ಸಾಣೇಹಳ್ಳಿ ಪಂಡಿತರಾಧ್ಯ ಶಿವಾಚಾರ್ಯ ಶ್ರೀಗಳು ಕೂಡಲೇ ಕ್ಷಮೆ ಯಾಚಿಸಬೇಕು
ವಿಜಯಪುರ, 08 ಸೆಪ್ಟೆಂಬರ್ (ಹಿ.ಸ.) : ಆ್ಯಂಕರ್ : ಜಂಗಮ ಸಮುದಾಯದ ಕುರಿತು ಅವಹೇಳನಕಾರಿ ಹೇಳಿಕೆ ನೀಡಿರುವ ಸಾಣೇಹಳ್ಳಿ ಪಂಡಿತರಾಧ್ಯ ಶಿವಾಚಾರ್ಯ ಶ್ರೀಗಳು ಕೂಡಲೇ ಕ್ಷಮೆ ಯಾಚಿಸಬೇಕೆಂದು ಜಿಲ್ಲಾ ಜಂಗಮರ ಕ್ಷೇಮಾಭಿವೃದ್ದಿ ಸಂಘದ ಅಧ್ಯಕ್ಷ ವಿ.ವಿ.ಚೌಕಿಮಠ ಹೇಳಿದರು. ಸೋಮವಾರ ನಗರದಲ್ಲಿ ಸುದ್ದಿಗೋಷ್ಠಿಯಲ್
ಶ್ರೀ


ವಿಜಯಪುರ, 08 ಸೆಪ್ಟೆಂಬರ್ (ಹಿ.ಸ.) :

ಆ್ಯಂಕರ್ : ಜಂಗಮ ಸಮುದಾಯದ ಕುರಿತು ಅವಹೇಳನಕಾರಿ ಹೇಳಿಕೆ ನೀಡಿರುವ ಸಾಣೇಹಳ್ಳಿ ಪಂಡಿತರಾಧ್ಯ ಶಿವಾಚಾರ್ಯ ಶ್ರೀಗಳು ಕೂಡಲೇ ಕ್ಷಮೆ ಯಾಚಿಸಬೇಕೆಂದು ಜಿಲ್ಲಾ ಜಂಗಮರ ಕ್ಷೇಮಾಭಿವೃದ್ದಿ ಸಂಘದ ಅಧ್ಯಕ್ಷ ವಿ.ವಿ.ಚೌಕಿಮಠ ಹೇಳಿದರು.

ಸೋಮವಾರ ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಜಂಗಮ ಸ್ವಾಮಿಗಳಲ್ಲಿ ವಿವೇಕ ಕಡಿಮೆ ಎಂದು ಹೇಳಿದ ಶ್ರೀಗಳ ಮಾತು ಬಾಲಿಷತನದಿಂದ ಕೂಡಿದೆ. ಅವರ ಹೇಳಿಕೆ ಖಂಡನಾರ್ಹವಾಗಿದೆ. ಬಸವ ತತ್ವದ ಪ್ರಚಾರಕರಾಗಿ ಬಸವತತ್ವದ ಬಗ್ಗೆ ಮಾತನಾಡಲು ನಮಗೆ ಯಾವುದೇ ಆಕ್ಷೇಪಣೆ ಇಲ್ಲ. ಆದರೆ ಜಂಗಮ ಸಮುದಾಯಕ್ಕೆ ಅವಮಾನವಾಗುವ ರೀತಿಯಲ್ಲಿ ಪದ ಬಳಿಕೆ ಮಾಡಿರುವುದು ತಪ್ಪು. ಹಾಗಾಗಿ ಅವರು ತಮ್ಮ ಹೇಳಿಕೆ ಹಿಂಪಡೆದು ಜಂಗಮ ಸಮಾಜದ ಕ್ಷಮೆ ಕೋರಬೇಕೆಂದು ಒತ್ತಾಯಿಸಿದರು.

ಒಂದೊಮ್ಮೆ ತಮ್ಮ ಹೇಳಿಕೆಗಳನ್ನು ಹೀಗೆ ಮುಂದುವರೆಸಿದ್ದಲ್ಲಿ ಜಂಗಮ ಸಮಾಜ ಕಾನೂನು ಕ್ರಮಕ್ಕೆ ಹಿಂಜರಿಯುವುದಿಲ್ಲ ಎಂದು ಎಚ್ಚರಿಕೆ ನೀಡಿದರು.

ಸುದ್ದಿಗೋಷ್ಠಿಯಲ್ಲಿ ಪ್ರಭುಸ್ವಾಮಿ ಸರಗಣಾ ಚಾರಿ, ಕಸ್ತೂರಿಮಠದ ಓಹಿಲೇಶ್ವರ ಸ್ವಾಮೀಜಿ, ಬಸವರಾಜ ಹಿರೇಮಠ, ಮುರುಗೇಶ ನಿಂಬಲ ಗುಂದಿ, ಎಂ.ಎನ್.ಪುರಾಣಿಕಮಠ ಇದ್ದರು.

ಹಿಂದೂಸ್ತಾನ್ ಸಮಾಚಾರ್ / jyothi deshpande


 rajesh pande