
ನವದೆಹಲಿ, 11 ಜನವರಿ (ಹಿ.ಸ.) :
ಆ್ಯಂಕರ್ : ಸೋಮನಾಥ ಯಾತ್ರೆಯನ್ನು ಇನ್ನಷ್ಟು ಸ್ಮರಣೀಯ ಹಾಗೂ ಸುವ್ಯವಸ್ಥಿತವಾಗಿಸುವ ಉದ್ದೇಶದಿಂದ ಪ್ರಧಾನಿ ನರೇಂದ್ರ ಮೋದಿ ಶನಿವಾರ ರಾತ್ರಿ ಶ್ರೀ ಸೋಮನಾಥ ಟ್ರಸ್ಟ್ ಸಭೆಗೆ ಅಧ್ಯಕ್ಷತೆ ವಹಿಸಿ ಸದಸ್ಯರೊಂದಿಗೆ ಸಮಾಲೋಚನೆ ನಡೆಸಿದರು.
ಸಭೆಯಲ್ಲಿ ದೇವಾಲಯ ಸಂಕೀರ್ಣದ ಮೂಲಸೌಕರ್ಯಗಳನ್ನು ಮೇಲ್ದರ್ಜೆಗೇರಿಸುವುದು, ಭಕ್ತರಿಗೆ ಉತ್ತಮ ಸೌಲಭ್ಯ ಕಲ್ಪಿಸುವುದು ಹಾಗೂ ತೀರ್ಥಯಾತ್ರೆಯ ಅನುಭವವನ್ನು ಮತ್ತಷ್ಟು ಸಮೃದ್ಧಗೊಳಿಸುವ ಅಂಶಗಳ ಕುರಿತು ವಿವರವಾಗಿ ಚರ್ಚಿಸಲಾಯಿತು.
ಸಭೆಯ ನಂತರ ಎಕ್ಸನಲ್ಲಿ ಪ್ರತಿಕ್ರಿಯೆ ನೀಡಿದ ಪ್ರಧಾನಿ ಮೋದಿ, ಸೋಮನಾಥದಲ್ಲಿ ಇರುವುದೇ ಒಂದು ಮಹಾ ಸೌಭಾಗ್ಯ ಎಂದು ಬಣ್ಣಿಸಿದರು. ಇದು ಭಾರತೀಯ ನಾಗರಿಕತೆಯ ಶೌರ್ಯ, ಸ್ಥೈರ್ಯ ಮತ್ತು ಅಜರಾಮರ ಆತ್ಮಶಕ್ತಿಯ ಹೆಮ್ಮೆಯ ಸಂಕೇತವಾಗಿದೆ ಎಂದು ಅವರು ಹೇಳಿದರು.
1026ರಲ್ಲಿ ಸೋಮನಾಥ ದೇವಾಲಯದ ಮೇಲೆ ನಡೆದ ಮೊದಲ ದಾಳಿಯ 1,000ನೇ ವಾರ್ಷಿಕೋತ್ಸವವನ್ನು ದೇಶದಾದ್ಯಂತ ಸ್ಮರಿಸುವ ಸೋಮನಾಥ ಸ್ವಾಭಿಮಾನ ಪರ್ವದ ಸಂದರ್ಭದಲ್ಲಿ ತಮ್ಮ ಭೇಟಿ ಸಂಭವಿಸಿರುವುದು ವಿಶೇಷ ಎಂದು ಅವರು ಉಲ್ಲೇಖಿಸಿದರು.
ಸೋಮನಾಥಕ್ಕೆ ಆಗಮಿಸಿದ ಸಂದರ್ಭದಲ್ಲಿ ಜನರಿಂದ ದೊರೆತ ಆತ್ಮೀಯ ಸ್ವಾಗತಕ್ಕೆ ಪ್ರಧಾನಿ ಮೋದಿ ಹೃತ್ಪೂರ್ವಕ ಕೃತಜ್ಞತೆ ಸಲ್ಲಿಸಿದರು.
ಮತ್ತೊಂದು ಪೋಸ್ಟ್‌ನಲ್ಲಿ, “ಇಂದು ಸಂಜೆ ಸೋಮನಾಥದಲ್ಲಿ ಶ್ರೀ ಸೋಮನಾಥ ಟ್ರಸ್ಟ್ ಸಭೆ ನಡೆಸಲಾಯಿತು.
ದೇವಾಲಯ ಸಂಕೀರ್ಣದ ಮೂಲಸೌಕರ್ಯ ಅಭಿವೃದ್ಧಿ ಮತ್ತು ಸೋಮನಾಥ ತೀರ್ಥಯಾತ್ರೆಯನ್ನು ಇನ್ನಷ್ಟು ಸ್ಮರಣೀಯವಾಗಿಸುವ ಮಾರ್ಗಗಳ ಕುರಿತು ಮಹತ್ವದ ಚರ್ಚೆ ನಡೆಯಿತು” ಎಂದು ಅವರು ತಿಳಿಸಿದ್ದಾರೆ.
ಹಿಂದೂಸ್ತಾನ್ ಸಮಾಚಾರ್ / Rakesh Mahadevappa