ರಾಯಚೂರು, 09 ಸೆಪ್ಟೆಂಬರ್ (ಹಿ.ಸ.) :
ಆ್ಯಂಕರ್ : ಪರಿಶಿಷ್ಟ ಪಂಗಡಗಳ ಅಭಿವೃದ್ಧಿ ನಿಗಮದ ಅಧ್ಯಕ್ಷರು ಆಗಿರುವ ರಾಯಚೂರು ಗ್ರಾಮೀಣ ಕ್ಷೇತ್ರದ ಶಾಸಕರಾದ ಬಸನಗೌಡ ದದ್ದಲ್ ಅವರು ರಾಯಚೂರ ಗ್ರಾಮೀಣ ಕ್ಷೇತ್ರ ವ್ಯಾಪ್ತಿಯ ದಿನ್ನಿ ಮತ್ತು ನೆಲಹಾಳ ಗ್ರಾಮದಲ್ಲಿ ಆಶ್ರಯ ಯೋಜನೆಯಡಿ 48 ಕುಟುಂಬಗಳಿಗೆ ಪುನರ್ವಸತಿ ನಿವೇಶನ ಹಕ್ಕಪತ್ರಗಳನ್ನು ಮಂಗಳವಾರ ವಿತರಣೆ ಮಾಡಿದ್ದಾರೆ.
ನೆಲಹಾಳ ಗ್ರಾಮದಲ್ಲಿ ನೂತನ 2 ಶಾಲಾ ಕೊಠಡಿಗಳ ಕಾಮಗಾರಿ, ಮುಖ್ಯರಸ್ತೆಗೆ ಹೊಂದಿಕೊಂಡ ಸಿಸಿ ರಸ್ತೆ ಕಾಮಗಾರಿ ಜೊತೆಗೆ ಜಲಧಾರೆ ಯೋಜನೆಯ ಕಾಮಗಾರಿಗಳ ವೀಕ್ಷಣೆ ಮಾಡಿದರು.
ಈ ವೇಳೆ ಶಾಸಕರು ಮಾತನಾಡಿ, ಸುಮಾರು ವರ್ಷಗಳಿಂದ ಗ್ರಾಮದ ನಿವಾಸಿಗಳು ನಿವೇಶನದ ಹಕ್ಕುಪತ್ರಗಳ ಬೇಡಿಕೆ ಇಟ್ಟಿದ್ದರು. ಗ್ರಾಮೀಣ ವಾಸಿಗಳ ಬೇಡಿಕೆಯು ನ್ಯಾಯಯುತವಾಗಿದೆ ಎಂದು ಗ್ರಾಮಸ್ಥರ ಆಶೋತ್ತರಕ್ಕೆ ಸ್ಪಂದಿಸಿ ಕುಟುಂಬಗಳಿಗೆ ಹಕ್ಕು ಪತ್ರ ವಿತರಣೆ ಮಾಡಲಾಗಿದೆ ಎಂದು ತಿಳಿಸಿದರು.
ಗ್ರಾಮಗಳ ಅಭಿವೃದ್ಧಿಗೆ ಬದ್ಧ: ರಾಯಚೂರು ಗ್ರಾಮೀಣ ಕ್ಷೇತ್ರ ವ್ಯಾಪ್ತಿಯ ಪ್ರತಿಯೊಂದು ಹಳ್ಳಿಗಳಿಗು ಕುಡಿಯುವ ನೀರು, ಬೀದಿ ದೀಪ, ಸಾರಿಗೆಯಂತಹ ಎಲ್ಲಾ ಬಗೆಯ ಮೂಲಭೂತ ಸೌಕರ್ಯ ಸಿಗಬೇಕಿದೆ. ಈ ದಿಶೆಯಲ್ಲಿ ತಾವು ಯೋಜಿಸಿ ಕಾರ್ಯಪ್ರವೃತ್ತವಾಗಿದ್ದು ತಮ್ಮ ಕ್ಷೇತ್ರದ ಪ್ರತಿಯೊಂದು ಹಳ್ಳಿಯ ಅಭಿವೃದ್ಧಿಗೆ ಬದ್ಧರಾಗಿರುವುದಾಗಿ ಇದೆ ವೇಳೆ ಶಾಸಕರು ತಿಳಿಸಿದರು.
ಈ ಸಂದರ್ಭದಲ್ಲಿ ಗಿಲ್ಲೇಸೂಗುರ ಬ್ಲಾಕ್ ಅಧ್ಯಕ್ಷರು, ಗ್ರಾಮದ ಹಿರಿಯ ಮುಖಂಡರು, ಸುತ್ತಲಿನ ಗ್ರಾಮಗಳ ಹಿರಿಯ ಮುಖಂಡರು, ನಾಮ ನಿರ್ದೆಶಿತ ಸದಸ್ಯರು, ತಾಲೂಕು ಮಟ್ಟದ ಅಧಿಕಾರಿಗಳು, ಗ್ರಾಮ ಪಂಚಾಯತ್ ಅಧ್ಯಕ್ಷರು, ಸದಸ್ಯರು ಮತ್ತು ಕಾರ್ಯಕರ್ತರು ಹಾಗೂ ಗ್ರಾಮಸ್ಥರು ಉಪಸ್ಥಿತರಿದ್ದರು.
ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್