಬೀದಿಗೆ ಬಿಡದಂತೆ ಎಚ್ಚರಿಕೆ ನೀಡಲಾಗಿದೆ.
ಈ ನಡುವೆ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್, “ಇರಾನ್ ಸ್ವಾತಂತ್ರ್ಯದತ್ತ ನೋಡುತ್ತಿದೆ, ಅಮೆರಿಕ ಸಹಾಯಕ್ಕೆ ಸಿದ್ಧ” ಎಂದು ಹೇಳಿದ್ದು, ಖಮೇನಿಯಿಂದ ಇರಾನ್ ಅನ್ನು ಮುಕ್ತಗೊಳಿಸುವ ಬಗ್ಗೆ ಸುಳಿವು ನೀಡಿದ್ದಾರೆ. ರಿಪಬ್ಲಿಕನ್ ನಾಯಕರು ಇರಾನಿನ ಪ್ರತಿಭಟನಾಕಾರರಿಗೆ ಬೆಂಬಲ ವ್ಯಕ್ತಪಡಿಸಿದ್ದಾರೆ.
ಅಶಾಂತಿಯ ಹಿನ್ನೆಲೆ ಲುಫ್ಥಾನ್ಸಾ, ಟರ್ಕಿಶ್ ಏರ್‌ಲೈನ್ಸ್, ಕತಾರ್ ಏರ್‌ವೇಸ್ ಸೇರಿದಂತೆ ಹಲವು ವಿಮಾನಯಾನ ಸಂಸ್ಥೆಗಳು ಇರಾನ್‌ಗೆ ವಿಮಾನ ಸೇವೆಗಳನ್ನು ರದ್ದುಗೊಳಿಸಿವೆ.
ಹಿಂದೂಸ್ತಾನ್ ಸಮಾಚಾರ್ / Rakesh Mahadevappa