ಕೊಪ್ಪಳ ಕಿಮ್ಸ್ನಲ್ಲಿ ಉದ್ಯೋಗ ; ಮಧ್ಯವರ್ತಿಗಳಿಂದ ಮೋಸ ಹೋಗದಂತೆ ಎಚ್ಚರಿಕೆ
ಕೊಪ್ಪಳ, 09 ಸೆಪ್ಟೆಂಬರ್ (ಹಿ.ಸ.) : ಆ್ಯಂಕರ್ : ಕೊಪ್ಪಳ ವೈದ್ಯಕೀಯ ವಿಜ್ಞಾನಗಳ ಸಂಸ್ಥೆ ಹಾಗೂ ಸಂಸ್ಥೆಯ ಅಧೀನದಲ್ಲಿರುವ ಯಾವುದೇ ಆಸ್ಪತ್ರೆಗಳಲ್ಲಿ ಕೆಲಸ ಕೊಡಿಸುವುದಾಗಿ ಕೆಲ ಮಧ್ಯವರ್ತಿಗಳು ಜನರಿಗೆ ಆಮೀಷವೊಡ್ಡಿ, ಹಣ ಕೇಳುತ್ತಿರುವ ಆರೋಪ ಸಂಸ್ಥೆಯ ಗಮನಕ್ಕೆ ಬಂದಿದ್ದು, ಸಾರ್ವಜನಿಕರು ಮೋಸ ಹೋಗದಂತೆ ಕ
ಕೊಪ್ಪಳ ಕಿಮ್ಸ್ನಲ್ಲಿ ಉದ್ಯೋಗ ; ಮಧ್ಯವರ್ತಿಗಳಿಂದ ಮೋಸ ಹೋಗದಂತೆ ಎಚ್ಚರಿಕೆ


ಕೊಪ್ಪಳ, 09 ಸೆಪ್ಟೆಂಬರ್ (ಹಿ.ಸ.) :

ಆ್ಯಂಕರ್ : ಕೊಪ್ಪಳ ವೈದ್ಯಕೀಯ ವಿಜ್ಞಾನಗಳ ಸಂಸ್ಥೆ ಹಾಗೂ ಸಂಸ್ಥೆಯ ಅಧೀನದಲ್ಲಿರುವ ಯಾವುದೇ ಆಸ್ಪತ್ರೆಗಳಲ್ಲಿ ಕೆಲಸ ಕೊಡಿಸುವುದಾಗಿ ಕೆಲ ಮಧ್ಯವರ್ತಿಗಳು ಜನರಿಗೆ ಆಮೀಷವೊಡ್ಡಿ, ಹಣ ಕೇಳುತ್ತಿರುವ ಆರೋಪ ಸಂಸ್ಥೆಯ ಗಮನಕ್ಕೆ ಬಂದಿದ್ದು, ಸಾರ್ವಜನಿಕರು ಮೋಸ ಹೋಗದಂತೆ ಕಿಮ್ಸ್ ನಿರ್ದೇಶಕರಾದ ವೈಜನಾಥ ಇಟಗಿ ಅವರು ಎಚ್ಚರಿಕೆ ನೀಡಿದ್ದಾರೆ.

ಕಿಮ್ಸ್ ಸಂಸ್ಥೆ ಅಥವಾ ಸಂಸ್ಥೆಯ ಅಧೀನದಲ್ಲಿ ಜಿಲ್ಲಾ ಆಸ್ಪತ್ರೆಯು ಕಾರ್ಯನಿರ್ವಹಿಸುತ್ತಿದೆ. ಕಿಮ್ಸ್ ಕಾಲೇಜು ಬಳಿ ಹೊಸದಾಗಿ 450 ಹಾಸಿಗೆ ಸಾಮರ್ಥ್ಯದ ಆಸ್ಪತ್ರೆಯನ್ನು ನಿರ್ಮಿಸಿದ್ದು, ಇನ್ನೂ ಉದ್ಘಾಟನೆ ಆಗಿರುವುದಿಲ್ಲ. ಪ್ರಸ್ತುತ ಕಿಮ್ಸ್ ಸಂಸ್ಥೆ ಹೊಸದಾಗಿ ಯಾವುದೇ ಹುದ್ದೆಗಳಿಗೆ ನೇಮಕಾತಿ ನಡೆಸಿರುವುದಿಲ್ಲ. ಸಂಸ್ಥೆಯಲ್ಲಿ ಯಾವುದೇ ನೇಮಕಾತಿ ಇದ್ದಲ್ಲಿ ನಿಯಮಾನುಸಾರ ಪ್ರಕಟಣೆ ಹೊರಡಿಸಿ ನೇಮಕಾತಿ ನಡೆಸಲಾಗುವುದು ಹಾಗೂ ನೇಮಕಾತಿ ಪ್ರಕ್ರಿಯೆಯಲ್ಲಿ ಯಾವುದೇ ಮಧ್ಯವರ್ತಿಗಳಿರುವುದಿಲ್ಲ.

ಸಂಸ್ಥೆಯ ಹೆಸರಿನಲ್ಲಿ ಕೆಲಸ ಕೊಡಿಸುವುದಾಗಿ ಯಾರಾದರೂ ಆಮೀಷ ಒಡ್ಡಿದಲ್ಲಿ ಮೋಸ ಹೋಗಬಾರದು ಮತ್ತು ಮಧ್ಯವರ್ತಿಗಳಿಗೆ ಹಣ ನೀಡದೇ ಜಾಗರೂಕರಾಗಿರಬೇಕು. ಒಂದು ವೇಳೆ ಯಾರಾದರೂ ಮಧ್ಯವರ್ತಿಗಳು ಕೆಲಸ ಕೊಡಿಸುವುದಾಗಿ ಆಮೀಷ ಒಡ್ಡಿದಲ್ಲಿ ಕಿಮ್ಸ್ ನಿರ್ದೇಶಕರ ಗಮನಕ್ಕೆ ತರುವಂತೆ ಕಿಮ್ಸ್ ತಿಳಿಸಿದೆ.

ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್


 rajesh pande