ಅಂಧ ವಿದ್ಯಾರ್ಥಿಗಳು ಸೇರಿ ಹದಿನೈದು ಜನರನ್ನು ಕಚ್ಚಿ ಗಾಯಗೊಳಿಸಿದ ಹುಚ್ಚು ನಾಯಿ
ವಿಜಯಪುರ, 08 ಸೆಪ್ಟೆಂಬರ್ (ಹಿ.ಸ.) : ಆ್ಯಂಕರ್ : ಹುಚ್ಚುನಾಯಿಯೊಂದು ಅಂಧ ವಿದ್ಯಾರ್ಥಿಗಳನ್ನು ಸೇರಿ ಒಟ್ಟು ಹದಿನೈದು ಜನರನ್ನು ಕಡಿದು ಗಂಭೀರವಾಗಿ ಗಾಯಗೊಳಿಸಿರುವ ಘಟನೆ ಬಾಗಲಕೋಟೆಯ ನವನಗರದ ಸಜೀವಿ ಅಂಧ ಮಕ್ಕಳ ಶಾಲೆಯಲ್ಲಿ ನಡೆದಿದೆ. ಗಾಯಗೊಂಡ ವಿದ್ಯಾರ್ಥಿಗಳನ್ನು ಹಾಗೂ ಶಾಲೆಯ ಸಿಬ್ಬಂದಿಗಳು ಮತ್ತು
ನಾಯಿ


ವಿಜಯಪುರ, 08 ಸೆಪ್ಟೆಂಬರ್ (ಹಿ.ಸ.) :

ಆ್ಯಂಕರ್ : ಹುಚ್ಚುನಾಯಿಯೊಂದು

ಅಂಧ ವಿದ್ಯಾರ್ಥಿಗಳನ್ನು ಸೇರಿ ಒಟ್ಟು ಹದಿನೈದು ಜನರನ್ನು ಕಡಿದು ಗಂಭೀರವಾಗಿ ಗಾಯಗೊಳಿಸಿರುವ ಘಟನೆ ಬಾಗಲಕೋಟೆಯ ನವನಗರದ ಸಜೀವಿ ಅಂಧ ಮಕ್ಕಳ ಶಾಲೆಯಲ್ಲಿ ನಡೆದಿದೆ.

ಗಾಯಗೊಂಡ ವಿದ್ಯಾರ್ಥಿಗಳನ್ನು ಹಾಗೂ ಶಾಲೆಯ ಸಿಬ್ಬಂದಿಗಳು ಮತ್ತು ಇತರರನ್ನು ನವನಗರದ ಜಿಲ್ಲಾಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗುತ್ತಿದೆ. ಕಳೆದ ದಿನವೂ ಹುಚ್ಚುನಾಯಿ ಅಂಧ ವಿದ್ಯಾರ್ಥಿನಿಯನ್ನು ಕಡಿದು ಗಾಯಗೊಳಿಸಿದೆ. ಇಂದು‌ ಮತ್ತೆ ಹುಚ್ಚು ನಾಯಿ ದಾಳಿಯಿಂದ ಹದಿನೈದ ಜನರನ್ನ ಕಚ್ಚಿ ಗಾಯಗೊಳಿಸಿದೆ.

ಬಾಗಲಕೋಟೆ ನಗರದಲ್ಲಿ ಬೀದಿ ನಾಯಿಗಳ ಹಾವಳಿ ಹೆಚ್ಚಾಗಿದ್ದು, ನವನಗರದ ಸಜೀವಿ ಅಂಧ ಮಕ್ಕಳ ಶಾಲೆಯ ಸುತ್ತಲೂ ಬೀದಿ ನಾಯಿಗಳ ಕಾಟ ಜಾಸ್ತಿಯಾಗಿದೆ. ಅದರಲ್ಲೂ ಹುಚ್ಚು ನಾಯಿಯೊಂದರ ಹಾವಳಿ ಹೆಚ್ಚಾಗಿದ್ದು, ಅಂಧ ಮಕ್ಕಳನ್ನು ಕಡಿದು ಗಾಯಗೊಳಿಸುತ್ತಿದೆ.

ಈ ಕುರಿತು ಸಜೀವಿ ಅಂಧ ಮಕ್ಕಳ ಶಾಲೆಯ ಶಿಕ್ಚಕಿ ಹೇಮಾವತಿ ಅವರು ಮಾತನಾಡಿದ್ದು, ಸಂಬಂಧಿಸಿದ ನಗರಸಭೆಯವರು ಬೀದಿನಾಯಿಗಳ ಹಾವಳಿಗೆ ಬ್ರೆಕ್ ಹಾಕಬೇಕು ಎಂದು ಮನವಿ ಮಾಡಿದ್ದಾರೆ.

ಹಿಂದೂಸ್ತಾನ್ ಸಮಾಚಾರ್ / jyothi deshpande


 rajesh pande