ವೀರಶೈವ ಮತ್ತು ಲಿಂಗಾಯತ ಒಂದಾಗಬೇಕು
ವಿಜಯಪುರ, 08 ಸೆಪ್ಟೆಂಬರ್ (ಹಿ.ಸ.) : ಆ್ಯಂಕರ್ : ವೀರಶೈವ ಮತ್ತು ಲಿಂಗಾಯತ ಒಂದಾಗಬೇಕು ಎಂಬುದು ಒಂದೆಡೆ ನಿಲುವು ಇದೆ. ಬೇರೆ ಬೇರೆ ಆಗಬೇಕು ಎಂಬುದು ಮತ್ತೊಂದು ನಿಲುವಾಗಿದೆ ಎಂದು ಬೆಂಗಳೂರು ನಿಡುಮಾಮಿಡಿ ಮಹಾಸಂಸ್ಥಾನ ಮಠದ ಶ್ರೀ ನಿಡುಮಾಮಿಡಿ ವೀರಭದ್ರ ಚೆನ್ನಮಲ್ಲ ಸ್ವಾಮೀಜಿ ಹೇಳಿದರು. ವಿಜಯಪುರ ನ
ಶ್ರೀ


ವಿಜಯಪುರ, 08 ಸೆಪ್ಟೆಂಬರ್ (ಹಿ.ಸ.) :

ಆ್ಯಂಕರ್ : ವೀರಶೈವ ಮತ್ತು ಲಿಂಗಾಯತ ಒಂದಾಗಬೇಕು ಎಂಬುದು ಒಂದೆಡೆ ನಿಲುವು ಇದೆ. ಬೇರೆ ಬೇರೆ ಆಗಬೇಕು ಎಂಬುದು ಮತ್ತೊಂದು ನಿಲುವಾಗಿದೆ ಎಂದು ಬೆಂಗಳೂರು ನಿಡುಮಾಮಿಡಿ ಮಹಾಸಂಸ್ಥಾನ ಮಠದ ಶ್ರೀ ನಿಡುಮಾಮಿಡಿ ವೀರಭದ್ರ ಚೆನ್ನಮಲ್ಲ ಸ್ವಾಮೀಜಿ ಹೇಳಿದರು.

ವಿಜಯಪುರ ನಗರದಲ್ಲಿ ನಡೆದ ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿದ ಅವರು, ಬಹುಪಾಲು ಜನರು ವೀರಶೈವ- ಲಿಂಗಾಯತ ಒಂದಾಗಬೇಕು ಎಂದು ಬಯಸುತ್ತಾರೆ. ಕೆಲವರು ಶಿಕ್ಷಣವಂತರು, ನಗರದ ಕೆಲವರು ಪ್ರತ್ಯೇಕವಾಗಿ ಹೋಗಬೇಕು ಎನ್ನುತ್ತಾರೆ. ೧೦೮೦ರಿಂದ ಇದು ಚರ್ಚೆ ಆಗುತ್ತಲೇ ಇದೆ. ಇದನ್ನು ಇಷ್ಟು ದೀರ್ಘದ ವರೆಗೆ ಮುಂದುವರೆಸಬಾರದಿತ್ತು ಎಂದರು.

ಕೇಂದ್ರದಿಂದ ನಡೆಯಲಿರುವ ಜಾತಿ ಗಣತಿ ಒಳಗಾಗಿ ಇದನ್ನು ವೀರಶೈವ ಲಿಂಗಾಯತ ಮಹಾಸಭಾದವರು ಬಗೆಹರಿಸಬೇಕು. ಬೇರೆ ಬೇರೆ ವರ್ಗದವರಲ್ಲಿ ಮತದಾನವನ್ನು ಏರ್ಪಡಿಸಿ ಇದಕ್ಕೆ ಪರಿಹಾರ ಕಂಡುಕೊಳ್ಳಬೇಕು ಎಂದರು.

ಸಮಾಜದ ಹಿತದೃಷ್ಠಿಯಿಂದ ವೀರಶೈವ ಲಿಂಗಾಯತ ಮಹಾಸಭೆ ಈ ಕೆಲಸ ಮಾಡಬೇಕು. ೧೨ನೇ ಶತಮನಾದಲ್ಲಿ‌ ಮೊದಲ ಕಾಲಘಟ್ಟದಲ್ಲಿ ಹಾಗೂ ೧೬ನೇ ಶತಮಾನದಲ್ಲಿ ಎರಡನೇ ಕಾಲಘಟ್ಟದಲ್ಲಿ ಈ ಸಮಸ್ಯೆ ಇತ್ತು. ಇದೀಗ ಮೂರನೇ ಕಾಲಘಟ್ಟದಲ್ಲಿ ಮತ್ತೆ ಈ ಸಮಸ್ಯೆ ಕಾಣಿಸಿಕೊಂಡಿದೆ. ೧೯೭೫ರ ನಂತರ ಈ ಸಮಸ್ಯೆ ಬಗೆಹರಿಸುವ ಪ್ರಯತ್ನ ಆಗಿಲ್ಲ, ಈಗಲಾದರೂ ವೀರಶೈವ ಲಿಂಗಾಯತ ಮಹಾಸಭಾ ಇದನ್ನು ಬಗೆಹರಿಸಬೇಕು ಎಂದರು.

ವೀರಶೈವ ಲಿಂಗಾಯತ ಹಿಂದೂ ಧರ್ಮದ ಅಂಗವಲ್ಲ ಇದು ಸ್ವತಙತ್ರ ಧರ್ಮ, ಹಾಗಂತ ಇದು ಹಿಂದೂ ವಿರೋಧಿಯಲ್ಲ. ಹಿಂದೂ ಧರ್ಮದ ಬಹುಸಂಖ್ಯಾತ ಜನರು ಶಿವನ ಭಕ್ತರಾಗಿದ್ದಾರೆ, ವೀರಶೈವ ಲಿಂಗಾಯತರು ಶಿವನ ಭಕ್ತರು. ಹಿಂದೂ ಧರ್ಮವಲ್ಲ, ಅದು ಹಿಂದೂ ಸಂಸ್ಕ್ರತಿ ಇದೆ. ಆರ್ಯ ಮತ್ತು ದ್ರಾವಿಡ ಧರ್ಮಗಳ ಸಂಸ್ಕ್ರತಿಯ ಸಂಗಮವೇ ಈ ಹಿಂದೂ ಸಂಸ್ಕ್ರತಿಯಾಗಿದೆ ಎಂದರು.

ಈಗ ರಾಜ್ಯ ಸರ್ಕಾರ ಜಾತಿ ಗಣತಿಯನ್ನು ಮತ್ತೊಮ್ಮೆ ಮಾಡುವ ಸಂದರ್ಭದಲ್ಲಿ ಸಮಸ್ಯೆ ಉದ್ಭವ ಆಗಿದೆ. ಬಸವಣ್ಣನವರ ಸಾಮಾಜಿಕ, ಧರ್ಮಿಕ ಆದರ್ಶಗಳನ್ನು ಪಾಲನೆ ಮಾಡಲು ಆಗುತ್ತದಾ?, ಅದನ್ನು ಪಾಲನೆ ಮಾಡಿದರೆ ಅವರು ಮಹಾನ ಪುರುಷರಾಗುತ್ತಾರೆ. ಇದನ್ನು ಲಾಭಕ್ಕಾಗಿ, ರಾಜಕೀಯವಾಗಿ ಬಳಕೆ ಆಗುತ್ತಿರುವುದು ನೋವಿನ ಸಂಗತಿ ಆಗಿದೆ ಎಂದರು.

ಇನ್ನು ಬಾನು‌ ಮುಷ್ತಾಕ ವಿಚಾರದಲ್ಲಿ

ಮೈಸೂರಿನ ದಸರಾ ಉತ್ಸವ ಎನ್ನುವುದು ನಾಡ ಉತ್ಸವವಾಗಿದೆ. ಕನ್ನಡ ನಾಡು ನುಡಿಗಾಗಿ ಶ್ರಮಿಸಿದ ಸಾಧಕರು ಯಾರೇ ಆಗಿದ್ದರು ಅವರು ಒಪ್ಪಿಕೊಂಡು ಪಾಲ್ಗೊಳ್ಳುವುದಾದರೆ ಅದನ್ನು ಸ್ವೀಕಾರ ಮಾಡಬೇಕು, ವಿರೋಧ ಮಾಡಬಾರದು. ಹಿಂದು, ಮುಸ್ಲಿಂ, ಜೈನ್, ಬೌಧ್ದ ಯಾರೇ ಇರಲಿ ಸಾಧಕರು ಪಾಲ್ಗೊಳ್ಳುವುದು ತಪ್ಪಿಲ್ಲ. ರಾಜಕೀಯ ಪಕ್ಷಗಳು ತಮ್ಮ ಸ್ವಾರ್ಥಕ್ಕಾಗಿ ಕೋಮುವಾದವನ್ನು ಹುಟ್ಟುಹಾಕಿದ್ದಾರೆ. ಕೋಮುವಾದಲ್ಲಿ ಹಿಂದೆ ಜನರು ಭಾಗವಹಿಸುತ್ತಿರಲಿಲ್ಲ. ರಾಜಕೀಯ ಪಕ್ಷಗಳು ಕೋಮುವಾದ ಸೃಷ್ಠಿಸಿ ಜನರನ್ನು ಭಾಗವಹಿಸಬೇಕು ಎಂಬ ವಾತಾವರದ ಸೃಷ್ಠಿಸಿವೆ. ಹಿಂದೂ ಕೋಮವಾದವಾಗಿರಲಿ, ಮುಸ್ಲಿಂ ಕೋಮುವಾದವಾಗಿರಲಿ ಇದನ್ನು ಮಾಡಬಾರದು. ಇದು ದೇಶಕ್ಕೆ ಮಾರಕ ಎಂದರು.

ಈ ವೇಳೆಯಲ್ಲಿ

ಆಡಳಿತ ಮಂಡಳಿ‌ ನಿರ್ದೇಶಕರು ಎಸ್ ಎಸ್ ಪಾಟೀಲ, ಕಾರ್ಯದರ್ಶಿ ಆರ್ ಎಸ್ ಪಾಟೀಲ, ಸಹ ಪ್ರಧಾನ ಕಾರ್ಯದರ್ಶಿ ಪ್ರಭು ಬೆಳ್ಳಿ, ಪ್ರಧಾನ ಉಪಸ್ಥಿತರಿದ್ದರು.

ಹಿಂದೂಸ್ತಾನ್ ಸಮಾಚಾರ್ / jyothi deshpande


 rajesh pande