ರಾಯಚೂರಿನ ವಿಜ್ಞಾನ ಕೇಂದ್ರದಲ್ಲಿ ಚಂದ್ರಗ್ರಹಣ ವೀಕ್ಷಣಾ ಮಹೋತ್ಸವ
ರಾಯಚೂರು, 08 ಸೆಪ್ಟೆಂಬರ್ (ಹಿ.ಸ.) : ಆ್ಯಂಕರ್ : ನಗರದ ವಿಜ್ಞಾನ ಕೇಂದ್ರದಲ್ಲಿ ಸೆ.7ರ ಸಂಜೆ ವೇಳೆಯಲ್ಲಿ ವಿದ್ಯಾರ್ಥಿ, ಯುವಜನರು, ನಾಗರಿಕರು ಒಳಗೊಂಡು ದೊಡ್ಡ ಸಂಖ್ಯೆಯಲ್ಲಿ ಸೇರಿದ್ದ ಜನರು ದೂರದರ್ಶಕಗಳ ಮೂಲಕ ಚಂದ್ರಗ್ರಹಣದ ವೀಕ್ಷಣೆ ನಡೆಸಿದ್ದಾರೆ. ಮಹಾನಗರ ಪಾಲಿಕೆಯ ಆಯುಕ್ತ ಜುಬಿನ್ ಮೊಹಪಾತ್
ರಾಯಚೂರಿನ ವಿಜ್ಞಾನ ಕೇಂದ್ರದಲ್ಲಿ ಚಂದ್ರಗ್ರಹಣ ವೀಕ್ಷಣಾ ಮಹೋತ್ಸವ


ರಾಯಚೂರಿನ ವಿಜ್ಞಾನ ಕೇಂದ್ರದಲ್ಲಿ ಚಂದ್ರಗ್ರಹಣ ವೀಕ್ಷಣಾ ಮಹೋತ್ಸವ


ರಾಯಚೂರಿನ ವಿಜ್ಞಾನ ಕೇಂದ್ರದಲ್ಲಿ ಚಂದ್ರಗ್ರಹಣ ವೀಕ್ಷಣಾ ಮಹೋತ್ಸವ


ರಾಯಚೂರಿನ ವಿಜ್ಞಾನ ಕೇಂದ್ರದಲ್ಲಿ ಚಂದ್ರಗ್ರಹಣ ವೀಕ್ಷಣಾ ಮಹೋತ್ಸವ


ರಾಯಚೂರು, 08 ಸೆಪ್ಟೆಂಬರ್ (ಹಿ.ಸ.) :

ಆ್ಯಂಕರ್ : ನಗರದ ವಿಜ್ಞಾನ ಕೇಂದ್ರದಲ್ಲಿ ಸೆ.7ರ ಸಂಜೆ ವೇಳೆಯಲ್ಲಿ ವಿದ್ಯಾರ್ಥಿ, ಯುವಜನರು, ನಾಗರಿಕರು ಒಳಗೊಂಡು ದೊಡ್ಡ ಸಂಖ್ಯೆಯಲ್ಲಿ ಸೇರಿದ್ದ ಜನರು ದೂರದರ್ಶಕಗಳ ಮೂಲಕ ಚಂದ್ರಗ್ರಹಣದ ವೀಕ್ಷಣೆ ನಡೆಸಿದ್ದಾರೆ.

ಮಹಾನಗರ ಪಾಲಿಕೆಯ ಆಯುಕ್ತ ಜುಬಿನ್ ಮೊಹಪಾತ್ರ ಅವರ ಮಾರ್ಗದರ್ಶನದಲ್ಲಿ ಈ ಕಾರ್ಯಕ್ರಮವನ್ನು ರಾಯಚೂರು ಮಹಾನಗರ ಪಾಲಿಕೆಯು ವಿಶೇಷವಾಗಿ ರೂಪಿಸಿತ್ತು. ವಿಜ್ಞಾನದ ವಿಶೇಷತೆ, ಜನಸಹಭಾಗಿತ್ವ ಮತ್ತು ನಾಗರಿಕ ಜಾಗೃತಿಯ ಪ್ರತೀಕವಾಗಿ ಕಾರ್ಯಕ್ರಮವು ಗಮನ ಸೆಳೆಯಿತು.

ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆ, ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆ, ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಮತ್ತು ಯುವಜನ ಸೇವಾ ಹಾಗೂ ಕ್ರೀಡಾ ಇಲಾಖೆಗಳ ಸಹಯೋಗದಲ್ಲಿ ಈ ಕಾರ್ಯಕ್ರಮ ನಡೆಯಿತು.

ವಿದ್ಯಾರ್ಥಿಗಳು, ಶಿಕ್ಷಕರು ಮತ್ತು ಸಾರ್ವಜನಿಕರು ಅಪರೂಪದ ಖಗೋಳದ ಘಟನಾವಳಿ ವೀಕ್ಷಿಸಲು ಉತ್ಸಾಹದಿಂದ ಭಾಗವಹಿಸಿದ್ದರು.

ಕಾರ್ಯಕ್ರಮದಲ್ಲಿ 500ಕ್ಕೂ ಹೆಚ್ಚು ಜನರು ಸಕ್ರಿಯ ಭಾಗಿಯಾಗಿ ಕಾರ್ಯಕ್ರಮಕ್ಕೆ ವಿಶೇಷ ಮೆರುಗು ತಂದರು.

ಇದೆ ವೇಳೆ, ವಿಜ್ಞಾನ ವಿಷಯದ ಶಿಕ್ಷಕರು, ತಜ್ಞರು ಚಂದ್ರಗ್ರಹಣದ ವೈಜ್ಞಾನಿಕ ಅಂಶಗಳನ್ನು ಸರಳವಾಗಿ ವಿವರಿಸಿದರು. ಹಲವಾರು ವಿದ್ಯಾರ್ಥಿಗಳು ಮೊದಲ ಬಾರಿಗೆ ದೂರದರ್ಶಕದ ಮೂಲಕ ಚಂದ್ರನ ಬದಲಾದ ಹಂತಗಳನ್ನು ವೀಕ್ಷಿಸಿ ಸಂತಷ ವ್ಯಕ್ತಪಡಿಸಿದರು.

ಮತ್ತಷ್ಟು ಕಾರ್ಯಕ್ರಮಕ್ಕೆ ಯೋಜನೆ: ಇದು ನಗರಕ್ಕಾಗಿ ಯುವಕರು – ಯುವಕರಿಗಾಗಿ ನಗರ ಅಭಿಯಾನದ 7ನೇ ಕಾರ್ಯಕ್ರಮವಾಗಿದೆ. ಕ್ರೀಡೆ, ಫಿಟ್ನೆಸ್, ಕಲೆ ಮತ್ತು ವಿಜ್ಞಾನ ಸೇರಿದಂತೆ ಹಲವು ರಚನಾತ್ಮಕ ಚಟುವಟಿಕೆಗಳಲ್ಲಿ ಯುವಕರನ್ನು ತೊಡಗಿಸಲು ಉದ್ದೇಶಿಸಲಾಗಿದೆ. ಇದುವರೆಗೆ 3,500ಕ್ಕೂ ಹೆಚ್ಚು ಯುವಕರು ಈ ಅಭಿಯಾನದಲ್ಲಿ ಪಾಲ್ಗೊಂಡಿದ್ದು, ಮುಂದಿನ ಎರಡು ತಿಂಗಳು ಇನ್ನಷ್ಟು ಕಾರ್ಯಕ್ರಮಗಳೊಂದಿಗೆ ಇದು ಮುಂದುವರಿಯಲಿದೆ.

ಇಂತಹ ಕಾರ್ಯಕ್ರಮಗಳಿಂದ ಯುವಕರಲ್ಲಿ ವೈಜ್ಞಾನಿಕ ಚಿಂತನೆ ಬೆಳೆಸಲು ಸಹಾಯವಾಗುತ್ತದೆ. ಜೊತೆಗೆ ವಿಜ್ಞಾನ ಕೇಂದ್ರದ ವಿವಿಧ ಘಟಕಗಳ ಬಗ್ಗೆ ಜಾಗೃತಿ ಮೂಡಿಸಲು ಸಹ ನೆರವಾಗುತ್ತದೆ. ಸೆ.7ರ ಸಂಜೆ ವಿಜ್ಞಾನ ಕೇಂದ್ರದಲ್ಲಿ ನೆರೆದ ಜನರ ಆಸಕ್ತಿಯನ್ನು, ಅಲ್ಲಿನ ಚಟುವಟಿಕೆಗಳನ್ನು ಗಮನಿಸಿದಾಗ, ಇಂತಹ ಖಗೋಳಶಾಸ್ತ್ರದ ಪ್ರದರ್ಶನಗಳನ್ನು ಹಾಗೂ ಕಾರ್ಯಕ್ರಮಗಳನ್ನು ಹೆಚ್ಚಿನ ರೀತಿಯಲ್ಲಿ ನಡೆಸಬಹುದು ಎಂದೆನೆಸಿತು. ಅದರಂತೆ ಮು0ದಿನ ದಿನಗಳಲ್ಲಿ ವಿಜ್ಞಾನ, ಖಗೋಳಶಾಸ್ತ್ರ ವಿಷಯಗಳಿಗೆ ಪಾಲಿಕೆಯಿಂದ ಕಾರ್ಯಕ್ರಮಗಳನ್ನು ವಿವಿಧ ಇಲಾಖೆಗಳ ಸಹಯೋಗದಲ್ಲಿ ಆಯೋಜಿಸುವುದಾಗಿ ಇದೆ ವೇಳೆ ಆಯುಕ್ತರಾದ ಜುಬಿನ್ ಮೊಹಪಾತ್ರ ಅವರು ತಿಳಿಸಿದರು.

ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್


 rajesh pande