ಕೊಪ್ಪಳ, 08 ಸೆಪ್ಟೆಂಬರ್ (ಹಿ.ಸ.) :
ಆ್ಯಂಕರ್ : ಕೊಪ್ಪಳ ಜಿಲ್ಲೆಯ ಕ್ರೀಡಾಪಟುಗಳು ಜಿಲ್ಲಾ, ವಿಭಾಗ ಮತ್ತು ರಾಜ್ಯ ಮಟ್ಟದ ದಸರಾ ಕ್ರೀಡಾಕೂಟಗಳಲ್ಲಿ ಭಾಗವಹಿಸಿ ಪದಕ ವಿಜೇತರಾಗಿ ನಮ್ಮ ಕೊಪ್ಪಳ ಜಿಲ್ಲೆಯ ಕೀರ್ತಿ ಹೆಚ್ಚಿಸುತ್ತಾರೆಂದು ಕೊಪ್ಪಳ ವಿಧಾನ ಪರಿಷತ್ ಸದಸ್ಯರಾದ ಹೇಮಲತಾ ನಾಯಕ ಅವರು ಹೇಳಿದ್ದಾರೆ.
ಕೊಪ್ಪಳ ಜಿಲ್ಲಾ ಕ್ರೀಡಾಂಗಣದಲ್ಲಿ ನಡೆದ 2025-26ನೇ ಸಾಲಿನ ಕೊಪ್ಪಳ ಜಿಲ್ಲಾ ಮಟ್ಟದ ದಸರಾ ಕ್ರೀಡಾಕೂಟವನ್ನು ಉದ್ದೇಶಿಸಿ ಅವರು ಮಾತನಾಡಿದರು.
ಕೊಪ್ಪಳ ಜಿಲ್ಲಾ ಮಟ್ಟದ ದಸರಾ ಕ್ರೀಡಾಕೂಟದಲ್ಲಿ ಜಿಲ್ಲೆಯ 7 ತಾಲ್ಲೂಕುಗಳಿಂದ ಸುಮಾರು 900 ರಿಂದ 1000 ಕ್ರೀಡಾಪಟುಗಳು ಭಾಗವಹಿಸಿದ್ದರು. ಈ ಕ್ರೀಡಾಕೂಟಗಳಲ್ಲಿ ಅಥ್ಲೆಟಿಕ್ಸ್ ಮತ್ತು ಗುಂಪು ಕ್ರೀಡೆಗಳು ಹಾಗೂ ಆಯ್ಕೆ ಕ್ರೀಡೆಗಳಾದ ಟೆನ್ನೀಸ್, ಈಜು, ನೆಟ್‌ಬಾಲ್ ಪಂದ್ಯಾವಳಿಗಳು ಜರುಗಿದವು.
ಶನಿವಾರ ಆಯೋಜಿಸಲಾದ ಜಿಲ್ಲಾ ಮಟ್ಟದ ದಸರಾ ಕ್ರೀಡಾಕೂಟಗಳಲ್ಲಿ ಪುರುಷ ವಿಭಾಗದಲ್ಲಿ ವಿಜೇತರಾದ ಕ್ರೀಡಾಪಟುಗಳ ವಿವರ ಇಂತಿದೆ. 100ಮೀ. ಓಟದಲ್ಲಿ ಪ್ರಥಮ ಸ್ಥಾನ ಶ್ರೀನಿವಾಸ, ದ್ವಿತೀಯ-ವಿಜಯಕುಮಾರ. 200ಮೀ. ಓಟದಲ್ಲಿ ಪ್ರಥಮ ಸ್ಥಾನ ಬಸವರಾಜ, ದ್ವಿತೀಯ-ಆಂಜನೇಯ. 400ಮೀ. ಓಟದಲ್ಲಿ ಪ್ರಥಮ ಸ್ಥಾನ ಮಂಜುನಾಥ, ದ್ವಿತೀಯ-ಅಭಿಲಾಷ್. 800ಮೀ. ಓಟದಲ್ಲಿ ಪ್ರಥಮಸ್ಥಾನ ಮಂಜುನಾಥ, ದ್ವಿತೀಯ-ಶ್ರೀನಿವಾಸ. 1500ಮೀ. ಓಟದಲ್ಲಿ ಪ್ರಥಮ-ಚನ್ನಗೌಡ ದ್ವಿತೀಯ-ಶಿವಶಾಂತ. 5000ಮೀ. ಓಟದಲ್ಲಿ ಪ್ರಥಮ-ಕನಕಪ್ಪ, ದ್ವಿತೀಯ-ಮುತ್ತಣ್ಣ. 10000ಮೀ. ಓಟದಲ್ಲಿ ಪ್ರಥಮ ಸ್ಥಾನ ಪ್ರಶಾಂತ, ದ್ವಿತೀಯ-ಸಂತೋಷ. 110ಮೀ. ಹರ್ಡಲ್ಸ್ನಲ್ಲಿ ಪ್ರಥಮ-ನಾಗರಾಜ, ದ್ವಿತೀಯ-ಯಮನೂರು. 4*100 ಮತ್ತು 4*400ರಿಲೇ ಓಟಗಳಲ್ಲಿ ಪ್ರಥಮಸ್ಥಾನ ಶ್ರೀನಿವಾಸರ ತಂಡ, ದ್ವಿತೀಯ-ಭರತಕುಮಾರ ತಂಡ. ಗುಂಡು ಎಸೆತ ಪ್ರಥಮ ಅಭಿಷೇಕ, ದ್ವಿತೀಯ-ರಾಘವೇಂದ.್ರ ಚಕ್ರ ಎಸೆತ ಪ್ರಥಮ-ದಾವಲ್‌ಸಾಬ, ದ್ವಿತೀಯ- ಅಭಿಷೇಕ. ಭಲ್ಲೇ ಎಸೆತ ಪ್ರಥಮ ಪ್ರವೀಣಕುಮಾರ, ದ್ವಿತೀಯ-ಮುತ್ತಣ್ಣ. ತ್ರಿವಿಧ ಜಿಗಿತದಲ್ಲಿ ಪ್ರಥಮ-ಉಮೇಶ, ದ್ವಿತೀಯ- ಚೇತನ. ಉದ್ದ ಜಿಗಿತದಲ್ಲಿ ಪ್ರಥಮ-ಚೇತನ, ದ್ವಿತೀಯ- ನಾಗರಾಜ. ಎತ್ತರ ಜಿಗಿತದಲ್ಲಿ ಪ್ರಥಮ- ಶಶಿಕಾಂತ, ದ್ವಿತೀಯ- ಸಾಯಿತೇಜ. ವಾಲಿಬಾಲ್‌ನಲ್ಲಿ ಪ್ರಥಮಸ್ಥಾನ ಸಂದೀಶನ ತಂಡ. ಖೋ-ಖೋ ಆಟದಲ್ಲಿ ಪ್ರಥಮ ಸ್ಥಾನ ಬಸವರಾಜ ತಂಡ ಹಾಗೂ ಕಬಡ್ಡಿಯಲ್ಲಿ ಪ್ರಥಮ ಸ್ಥಾನ ಯಮನಪ್ಪ ಕಾರಟಗಿ ಅವರ ತಂಡ. ಥ್ರೋಬಾಲ್‌ನಲ್ಲಿ ಪ್ರಥಮಸ್ಥಾನ ಅನಿಲ್ ಕುಮಾರ ತಂಡ ಮತ್ತು ಹ್ಯಾಂಡಬಾಲ್‌ನಲ್ಲಿ ಪ್ರಥಮ ಸ್ಥಾನ ಅಜಯ್ ಗಂಗಾವತಿ ಅವರ ತಂಡ. ಬಾಲ್ ಬ್ಯಾಡ್ಮಿಂಟನ್ ಪ್ರಥಮ-ಮದನ್ ಕುಮಾರ ತಂಡ. ಬಾಸ್ಕೆಟ್ ಬಾಲ್ ಪ್ರಥಮ- ನಿಖಿಲ್ ಕುಮಾರ ತಂಡ. ನೆಟ್‌ಬಾಲ್ ಪ್ರಥಮ-ಮಂಜುನಾಥ ತಂಡ. ಶಟಲ್ ಬ್ಯಾಡ್ಮಿಂಟನ್(ಸಿAಗಲ್ಸ್) ನಲ್ಲಿ ಪ್ರಥಮ-ಎಸ್.ರಾಯ್ಕರ್, ದ್ವಿತೀಯ- ಆಯುಷ್ ಶಟಲ್. ಬ್ಯಾಡ್ಮಿಂಟನ್(ಡಬಲ್ಸ್) ಪ್ರಥಮ-ತಿಲಕ್ ಕುಮಾರ್ ಹಾಗೂ ರಾಜೇಶ್, ದ್ವಿತೀಯ-ಆಯುಷ ಹಾಗೂ ಅಪ್ಪಾಜಿಗೌಡ. ಟೇಬಲ್ ಟೆನ್ನೀಸ್(ಸಿಂಗಲ್ಸ್) ಪ್ರಥಮ–ವರುಣ, ದ್ವಿತೀಯ-ಮಾರುತಿ. ಟೇಬಲ್ ಟೆನ್ನೀಸ್(ಡಬಲ್ಸ್)ಪ್ರಥಮ- ಕುಶಾನ್ ಪಾಟೀಲ್ ಹಾಗೂ ಗೌರೇಶ, ದ್ವಿತೀಯ- ಅನಿಲ್ ಕುಮಾರ್ ಹಾಗೂ ವರುಣ. ಫುಟ್‌ಬಾಲ್ ಪ್ರಥಮ ಸ್ಥಾನ ಯಲಬುರ್ಗಾದ ಸಂದೀಪ್ ಹಾಗೂ ತಂಡ, ಕುಸ್ತಿ-92ಕೆ.ಜಿ ಯಲ್ಲಿ ಹುಲುಗಪ್ಪ , 63ಕೆ.ಜಿಯಲ್ಲಿ ಶರಣಪ್ಪ, 57ಕೆ.ಜಿಯಲ್ಲಿ ಮಂಜುನಾಥ, ಈಜು ಆಟದಲ್ಲಿ 100ಮೀಫ್ರೀಸ್ಟೆöÊಲ್ ಪ್ರಥಮ-ವಿನೋದ, ದ್ವಿತೀಯ-ಗವೀಶ್. 200ಮೀಫ್ರೀಸ್ಟೆöÊಲ್ ಪ್ರಥಮ-ಕೆ.ಪ್ರಕಾಶ್, ದ್ವಿತೀಯ-ವಿನೋದ. 100ಮೀ ಬ್ಯಾಕ್ ಸ್ಟೊçÃಕ್ ಪ್ರಥಮ-ನಾಗನಗೌಡ, ದ್ವಿತೀಯ-ಗವೀಶ್. 400ಮೀಫ್ರೀಸ್ಟೆöÊಲ್-ದರ್ಪಣ ಭಾರ ಎತ್ತುವ ಸ್ಪರ್ಧೆಯಲ್ಲಿ ಅವಿನಾಶ(110ಕೆ.ಜಿ), ಸಾಗರ್(74ಕೆ.ಜಿ) ಉಮೇಶ(63ಕೆ.ಜಿ) ಸಾಂಪ್ರಾದಾಯಿಕ ಯೋಗಾಸನದಲ್ಲಿ ಪ್ರಥಮ-ಕೆ.ಪ್ರಭಂಜನ್, ದ್ವಿತೀಯ-ಮಧುಸೂಧನ ರೆಡ್ಡಿ, ಕಲಾತ್ಮಕ ಯೋಗಾಸನ(ವೈಯಕ್ತಿಕ)ಪ್ರಥಮ-ವಿಕ್ರಮ, ದ್ವಿತೀಯ ಮಧುಸೂಧನ ರೆಡ್ಡಿ. ಕಲಾತ್ಮಕ ಯೋಗಾಸನ(ಜೋಡಿ) ಪ್ರಥಮ – ಆಂಜನೇಯ ಹಾಗೂ ಮಧುಸೂಧನ ರೆಡ್ಡಿ. ತಾಳಬದ್ದ ಯೋಗಾಸನ –ವಿಕ್ರಮ ಹಾಗೂ ಪ್ರಭಂಜನ. ಈ ಎಲ್ಲಾ ಕ್ರೀಡಾಪಟುಗಳು ವಿಜೇತರಾಗಿರುತ್ತಾರೆ.
ಮಹಿಳೆಯರ ವಿಭಾಗ: ಜಿಲ್ಲಾ ಮಟ್ಟದ ದಸರಾ ಕ್ರೀಡಾಕೂಟಗಳಲ್ಲಿ ಮಹಿಳಾ ವಿಭಾಗದಲ್ಲಿ ವಿಜೇತರಾದ ಕ್ರೀಡಾಪಟುಗಳ ವಿವರ ಇಂತಿದೆ. 100ಮೀ. ಓಟದಲ್ಲಿ ಪ್ರಥಮಸ್ಥಾ ರೇಖಾ, ದ್ವಿತೀಯ-ಅನುಸೂಯ. 200ಮೀ. ಓಟ ಪ್ರಥಮ-ಅಕ್ಷತಾ, ದ್ವಿತೀಯ-ರೇಖಾ. 400ಮೀ. ಓಟ ಪ್ರಥಮ-ಸುಶ್ಮಿತಾ, ದ್ವಿತೀಯ-ಅನುಶ್ರೀ. 800ಮೀ.ಓಟ ಪ್ರಥಮ-ಸವಿತಾ, ದ್ವಿತೀಯ-ಸೌಜನ್ಯ. 1500ಮೀ. ಓಟ ಪ್ರಥಮ-ಸೌಜನ್ಯ, ದ್ವಿತೀಯ-ಹೀನಾಕೌಸರ್. 3000ಮೀ. ಓಟ ಪ್ರಥಮ-ಹೀನಾಕೌಸರ್, ದ್ವಿತೀಯ-ಸವಿತಾ. 100ಮೀ. ಹರ್ಡಲ್ಸ್ನಲ್ಲಿ ಪ್ರಥಮ ಅಕ್ಷತಾನಾಗದೇವಿ, ದ್ವಿತೀಯ-ಚಾಂದಬೀ. 4*100ರಿಲೇಯಲ್ಲಿ ಪ್ರಥಮ-ಅಕ್ಷತಾ ಹಾಗೂ ತಂಡ, ದ್ವಿತೀಯ-ಅನಿತಾ ಮತ್ತು ತಂಡ. 4*400ರಿಲೇನಲ್ಲಿ ಪ್ರಥಮ-ಸುಶ್ಮಿತಾ ಅವರ ತಂಡ, ದ್ವಿತೀಯ-ದೀಪಾ ಹಾಗೂ ತಂಡ. ಗುಂಡು ಎಸೆತದಲ್ಲಿ ಪ್ರಥಮ-ಹನುಮವ್ವ, ದ್ವಿತೀಯ-ಪುಷ್ಪಾವತಿ. ಚಕ್ರ ಎಸೆತದಲ್ಲಿ ಪ್ರಥಮ-ಪುಷ್ಪವತಿ, ದ್ವಿತೀಯ-ಶೈಲಾ. ಭಲ್ಲೇ ಎಸೆತದಲ್ಲಿ ಪ್ರಥಮ-ಶೈಲಾ, ದ್ವಿತೀಯ-ಪವಿತ್ರಾ. ತ್ರಿವಿಧ ಜಿಗಿತ ಪ್ರಥಮ-ಅಕ್ಷತಾ, ದ್ವಿತೀಯ-ರಾಧಿಕಾ. ಉದ್ದ ಜಿಗಿತ ಪ್ರಥಮ-ಪವಿತ್ರಾ, ದ್ವಿತೀಯ- ಕಲ್ಪನಾ. ಎತ್ತರ ಜಿಗಿತ ಪ್ರಥಮ-ಶ್ವೇತಾ, ದ್ವಿತೀಯ-ಕಲ್ಪನಾ. ವಾಲಿಬಾಲ್ ಪ್ರಥಮ ಸ್ಥಾನ (ಡಿ.ವೈ.ಇ.ಎಸ್.ಕೊಪ್ಪಳ)ದೀಕ್ಷಿತಾ ಮತ್ತು ತಂಡ. ಖೋ-ಖೋ ಪ್ರಥಮ ಸ್ಥಾನ ಕೊಪ್ಪಳದ ರೇಖಾ ಮತ್ತು ತಂಡ. ಕಬಡ್ಡಿ ಪ್ರಥಮ- ಕೊಪ್ಪಳದ ಅಕ್ಷತಾ ಹಾಗೂ ತಂಡ. ಥ್ರೋಬಾಲ್ ಪ್ರಥಮ ಸ್ಥಾನ ಕುಕನೂರಿನ ಅಪೂರ್ವ ಮತ್ತು ತಂಡ. ಹ್ಯಾಂಡಬಾಲ್ ಪ್ರಥಮ-ಶಿವಾನಿ ಹಾಗೂ ತಂಡ. ಬಾಲ್ ಬ್ಯಾಡ್ಮಿಂಟನ್ ಪ್ರಥಮ-ಅಶ್ವಿನಿ ಹಾಗೂ ತಂಡ. ನೆಟ್‌ಬಾಲ್ ಪ್ರಥಮ-ಸಾಹಿತ್ಯ ಗೊಂಡಬಾಳ. ಟೇಬಲ್ ಟೆನ್ನೀಸ್(ಸಿಂಗಲ್ಸ್) ಪ್ರಥಮ–ಅಕ್ಷತಾ ನಾಗದೇವಿ, ದ್ವಿತೀಯ-ಚೈತ್ರಾ. ಟೇಬಲ್ ಟೆನ್ನೀಸ್(ಡಬಲ್ಸ್) ಪ್ರಥಮ- ಅಕ್ಷತಾ ನಾಗದೇವಿ ಹಾಗೂ ಸೌಭಾಗ್ಯ, ದ್ವಿತೀಯ- ಚೈತ್ರಾ ಅಪೂರ್ವ. ಕುಸ್ತಿ-76ಕೆ.ಜಿ-ಸತ್ಯಾಶ್ರೀ, 59ಕೆ.ಜಿ-ವಿಜಯಲಕ್ಷಿö್ಮÃ, ಕೆ. 57ಕೆ.ಜಿ-ಅಶ್ವಿನಿ, 55ಕೆ.ಜಿ-ವಿಜಯಲಕ್ಷಿö್ಮÃ ಹೆಚ್., 50ಕೆ.ಜಿ.- ಡಿ. ಸಿಂಧು. ಭಾರ ಎತ್ತುವ ಸ್ಪರ್ಧೆ-ಅವಿನಾಶ(110ಕೆ.ಜಿ), ಸಾಗರ್(74ಕೆ.ಜಿ) ಉಮೇಶ(63ಕೆ.ಜಿ) ಸಾಂಪ್ರಾದಾಯಿಕ ಯೋಗಾಸನ ಪ್ರಥಮ-ಕೊಪ್ಪಳದ ತನ್ಮಯ್ ಪಾಟೀಲ್, ದ್ವಿತೀಯ- ಯಲಬುರ್ಗಾದ ಅಮೃತಾ. ಕಲಾತ್ಮಕ ಯೋಗಾಸನ(ವೈಯಕ್ತಿಕ)ಪ್ರಥಮ-ತನ್ಮಯ್ ಪಾಟೀಲ್, ದ್ವಿತೀಯ- ಯಲಬುರ್ಗಾದ ಅಮೃತಾ. ಕಲಾತ್ಮಕ ಯೋಗಾಸನ(ಜೋಡಿ)ಪ್ರಥಮ – ತನ್ಮಯ್ ಮತ್ತು ತಸ್ವೀನಿ. ತಾಳಬದ್ದ ಯೋಗಾಸನ -ಸ್ನೇಹಾ ಮತ್ತು ಆರಾಧ್ಯ ಈ ಎಲ್ಲಾ ಕ್ರೀಡಾಪಟುಗಳು ವಿಜೇತರಾಗಿರುತ್ತಾರೆ. ಎಂದು ಕೊಪ್ಪಳ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಸಹಾಯಕ ನಿರ್ದೇಶಕರು ತಿಳಿಸಿದ್ದಾರೆ.
ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್