ವಿಜಯಪುರ, 08 ಸೆಪ್ಟೆಂಬರ್ (ಹಿ.ಸ.) :
ಆ್ಯಂಕರ್ : ರಡ್ಡಿ ಸಮುದಾಯದಲ್ಲಿನ ಉಪ ಪಂಗಡದವರೆಲ್ಲ ಸಾಮಾಜಿಕ, ಶೈಕ್ಷಣಿಕ, ಗಣತಿ ವೇಳೆ ಜಾತಿ ಕಾಲಂನಲ್ಲಿ ಹಿಂದೂ ರಡ್ಡಿ ಎಂದು ಬರೆಸುವಂತೆ ಎರೆಹೊಸಳ್ಳಿಯ ರಡ್ಡಿ ಗುರುಪೀಠದ ವೇಮನಾನಂದ ಸ್ವಾಮೀಜಿಗಳು ಹೇಳಿದರು.
ಸೋಮವಾರ ನಗರದಲ್ಲಿನ ರಡ್ಡಿ ಸಮುದಾಯ ಭವನದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ರಡ್ಡಿ ಸಮುದಾಯದಲ್ಲಿ ಆರು ಉಪ ಪಂಗಡಗಳು ಇದ್ದು, ಎಲ್ಲರ ಆಹಾರ, ಪೂಜಾ ವಿಧಿವಿಧಾನಗಳು, ಅಂತ್ಯಕ್ರಿಯೆಗಳು ಸೇರಿದಂತೆ ಎಲ್ಲವೂ ಬೇರೆ ಬೇರೆ ಆಗಿವೆ. ಆದರೆ ಮೂಲದಲ್ಲಿ ನಾವೆಲ್ಲ ರಡ್ಡಿ ಸಮುದಾಯದವರು ಹಾಗಾಗಿ ಜನಗಣತಿ ವೇಳೆ ಎಲ್ಲರೂ ಹಿಂದೂ ರಡ್ಡಿ ಎಂದು ದಾಖಲಿಸಬೇಕು ಎಂದು ಮನವಿ ಮಾಡಿದರು.
ಹಿಂದೂ ರಡ್ಡಿ ಎಂದು ಬರೆಸುವದರಿಂದ ಸಮುದಾಯದ ಭವಿಷ್ಯದ ಪೀಳಿಗೆಗೆ ಮೀಸಲು ಸೌಲಭ್ಯಗಳು ಸಿಗಲು ಸಾಧ್ಯವಾಗಲಿದೆ ಎನ್ನುವದನ್ನು ಎಲ್ಲರೂ ಅರಿತುಕೊಳ್ಳಬೇಕು ಎಂದು ಹೇಳಿದರು.
ಹಿಂದೂಸ್ತಾನ್ ಸಮಾಚಾರ್ / jyothi deshpande