ಸೋಮನಾಥದಲ್ಲಿ ಪ್ರಧಾನಿ ಮೋದಿ ರುದ್ರಾಭಿಷೇಕ
ನವದೆಹಲಿ, 11 ಜನವರಿ (ಹಿ.ಸ.) : ಆ್ಯಂಕರ್ : ಪ್ರಧಾನಿ ನರೇಂದ್ರ ಮೋದಿ ಅವರು ಶನಿವಾರ ಮೊದಲ ಜ್ಯೋತಿರ್ಲಿಂಗವಾದ ಗುಜರಾತ್‌ನ ಸೋಮನಾಥ ಮಹಾದೇವ ದೇವಸ್ಥಾನದಲ್ಲಿ ಎಲ್ಲಾ ವಿಧಿವಿಧಾನಗಳೊಂದಿಗೆ ಪೂಜೆ ಸಲ್ಲಿಸಿ, ರುದ್ರಾಭಿಷೇಕ ನೆರವೇರಿಸಿದರು. ಈ ಸಂದರ್ಭದಲ್ಲಿ ಸಾರ್ವಜನಿಕ ಕಲ್ಯಾಣ, ಶಾಂತಿ ಮತ್ತು ಸಮೃದ್ಧಿ
Pm pooja


ನವದೆಹಲಿ, 11 ಜನವರಿ (ಹಿ.ಸ.) :

ಆ್ಯಂಕರ್ : ಪ್ರಧಾನಿ ನರೇಂದ್ರ ಮೋದಿ ಅವರು ಶನಿವಾರ ಮೊದಲ ಜ್ಯೋತಿರ್ಲಿಂಗವಾದ ಗುಜರಾತ್‌ನ ಸೋಮನಾಥ ಮಹಾದೇವ ದೇವಸ್ಥಾನದಲ್ಲಿ ಎಲ್ಲಾ ವಿಧಿವಿಧಾನಗಳೊಂದಿಗೆ ಪೂಜೆ ಸಲ್ಲಿಸಿ, ರುದ್ರಾಭಿಷೇಕ ನೆರವೇರಿಸಿದರು.

ಈ ಸಂದರ್ಭದಲ್ಲಿ ಸಾರ್ವಜನಿಕ ಕಲ್ಯಾಣ, ಶಾಂತಿ ಮತ್ತು ಸಮೃದ್ಧಿಗಾಗಿ ಅವರು ಪ್ರಾರ್ಥಿಸಿದರು. ದೇಶದ 12 ಜ್ಯೋತಿರ್ಲಿಂಗಗಳ ಪ್ರತಿನಿಧಿಗಳು ವೇದ ಮಂತ್ರ ಪಠಣ ಮಾಡಿದ್ದು, ಪ್ರಧಾನಿ ಸುಮಾರು 40 ನಿಮಿಷಗಳ ಕಾಲ ಪೂಜೆಯಲ್ಲಿ ಭಾಗವಹಿಸಿದರು.

ಪೂಜೆಯ ಬಳಿಕ ದೇವಾಲಯದ ಆವರಣದಲ್ಲಿ ನಡೆದ ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ಪ್ರಧಾನಿ ಭಾಗವಹಿಸಿ, ಕಲಾವಿದರಿಗೆ ಕೃತಜ್ಞತೆ ಸಲ್ಲಿಸಿದರು. ಇದಕ್ಕೂ ಮುನ್ನ “ಸೋಮನಾಥ ಸ್ವಾಭಿಮಾನ್ ಪರ್ವ್” ಅಂಗವಾಗಿ ಆಯೋಜಿಸಿದ್ದ ಭವ್ಯ ಶೌರ್ಯ ಯಾತ್ರೆಯಲ್ಲಿ 108 ಕುದುರೆಗಳೊಂದಿಗೆ ಜಾನಪದ ಕಲಾವಿದರು ಪ್ರಧಾನಿಗೆ ಅದ್ದೂರಿ ಸ್ವಾಗತ ನೀಡಿದರು.

ಗುಜರಾತ್ ಪ್ರವಾಸದ ಭಾಗವಾಗಿ, ಪ್ರಧಾನಿ ಮೋದಿ ಸೋಮನಾಥದಿಂದ ರಾಜ್‌ಕೋಟ್‌ಗೆ ತೆರಳಿ ಸೌರಾಷ್ಟ್ರ–ಕಚ್ ವೈಬ್ರೆಂಟ್ ಶೃಂಗಸಭೆ ಉದ್ಘಾಟಿಸಿ, ನಂತರ ಅಹಮದಾಬಾದ್ ಹಾಗೂ ಗಾಂಧಿನಗರದಲ್ಲಿ ಕಾರ್ಯಕ್ರಮಗಳಲ್ಲಿ ಪಾಲ್ಗೊಳ್ಳಲಿದ್ದಾರೆ.

ಹಿಂದೂಸ್ತಾನ್ ಸಮಾಚಾರ್ / Rakesh Mahadevappa


 rajesh pande